ಬಸವಕಲ್ಯಾಣ: ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಯಂಕಮ್ಮ ಭೀಮಣ್ಣ ಇಸ್ಲಾಂಪೂರೆ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಚೇತನ್ ಕಾಡೆ ಆಯ್ಕೆಯಾಗಿದ್ದಾರೆ.
ಒಟ್ಟು 26 ಜನ ಸದಸ್ಯ ಬಲದ ನಾರಾಯಣಪುರ ಗ್ರಾಪಂನಲ್ಲಿ ತಹಸೀಲ್ದಾರ್ ಶಾಂತಗೌಡ ಬಿರಾದಾರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ಆಯೋಜಿಸಲಾಗಿತ್ತು.
ಇದನ್ನೂ ಓದಿ: Vijayanagara News: ಗುಡೇಕೋಟೆಯಲ್ಲಿ ಎರಡೇ ಕಾಲುಗಳಿರುವ ಕರುವಿನ ಜನನ
ಪ.ಜಾ. ಮಹಿಳೆಗೆ ಮಿಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಯಂಕಮ್ಮ ಹಾಗೂ ತಿಪ್ಪಮ್ಮ ಲಕ್ಷ್ಮಣ ಅವರಿಗೆ ತಲಾ 13 ಮತಗಳು ಚಲಾವಣೆಗೊಂಡಿದ್ದವು. ಹೀಗಾಗಿ ಇವರಿಬ್ಬರ ಒಪ್ಪಿಗೆ ಮೇರೆಗೆ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆಗೆ ನಿರ್ಧರಿಸಿ, ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಗಳು ಆದ ತಹಸೀಲ್ದಾರ್ ಶಾಂತಗೌಡ ಬಿರಾದಾರ ತಿಳಿಸಿದ್ದಾರೆ.
ಇದನ್ನೂ ಓದಿ: Jeep Campass : ಕೆಲವೇ ತಿಂಗಳಲ್ಲಿ ಭಾರತಕ್ಕೆ ಕಾಲಿಡಲಿದೆ ಪೆಟ್ರೋಲ್ ವೇರಿಯೆಂಟ್ ಜೀಪ್ ಕಂಪಾಸ್
ಸಾಮಾನ್ಯ ವರ್ಗಕ್ಕೆ ಮಿಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಚೇತನ್ ಕಾಡೆ ಅವರಿಗೆ 14 ಮತಗಳು ಚಲಾವಣೆಗೊಂಡಿದ್ದು, ತಮ್ಮ ಪ್ರತಿಸ್ಪರ್ಧಿಗಿಂತಲೂ ಎರಡು ಹೆಚ್ಚಿನ ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.