ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ವಿವಿಧೆಡೆ ಇತ್ತೀಚೆಗೆ ಸಿಡಿಲು (Lightning) ಬಡಿದು ಎಮ್ಮೆ (Buffalo) ಮತ್ತು ಆಕಳು (cow) ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ರೈತರಿಗೆ (Farmers) ಪರಿಹಾರದ ಚೆಕ್ (Compensation checks) ವಿತರಿಸಿದರು.
ತಾಲೂಕಿನ ಚಾಂಗಲೇರಾ ಗ್ರಾಮದಲ್ಲಿ ನಡೆದ ಚಿಟ್ಟಗುಪ್ಪ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ವಿಠ್ಠಲಪುರ ಗ್ರಾಮದ ರೈತ ಸಾಯಪ್ಪ ಹಾಗೂ ಕಾರಕಪಳ್ಳಿ ಗ್ರಾಮದ ರೈತ ಬಸವರಾಜ ಅವರಿಗೆ ತಲಾ 37,500 ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.
ಇದನ್ನೂ ಓದಿ: Hardik Pandya: ಸಿಕ್ಸರ್ ಬಾರಿಸಿ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ
ಈ ಸಂದರ್ಭದಲ್ಲಿ ಚಿಟ್ಟಗುಪ್ಪ ತಾಪಂ ಇಒ ಅಕ್ರಮ್ ಪಾಷಾ, ಆಡಳಿತ ಅಧಿಕಾರಿ ಶರಣಯ್ಯಾ ಮಠಪತಿ, ಉಪ ತಹಶೀಲ್ದಾರ್ ನಸೀರ್ ಅಹ್ಮದ್, ಕಂದಾಯ ನಿರೀಕ್ಷಕ ಮಹೇಶ್ ಅನಂತವಾಡಕರ್, ಕರಕನಳ್ಳಿ ಪಶುವೈದ್ಯಾಧಿಕಾರಿ ಬಸವರಾಜ, ಬೆಮಳಖೇಡಾ ಪಶುವೈದ್ಯಾಧಿಕಾರಿ ಕಾಶಿನಾಥ ಚಟ್ಟಳ್ಳಿ, ಗ್ರಾಮ ಆಡಳಿತ ಅಧಿಕಾರಿ ನಿಂಗಪ್ಪ, ಗ್ರಾಮ ಆಡಳಿತ ಅಧಿಕಾರಿ ಕೆರೆ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.