Site icon Vistara News

Bidar News: ಬಸವಕಲ್ಯಾಣದಲ್ಲಿ ಕಡಿಮೆ ತೂಕದ ಮಗುವಿಗೆ ಜೀವ ಕೊಟ್ಟ ಡಾ. ಜಿ.ಎಸ್. ಭುರಾಳೆ

The doctor gave life to an underweight child at Basavakalyana

ಬಸವಕಲ್ಯಾಣ: ಕಡಿಮೆ ತೂಕದ ಮಗುವಿಗೆ (underweight child) ಇಲ್ಲಿನ ವೈದ್ಯರೊಬ್ಬರು (Docter) ಸತತ 48 ದಿನಗಳ ಕಾಲ ಚಿಕಿತ್ಸೆ (Treatment) ನೀಡಿ, ಮಗುವನ್ನು ಬದುಕಿಸಿದ್ದಾರೆ.

ಹೆತ್ತವರ ಆಸೆ ಕಮರಿದಾಗ ಛಲ ಬಿಡದೇ ಬಸವಕಲ್ಯಾಣ ನಗರದ ಹಿರಿಯ ಮಕ್ಕಳ ವೈದ್ಯ ಡಾ: ಜಿ.ಎಸ್. ಭುರಾಳೆ ಅವರು ಕಡಿಮೆ ತೂಕದ ಮಗುವಿಗೆ ಸತತ 48 ದಿನಗಳ ಕಾಲ ಚಿಕಿತ್ಸೆ ನೀಡುವ ಮೂಲಕ ಮಗುವನ್ನು ಬದುಕಿಸಿದ್ದಾರೆ.

ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಪೂಜಾ ಪವನ್ ಬನ್ಸೂಡೆ ಎಂಬುವವರ ಅವಧಿ ಪೂರ್ವ ಅಂದರೆ 7ನೇ ತಿಂಗಳಲ್ಲೆ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿಗೆ ಪೂರ್ವ ಹೆರಿಗೆ ಆದ ಕಾರಣ ಜನಿಸಿದ ಮಗವಿನ ತೂಕ ಕೇವಲ 720 ಕಿ.ಗ್ರಾಂ ಮಾತ್ರ ಇತ್ತು.

ಇದನ್ನೂ ಓದಿ: Independence Day 2023: ಸ್ವಾತಂತ್ರ್ಯೋತ್ಸವ ದಿನ ನೋಡಲೇಬೇಕಾದ ಕನ್ನಡ ಚಿತ್ರಗಳಿವು

ಇಷ್ಟೊಂದು ಕಡಿಮೆ ತೂಕದ ಮಕ್ಕಳು ಬದುಕುವುದು ಅಪರೂಪ. ಬದುಕಿದರೂ, ದೂರದ ಹೈದ್ರಾಬಾದ್, ಮುಂಬೈ, ಸೊಲ್ಲಾಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಅದಕ್ಕೆ ಖರ್ಚೂ ಸಹ ಸಾಮಾನ್ಯ ಜನರ ಕೈಗೆ ನಿಲುಕದಷ್ಟು ಹೆಚ್ಚು. ಹತ್ತಾರು ಲಕ್ಷ ರೂ. ಖರ್ಚು ಮಾಡಿದರು ಕೂಡ ಚಿಕಿತ್ಸೆಯ ಗ್ಯಾರಂಟಿ ಇರುವುದಿಲ್ಲ.

ಇದನ್ನೂ ಓದಿ:Mobile Addiction : ಮಕ್ಕಳಿಗಿನ್ನು ಮೊಬೈಲ್‌ ಮುಟ್ಟಿದರೆ ಮುನಿ; ಇದು ಹೊಸ APP ಕಹಾನಿ!

ಆದರೆ ಪಾಲಕರ ಮನವಿ ಮೇರೆಗೆ ತಮ್ಮ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಾತಿ ಮಾಡಿಕೊಂಡ ಹಿರಿಯ ವೈದ್ಯ ಡಾ. ಜಿ.ಎಸ್. ಭುರಾಳೆ ಅವರು ಕಡಿಮೆ ಖರ್ಚಿನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿ ಮಗುವನ್ನು ಬದುಕಿಸಿದ್ದಾರೆ. ಮಗುವಿನ ನಗು ನೋಡಿ ಕುಟುಂಬದವರ ಮೊಗದಲ್ಲೂ ಸಂತಸ ಮೂಡಿದೆ. ಸದ್ಯ ಮಗುವಿನ ತೂಕ 1100 ಗ್ರಾಂ ಗೂ ಅಧಿಕವಾಗಿದ್ದು, ಮಗು ಆರೋಗ್ಯವಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.

Exit mobile version