Site icon Vistara News

Bidar News: ಮೇಹಕರ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

Cluster level Pratibha Karanji programme in Mehakar village

ಹುಲಸೂರ: ತಾಲೂಕಿನ ಮೇಹಕರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮೇಹಕರ ಕ್ಲಸ್ಟರ್ ಮಟ್ಟದ (Cluster Level) ಪ್ರತಿಭಾ ಕಾರಂಜಿ (Pratibha Karanji) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೇಹಕರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀತಲ ಕಾಂಬಳೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಅತುತ್ಯಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದತ್ತಾ ಪವಾರ ಮಾತನಾಡಿ, ಕೋಲಾಟ, ನೃತ್ಯ, ಜನಪದ ಗೀತೆಗಳು ಸೇರಿದಂತೆ ಇನ್ನೂ ಮುಂತಾದ ನಮ್ಮ ದೇಶೀಯ ಕಲೆಗಳನ್ನು ಉಳಿಸುವ ಸಲುವಾಗಿ ಹಾಗೂ ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಗುರುತಿಸುವುದೇ ಈ ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Benefits Of Ajwain: ಅಜವಾನವೆಂಬ ಘಾಟುಮದ್ದಿನ ಬಗ್ಗೆ ನಿಮಗೆ ಗೊತ್ತಿದೆಯೆ?

ನಿವೃತ್ತ ಮುಖ್ಯಗುರು ಸುಭಾಷ್ ಹುಲಸೂರೆ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ವಿನೋದ ವಾಂಖೆಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದ 8 ಶಾಲೆಯ ವಿದ್ಯಾರ್ಥಿಗಳು ಭಕ್ತಿಗೀತೆ, ಕನ್ನಡ, ಇಂಗ್ಲಿಷ್, ಹಿಂದಿ ಕಂಠಪಾಠ, ಲಘು ಸಂಗೀತ, ಚಿತ್ರಕಲೆ, ಅಭಿನಯ ಗೀತೆ, ಜಾನಪದ, ಛದ್ಮವೇಷ, ಕಥೆ ಹೇಳುವುದು, ಆಶುಭಾಷಣ, ಮಿಮಿಕ್ರಿ, ಕವನ ವಾಚನ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು.

ಇದನ್ನೂ ಓದಿ: Hamsajyothi Trust: ನಾಳೆ ಹಂಸಜ್ಯೋತಿಯ 48ನೇ ವಾರ್ಷಿಕೋತ್ಸವ, ಹಂಸ ಸಮ್ಮಾನ್‌ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ರನಜೀತ ಸಿಂಗ ಠಾಕೂರ, ಜಾಲಿಂದರ ಜೆದೇ, ಸಮೀರ ಶೇಕ್, ಚನ್ನಬಸಪ್ಪ ತಳವಾಡೆ, ಮುಖ್ಯಗುರು ದಿಗಂಬರ ತೇಲಂಗ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕ ಸಂಘದ ಸದಸ್ಯ ಸಂಜೀವ ಮಂಗಣೆ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸರೋಜಿನಿ ಪರಷೆಟ್ಟೆ ಹಾಗೂ ಕವಿತಾ ಸಾಬನೆ, ರೂಪಲಿ ಮೋರೆ, ಕಲ್ಪನಾ ದಾಂಡೆಕರ, ಸತ್ಯವಾನ್ ಕಾಂಬ್ಳೆ , ಗೋವಿಂದ ಪಾಟಿಲ್, ದತ್ತಾ ಪವಾರ್, ಕಮಲಾಕರ ಪಾಲಾಪೂರೆ, ದತ್ತಾ ಸಾಬನೆ ಮತ್ತು ಶ್ರೀಮಂತರಾವ್‌ ಗಣೇಶವಾಡೆ, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version