Site icon Vistara News

Bidar News: ಹುಲಸೂರನಲ್ಲಿ ಕಾಡು ಹಂದಿಗಳ ಹಾವಳಿ; 2 ಎಕರೆ ಕಬ್ಬು ನಾಶ

Wild boar plagues in Hulasur 2 acres of sugarcane destroyed

ಹುಲಸೂರ: ತಾಲೂಕಿನ ಹಲವು ಕಡೆ ಕಾಡು ಹಂದಿಗಳ (Wild boar) ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರು (Farmers) ಹೈರಾಣಾಗಿದ್ದಾರೆ.

ಕಳೆದ ಎರಡು ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಂಕಷ್ಟದಲ್ಲಿರುವ ಅನ್ನದಾತರಿಗೆ ಕಾಡು ಹಂದಿಗಳ ಉಪಟಳ ಹೆಚ್ಚಾಗಿದ್ದು, ರೈತರು ಮತ್ತಷ್ಟು ಸಂಕಷ್ಟದ ದಿನಗಳು ಕಳೆಯುವಂತಾಗಿದೆ.

ಪಟ್ಟಣದ ರೈತ ಮಡೋಳಪ್ಪಾ ಖಪಲೆ ಎನ್ನುವವರ ಹೊಲದಲ್ಲಿ ಗುರುವಾರ ರಾತ್ರಿ ಕಾಡುಹಂದಿಗಳು ಸರಿ ಸುಮಾರು ಎರಡು ಎಕರೆಯಲ್ಲಿ ಬೆಳೆದಿದ್ದ ಕಬ್ಬು ನಾಶ ಮಾಡಿವೆ,

ಇದನ್ನೂ ಓದಿ: Income Tax: ಹೊಸ ತೆರಿಗೆ ಪದ್ಧತಿಯಲ್ಲಿ ಇಷ್ಟು ಲಕ್ಷ ರೂ.ವರೆಗೆ ನೀವು ತೆರಿಗೆ ಪಾವತಿಸಬೇಕಿಲ್ಲ; ನಿರ್ಮಲಾ ಘೋಷಣೆ

ಪ್ರತಿ ನಿತ್ಯ ಕಾಡು ಹಂದಿಗಳು,ಜಿಂಕೆ ಹಾಗೂ ಇತರೆ ಕಾಡು ಪ್ರಾಣಿಗಳು ರೈತರು ಬೆಳೆದ ಕಬ್ಬು ಹಾಗೂ ತರಕಾರಿ ಮತ್ತು ಇತರೆ ಬೆಳೆಗಳು ತಿಂದು ಬೆಳೆದ ಬೆಳೆಗಳನ್ನು ಹಾಳು ಮಾಡುತ್ತಿವೆ ಎಂದು ರೈತ ತಮ್ಮ ಅಳಲು ತೋಡಿಕೊಂಡಿದ್ದಾನೆ.

ತಾಲೂಕಿನ ಹುಲಸೂರ, ಹಾಲಹಳ್ಳಿ ,ತೋಗಲೂರ, ಮೀರಕಲ್ ಬೇಲೂರ, ಗಡಿಗೌಡಗಾಂವ ಹಾಗೂ ಗುತ್ತಿ ಸೇರಿದಂತೆ ಇನ್ನು ಹಲವು ಗ್ರಾಮಗಳಲ್ಲಿ ಹೆಚ್ಚಾಗಿ ಕಬ್ಬು ಬೆಳೆಯಲಾಗುತ್ತಿದೆ ಆದರೆ ಕಾಡು ಹಂದಿಗಳ ಹಾವಳಿ ಹೆಚ್ಚಾಗಿರುವುದರಿಂದ ರೈತರು ಕಬ್ಬು ಹಾಗೂ ಇತರೆ ಬೆಳೆಗಳ ರಕ್ಷಣೆಗೆ ರಾತ್ರಿಯಿಡೀ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Brand Bengaluru: ಬೆಂಗಳೂರು ಸ್ವಚ್ಛತೆಗೆ ಸರ್ಕಾರದಿಂದ ಮೆಗಾ ಯೋಜನೆ: ಸುಳಿವು ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್

ಕಾಡು ಹಂದಿಗಳ ಕಾಟ ತಪ್ಪಿಸಲು ರೈತರು ಹೊಲಗಳ ಸುತ್ತ ಸೀರೆಗಳು ಸುತ್ತಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ಇದರ ಹೊರತುಪಡಿಸಿ ರಾತ್ರಿ ಹೊತ್ತು ಜಮೀನಿನಲ್ಲಿ ಕಾದು ಕುಳಿತು ಪಟಾಕಿಗಳು ಸಿಡಿಸಿ ಹಂದಿಗಳನ್ನು ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ನಾನಾ ಪ್ರಯೋಗಗಳು ರೈತರು ಮಾಡಿದರೂ ಕೂಡ ಹಂದಿಗಳ ಕಾಟದಿಂದ ಮುಕ್ತಿ ದೊರೆಯುತ್ತಿಲ್ಲ ಎನ್ನುತ್ತಾರೆ ಪ್ರಗತಿಪರ ರೈತ ಪ್ರವೀಣ ಕಾಡಾದಿ.

ತಾಲೂಕಿನಾದ್ಯಂತ ರೈತರ ಬೆಳೆದ ಬೆಳೆಗಳು ನಾಶಪಡಿಸುತ್ತಿರುವ ಕಾಡುಹಂದಿಗಳ ಉಪಟಳವು ಅಧಿಕವಾಗಿದ್ದು ಅದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ: PRITAM Bull: ಪ್ರವಾಹದಲ್ಲಿ ಸಿಲುಕಿದ ಗೂಳಿಗಳ ರಕ್ಷಣೆ; ಒಂದು ಗೂಳಿ ಬೆಲೆ BMW ಕಾರಿನ ಬೆಲೆಗೆ ಸಮ

ಕಾಡು ಹಂದಿಗಳಿಂದ ನನ್ನ ಎರಡು ಎಕರೆ ಕಬ್ಬು ಸರ್ವನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿದೆ. ಆದ್ದರಿಂದ ಅಧಿಕಾರಿಗಳು ರೈತರ ಕಡೆ ಗಮನಹರಿಸಿ ನೆರವಿಗೆ ಬರಬೇಕು ಎಂದು ರೈತ ಮಡೋಳಪ್ಪಾ ಖಪಲೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Exit mobile version