Site icon Vistara News

Bidar News: ಅಂತಾರಾಜ್ಯ ಅಕ್ರಮ ಸಾಗಾಟ: 15.55 ಲಕ್ಷ ರೂ. ಮೌಲ್ಯದ ಗುಟ್ಕಾ ಜಪ್ತಿ

Illegal Interstate Gutka Transport Arrest of two accused at Basavakalyana

ಬಸವಕಲ್ಯಾಣ: ಮಹಾರಾಷ್ಟ್ರ (Maharashtra) ರಾಜ್ಯಕ್ಕೆ ಅಕ್ರಮವಾಗಿ (Illegal) ಗುಟ್ಕಾ ಸಾಗಿಸುತಿದ್ದ ವಾಹನದ ಮೇಲೆ ದಾಳಿ (Attack) ನಡೆಸಿದ ಪೊಲೀಸರು 15.55 ಲಕ್ಷ ರೂ. ಮೌಲ್ಯದ ಪಾನ್‌ ಮಸಾಲ (ಗುಟ್ಕಾ) ಜಪ್ತಿ ಮಾಡಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ಪಟ್ಟದಲ್ಲಿ ನಡೆದಿದೆ.

ಬೆಂಗಳೂರು ಮೂಲದ ಶಾರುಖ್ ಹಾಗೂ ಹುಮನಾಬಾದ ತಾಲೂಕಿನ ಮರಕುಂದಾ ಗ್ರಾಮದ ನಿವಾಸಿ ಅಬ್ದುಲ್ ಫಯಾಜ್ ಬಂಧಿತ ಆರೋಪಿಗಳಾಗಿದ್ದಾರೆ.

ಕಂಟೇನರ್ ಲಾರಿಯಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಅಕ್ರಮವಾಗಿ ಗುಟ್ಕಾ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೆರೆಗೆ ಬಸವಕಲ್ಯಾಣ ಗ್ರಾಮೀಣ ಠಾಣೆ ಪಿಎಸ್ಐ ಅಂಬ್ರೀಷ್ ವಾಗ್ಮೋಡೆ ನೇತೃತ್ವದ ಪೊಲೀಸ್ ತಂಡ ತಾಲೂಕಿನ ಉಮ್ಮಾಪೂರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 65ರ ಮೇಲೆ ದಾಳಿ ನಡೆಸಿದ್ದಾರೆ,

ಇದನ್ನೂ ಓದಿ: IND vs WI: ಸೂಪರ್​ ಮ್ಯಾನ್​ ರೀತಿ ಹಾರಿ ಸೂಪರ್​ ಕ್ಯಾಚ್​ ಪಡೆದ ಸಿರಾಜ್​

ಅಕ್ರಮವಾಗಿ ಗುಟ್ಕಾ ಸಾಗಿಸುತಿದ್ದ ಒಂದು ಕಂಟೇನರ್ ಲಾರಿ ಹಾಗೂ ಗುಟ್ಕಾ ಪ್ಯಾಕೆಟ್‌ಗಳನ್ನು ಪೋಲಿಸರು ಜಪ್ತಿ ಮಾಡಿಕೊಂಡಿದ್ದಾರೆ.

ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version