Site icon Vistara News

Bidar News: ಬಸವಕಲ್ಯಾಣದ ತಾಳಂಪಳ್ಳಿ ಜನ ಸಂಪರ್ಕ ಕಚೇರಿಗೆ ಸಚಿವ ಈಶ್ವರ ಖಂಡ್ರೆ ಚಾಲನೆ

Minister Eshwara Khandre drives to the Talampalli Public Relations Office in Basavakalyana

ಬಸವಕಲ್ಯಾಣ: ಸಾಮಾಜಿಕ ಸೇವೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಮುಖಂಡ (Congress Leader) ಧನರಾಜ್ ತಾಳಂಪಳ್ಳಿ ಅವರ ನೇತೃತ್ವದಲ್ಲಿ ನೂತನವಾಗಿ ಆರಂಭಿಸಲಾಗಿರುವ ಜನ ಸಂಪರ್ಕ ತಾಲೂಕು ಕೇಂದ್ರ ಕಚೇರಿಯನ್ನು (Public Relations Office) ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ನಗರದ ಹರಳಯ್ಯ ವೃತ್ತದ ಸಮೀಪ ಆರಂಭಿಸಲಾಗಿರುವ ತಾಳಂಪಳ್ಳಿ ಅವರ ಜನಸಂಪರ್ಕ ಕಚೇರಿಗೆ ಆಗಮಿಸಿದ ಸಚಿವ ಈಶ್ವರ ಖಂಡ್ರೆ, ರಿಬ್ಬಿನ್ ಕತ್ತರಿಸುವ ಮೂಲಕ ಕಚೇರಿ ಉದ್ಘಾಟಿಸಿದರು. ಇದೇ ವೇಳೆ ಸಚಿವರಾದ ಈಶ್ವರ ಖಂಡ್ರೆ, ರಹೀಮ್ ಖಾನ್, ಎಂಎಲ್‌ಸಿಗಳಾದ ಚಂದ್ರಶೇಖರ ಪಾಟೀಲ್‌ ಹಾಗೂ ಅರವಿಂದ ಕುಮಾರ್‌ ಅರಳಿ ಅವರನ್ನು ಧನರಾಜ ತಾಳಂಪಳ್ಳಿ ಸನ್ಮಾನಿಸಿ, ಗೌರವಿಸಿದರು. ಇದೇ ವೇಳೆ ಮಾಜಿ ಸೈನಿಕರು ತಮ್ಮ ಬೇಡಿಕೆ ಕುರಿತು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

ಈ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ರಾಜ್ಯದಲ್ಲಿ ನಮ್ಮದೆ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಾರದ ಜನಪರ ಯೋಜನೆಗಳನ್ನು ಜನರಗೆ ಮುಟ್ಟಿಸುವ ಜತೆಗೆ ಜನಜಾಗೃತಿ ಮೂಡಿಸಿ ಪಕ್ಷ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸಲು ಮುಖಂಡರು ಮುಂದಾಗಬೇಕು. ಕೆಲ ತಿಂಗಳಲ್ಲಿ ಎದುರಾಗಲಿರುವ ತಾಪಂ, ಜಿಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕು. ಪಕ್ಷದ ಮುಖಂಡರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಮುಖಂಡ ಧನರಾಜ ತಾಳಂಪಳ್ಳಿ ಮಾತನಾಡಿ, ಶರಣರ ಕಾಯಕ ಭೂಮಿ ಬಸವಕಲ್ಯಾಣ ನಗರದಲ್ಲಿ ರಾಜ್ಯ ಸರ್ಕಾರದಿಂದ 600 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಪ್ರಗತಿಯಲಿದ್ದು, ಕೆಲವೆ ದಿನಗಳಲ್ಲಿ ಇದು ಪೂರ್ಣಗೊಂಡು ಜಗತ್ತಿನ ಗಮನ ಸೆಳೆಯಲಿದೆ. ವಿಶ್ವದ ಜನರು ಬಸವಕಲ್ಯಾಣಕ್ಕೆ ಆಗಮಿಸುವ ದಿನ ಸಮೀಪಿಸಿದೆ. ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಬಸವಕಲ್ಯಾಣ ನಗರದಲ್ಲಿ ವರ್ತುಲ ರಸ್ತೆ, ಒಳ ಚರಂಡಿ, ಅರ್ಧಕ್ಕೆ ಉಳಿದಿರುವ ಶರಣರ ಸ್ಮಾರಕಗಳ ಅಭಿವೃದ್ದಿಗೆ ಆದ್ಯತೆ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: Neeraj Chopra: ಖಂಡಿತವಾಗಿಯೂ 90 ಮೀ. ದೂರ ಜಾವೆಲಿನ್‌ ಎಸೆಯುವೆ; ನೀರಜ್‌ ವಿಶ್ವಾಸ

ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Exit mobile version