Site icon Vistara News

Bidar News: ರೋಗ ಮುಕ್ತ ಜೀವನಕ್ಕಾಗಿ ಯೋಗ ಅತ್ಯವಶ್ಯಕ: ಯೋಗ ಶಿಕ್ಷಕ ಕಾಶಿನಾಥ ಬೇಡಜೋಳಗೆ

International Yoga Day at basavakalyana

ಬೀದರ್: ರೋಗ ಮುಕ್ತ (Disease free) ಜೀವನಕ್ಕಾಗಿ ಯೋಗ (Yoga) ಅತ್ಯವಶ್ಯಕವಾಗಿದ್ದು, ದಿನನಿತ್ಯ ಯೋಗ ಮಾಡುವುದನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ಯೋಗ ಶಿಕ್ಷಕ ಕಾಶಿನಾಥ ಬೇಡಜೋಳಗೆ ಸಲಹೆ ನೀಡಿದರು.

ಪ್ರಗತಿ ಎಜುಕೇಷನಲ್ ಟ್ರಸ್ಟ್ ನ ‍ನಗರದ ಕಿಡ್ಸ್ ಕಿಂಗಡಮ್, ಇರಾ ಪಬ್ಲಿಕ್ ಶಾಲೆ ಹಾಗೂ ವಿಸ್ತಾರ ನ್ಯೂಸ್ ಸಹಯೋಗದದಲ್ಲಿ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇರಾ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 280 ರೂ. ಇಳಿಕೆ, ಬೆಳ್ಳಿ 250 ರೂ. ಅಗ್ಗ

ಮಾನಸಿಕ ಮತ್ತು ದೈಹಿಕ ಆರೋಗ್ಯ ಸದೃಢತೆಗೆ ಯೋಗ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಮೊಬೈಲ್, ಟಿವಿಗಳನ್ನು ನೋಡುತ್ತ ಸಮಯ ವ್ಯರ್ಥ ಮಾಡದೆ ನಿಯಮಿತವಾಗಿ ಯೋಗ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗ ಶಿಕ್ಷಕ ಕಾಶಿನಾಥ ಬೇಡಜೋಳಗೆ ವಿದ್ಯಾರ್ಥಿಗಳಿಗೆ ಯೋಗ ಕುರಿತು ತರಬೇತಿ ನೀಡಿದರು. ಯೋಗಕ್ಕೆ ಸಂಬಂಧಿಸಿದಂತೆ ವಿವಿಧ ಆಸನಗಳು ಹಾಗೂ ಯೋಗದ ನಾನಾ ಭಂಗಿಗಳನ್ನು ತಾವೇ ಸ್ವತಃ ಮಾಡಿ ತೋರಿಸುವ ಮೂಲಕ ಯೋಗದ ತರಬೇತಿ ನೀಡಿದರು.

ಇದನ್ನೂ ಓದಿ: Weather Report: ಇನ್ನು ನಾಲ್ಕು ದಿನ ಭಯಂಕರ ಮಳೆ; 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌!

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗೌರಿಶ್ ದಾಬಕೆ, ಶಾಲೆ ಮುಖ್ಯಗುರು ಶ್ರೀನಾಥ್ ಕಣಜಿ, ವಿಸ್ತಾರ ನ್ಯೂಸ್ ಚಾನಲ್‌ನ ವರದಿಗಾರ ಉದಯಕುಮಾರ ಮುಳೆ, ಶಾಲೆಯ ಯೋಗ ಶಿಕ್ಷಕಿ ರೇಖಾ ಬಿರಾದಾರ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಮಕ್ಕಳ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿ ಶ್ರೇಯಸ್‌ ಪತ್ತಾರ್ ಸ್ವಾಗತಿಸಿ, ನಿರೂಪಿಸಿದರು.

Exit mobile version