ಬೀದರ್: ಗಾಳಿ ಮಳೆಯಿಂದ ಅನಾಹುತ ಸಂಭವಿಸಿ, ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ, ಪರಿಹಾರಧನದ 5 ಲಕ್ಷ ರೂ. ಚೆಕ್ (compensation check) ವಿತರಿಸಿದರು.
ತಾಲೂಕಿನ ಬುಧೇರಾ ಗ್ರಾಮದಲ್ಲಿ ಇತ್ತೀಚೆಗೆ ಗಾಳಿ ಮಳೆಯಲ್ಲಿ ಅವಘಡ ಸಂಭವಿಸಿ ಮೃತಪಟ್ಟ ಕುಮಾರಿ ಪಾಯಲ್ ಅವರ ಕುಟುಂಬಕ್ಕೆ ಶಾಸಕರು ಸಾಂತ್ವನ ಹೇಳಿ, ಪೋಷಕರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಇದನ್ನೂ ಓದಿ: Gruhajyoti Scheme : ಉಚಿತ ವಿದ್ಯುತ್ ನೋಂದಣಿಗೆ ಯಾಕಿಷ್ಟು ನಿರಾಸಕ್ತಿ? Offer Closes soon!
ಪರಿಹಾರ ಧನದ ಚೆಕ್ ವಿತರಿಸಿ ಬಳಿಕ ಮಾತನಾಡಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಮೃತಪಟ್ಟ ಬಾಲಕಿ ಪಾಯಲ್ ಬದುಕುಳಿಯಲು ವೈದ್ಯರು, ನಾವು ನೀವೆಲ್ಲ ಬಹಳ ಪ್ರಯತ್ನ ಪಟ್ಟೆವು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದು ಬಹಳ ದುಃಖವಾಯಿತು. ಅಂದು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಧನ ಒದಗಿಸುವ ಭರವಸೆ ನೀಡಿದ್ದೆ. ಇಂದು ಪರಿಹಾರ ಚೆಕ್ ವಿತರಣೆ ಮಾಡಿದ್ದೇನೆ, ಬಾಲಕಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದರು.
ಇದನ್ನೂ ಓದಿ: Weather Report : ರಾಜ್ಯದ ಈ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
ಮಳೆಗಾಲ ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಎಚ್ಚರ ವಹಿಸಿ ವಾಸಿಸಬೇಕು ಮತ್ತು ಜಮೀನಿನಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.