ಬೀದರ್: ಜಿಲ್ಲೆಯ ಹುಲಸೂರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ (School Commencement Program) ಜರುಗಿತು.
ಕಳೆದ ಎರಡು ದಿನಗಳ ಕಾಲ ಶಾಲೆಯ ಪ್ರತಿಯೊಂದು ಕೊಠಡಿ, ಶೌಚಾಲಯ, ಕಾಂಪೌಂಡ್, ಆವರಣ ಎಲ್ಲವನ್ನೂ ಸ್ವಚ್ಛಗೊಳಿಸಲಾಗಿತ್ತು. ಬುಧವಾರ ಬೆಳಗ್ಗೆ ಶಾಲೆಯ ಆವರಣದಲ್ಲಿ ರಂಗೋಲಿ ಹಾಕಿ, ತಳಿರು ತೋರಣ ಹಾಗೂ ಹೂವುಗಳಿಂದ ಶಾಲೆಯನ್ನು ಸಿಂಗರಿಸಲಾಗಿತ್ತು.
ಇದನ್ನೂ ಓದಿ: Facebook: ಪ್ರಜಾಪ್ರಭುತ್ವಕ್ಕೆ ಫೇಸ್‌ಬುಕ್‌ನಿಂದ ಅಪಾಯ, ಜುಕರ್‌ಬರ್ಗ್ ಒಬ್ಬ ಸರ್ವಾಧಿಕಾರಿ!
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹೂವು ನೀಡಿ, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ತದನಂತರ ಮಕ್ಕಳಿಗೆ ಶಾಲೆಯಲ್ಲಿ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರಗಳನ್ನು ವಿತರಿಸಲಾಯಿತು.
ಇದನ್ನೂ ಓದಿ: 9 years of PM Modi : 9 ವರ್ಷಗಳಲ್ಲಿ ಮಿಲಿಟರಿ ರಫ್ತು 23 ಪಟ್ಟು ಹೆಚ್ಚಳ, ಇದು ಸಾಧ್ಯವಾಗಿದ್ದು ಹೇಗೆ?
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ರಾಜಪ್ಪ ನಂದೋಡೆ, ಹಿರಿಯ ಶಿಕ್ಷಕರಾದ ಓಂಕಾರ ವಾಂಜರಖೇಡೆ, ಶಕುಂತಲಾ ಮಠಪತಿ, ಮಾಧವ ಸೂರ್ಯವಂಶಿ, ಬಾಲಾಜಿ, ಶೈಲಾಜಾ, ಪ್ರವೀಣ, ಮಾಹದೇವ ಹಾಗೂ ಗೌರವ ಶಿಕ್ಷಕರಾದ ಅಮೂಲ್ಯ, ಮನೋಜ್ ಪಾಠಕ್ ಮತ್ತು ಅಂಗನವಾಡಿ ಶಿಕ್ಷಕಿಯರು, ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.