Site icon Vistara News

Bidar News: ಹುಲಸೂರನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

77th Independence Day celebrations in Hulasur

ಹುಲಸೂರ: ಪಟ್ಟಣ ಹಾಗೂ ತಾಲೂಕಿನಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು (77th Independence Day) ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ತಹಸೀಲ್ದಾರ್‌ ಕಚೇರಿ ಹಾಗೂ ಪಟ್ಟಣದ ಹೃದಯ ಭಾಗವಾಗದಲ್ಲಿರುವ ಪಟ್ಟಣದ ಗಾಂಧಿ ವೃತ್ತದಲ್ಲಿ ತಹಸೀಲ್ದಾರ್‌ ಶಿವಾನಂದ ಮೇತ್ರೆ ರಾಷ್ಟ್ರ ಧ್ವಜಾರೋಹಣ ನೇರವರಿಸಿದರು.

ಬಳಿಕ ತಾಲೂಕು ಆಡಳಿತದಿಂದ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್‌ ಶಿವಾನಂದ ಮೇತ್ರೆ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರ ತ್ಯಾಗ ಬಲಿದಾನವಿದೆ, ಪ್ರತಿಯೊಬ್ಬರು ವೀರ ಯೋಧರನ್ನು ಸ್ಮರಿಸುವುದು ಮತ್ತು ಗೌರವಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Mahila Satyagraha Smaraka: ಧೀರ ಮಹಿಳೆಯರ ಹೋರಾಟ ನೆನಪಿಸುವ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ

ಕಾರ್ಯಕ್ರಮದಲ್ಲಿ ಸುರೇಶ ಅಕ್ಕಣನವರು ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಹದೇವ ಬಾಬಳಗಿ ಅವರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ದೇಶದ ಅಭಿಮಾನದ ಬಗ್ಗೆ ಪ್ರತಿಜ್ಞಾ ವಿಧಿ ಭೋಧಿಸಿದರು. ತಾಲೂಕಿನ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಹಲವು ದೇಶ ಭಕ್ತಿ ಗೀತೆಗಳ ನ್ಯತ್ಯ ಕಾರ್ಯಕ್ರಮವು ನೋಡುಗರ ಕಣ್ಮನ ಸೆಳೆಯಿತು.

ಇದನ್ನೂ ಓದಿ: Weather Report : ರಾಜ್ಯದ ಹಲವೆಡೆ 50-50 ಮಳೆಯಾಟ!

ಶಾಸಕ ಶರಣು ಸಲಗರ, ಗ್ರಾಮ ಪಂಚಾಯಿತಿ ಅಧ್ಯಕ್ಷಸಂಜೀವಕುಮಾರ ಭೂಸಾರೆ , ಉಪ ತಹಸೀಲ್ದಾರ್‌ ಸಂಜೀವ ಕುಮಾರ ಭೈರೆ, ಪಿಎಸ್ಐ ನಾಗೇಂದ್ರ, ಪಿಡಿಒ ಸಂದೀಪ ಬಿರಾದಾರ ಹಾಗು ಮುಖಂಡರಾದ ಸುಧೀರ ಕಾಡಾದಿ , ಲತಾ ಹಾರಕುಡೆ, ಓಂಕಾರ ಪಟ್ನೆ, ಎಂ.ಜಿ.ರಾಜೋಳೆ, ಚಂದ್ರಕಾಂತ ದೇಟ್ನೆ, ರಣಜೀತ ಗಾಯಕವಾಡ, ದೇವಿಂದ್ರ ಭೋಪಳೆ, ವಿವೇಕ ಚಳಕಾಪುರೆ, ವಿಧ್ಯಾಸಾಗರ ಬನಸೂಡೆ , ಸಾರ್ವಜನಿಕರು, ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Exit mobile version