ಹುಲಸೂರ: ಜಾಗತಿಕ ತಾಪಮಾನ ಏರಿಕೆ (Global warming) ತಡೆಯಲು ಹಾಗೂ ಪರಿಸರ ಮಾಲಿನ್ಯ (Environmental pollution) ಕಡಿಮೆ ಮಾಡಲು ಈ ವನಮಹೋತ್ಸವ ಅತ್ಯಂತ ಸಹಾಯಕಾರಿ. ಇದರಿಂದ ಪ್ರತಿಯೊಬ್ಬರಲ್ಲಿ ಗಿಡ-ಮರಗಳ ಬಗ್ಗೆ ಅರಿವು ಮೂಡುತ್ತದೆ ಎಂದು ಹುಲಸೂರ ತಾಲೂಕಿನ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಎಸ್. ಬಾಬಳಗಿ ತಿಳಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ ವನ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ:Team India Cricket : ಆಟಗಾರರ ಗಾಯದ ಸಮಸ್ಯೆ ಪರಿಹಾರಕ್ಕೆ ಹೊಸ ಮಾರ್ಗ ಹುಡುಕಿದ ಬಿಸಿಸಿಐ!
ಗಿಡಗಳನ್ನು ನೆಡುವುದರಿಂದ ಜನ-ಜಾನುವಾರು ಮನುಕುಲದ ಹಾಗೂ ಪರಿಸರವೂ ಆರೋಗ್ಯಕರವಾಗಿರುತ್ತದೆ. ಅರಣ್ಯ ಸಂಪತ್ತನ್ನು ಬೆಳೆಸಿ, ಉಳಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಸಿಗಳನ್ನು ನೆಟ್ಟು ಪೋಷಿಸುವ ಗುಣ ಪ್ರತಿಯೊಬ್ಬರಲ್ಲಿ ಬೆಳೆದು ಬರಬೇಕು. ಸಸ್ಯ-ಅರಣ್ಯ ಸಂರಕ್ಷಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಇದನ್ನೂ ಓದಿ: BJP Politics : ಯಾರಾಗ್ತಾರೆ ವಿಪಕ್ಷ ನಾಯಕ; ರೇಸ್‌ನಲ್ಲಿ ಸದ್ಯಕ್ಕೆ ಮುಂದೆ ಇರುವವರು ಇವರೆ!
ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ (ಗ್ರಾ.ಉ.) ಮಹಾದೇವ ಎಲ್.ಜಮ್ಮು ಹಾಗೂ ತಾಪಂ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.