ಬಸವಕಲ್ಯಾಣ: ಉದ್ಯಾನವನಕ್ಕಾಗಿ (Park) ಮೀಸಲಿರಿಸಿದ್ದ ಸ್ಥಳವನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗುತಿದ್ದ ಕಟ್ಟಡವನ್ನು ಶಾಸಕ ಶರಣು ಸಲಗರ್ ಅವರ ನೇತೃತ್ವದಲ್ಲಿ (Bidar News) ನೆಲಸಮಗೊಳಿಸಲಾಯಿತು.
ನಗರದ ಗುಡದಪ್ಪ ಕಾಲೋನಿಯಲ್ಲಿ ಉದ್ಯಾನವನಕ್ಕಾಗಿ ಮೀಸಲಿರಿಸಿದ್ದ ಸ್ಥಳವನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿ, ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಹಿತಿಯ ಹಿನ್ನಲೆಯಲ್ಲಿ ಶಾಸಕ ಶರಣು ಸಲಗರ್ ಅವರು, ತಕ್ಷಣ ನಗರಸಭೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಕ್ರಮವಾಗಿ ನಿರ್ಮಾಣ ಮಾಡಲಾಗುತಿದ್ದ ಕಟ್ಟಡವನ್ನು ಜೆಸಿಬಿ ಯಂತ್ರದಿಂದ ನೆಲಸಮಗೊಳಿಸಲಾಯಿತು.
ಇದನ್ನೂ ಓದಿ: Viral News: ಬೆಂಗಳೂರಲ್ಲಿ ಫ್ಲೈಟ್ ಚಾರ್ಜ್‌ಗೆ ಸಮವಾಯ್ತೇ ಪಾರ್ಕಿಂಗ್ ಶುಲ್ಕ? ಯುಬಿ ಮಾಲ್‌ನಲ್ಲಿ ಗಂಟೆಗೆ 1000 ರೂ.!
ಬಳಿಕ ಮಾತನಾಡಿದ ಶಾಸಕ ಶರಣು ಸಲಗರ್, ಸರ್ಕಾರಿ ಸ್ಥಳವನ್ನು ಅತಿಕ್ರಮಣ ಮಾಡುವುದು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಭೂಗಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ: Tumkur News: ಶಿರಾದಲ್ಲಿ ಮಾ. 8ರಂದು ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಲಿಂಗಾರ್ಚನೆ
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮನೋಜಕುಮಾರ ಕಾಂಬಳೆ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.