Site icon Vistara News

Bidar News: ಔರಾದ್‌ನಲ್ಲಿ ಉದ್ಯಮಿಯ ಸಂಶಯಾಸ್ಪದ ಸಾವು

Suspicious death of businessman Baabu rao pandare in Aurad

ಔರಾದ್: ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟಿರುವ (Suspicious Death) ಘಟನೆ ಪಟ್ಟಣದ ಅಮರೇಶ್ವರ ದೇವಸ್ಥಾನದ ಹಿಂಬದಿಯ ರುದ್ರಭೂಮಿಯ ಬಳಿ ಮಂಗಳವಾರ ನಡೆದಿದೆ.

ತಾಲೂಕಿನ ಬೋರಾಳ ಗ್ರಾಮದ ಬಾಬುರಾವ ಗಂಗಾಧರ್ ಪಾಂಡರೆ (54) ಮೃತ ವ್ಯಕ್ತಿ. ಬಹಿರ್ದೆಸೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ, ಅಲ್ಲದೇ ಮೃತ ವ್ಯಕ್ತಿಯ ಗುಪ್ತಾಂಗ ಮತ್ತು ಕೈ ಬೆರಳುಗಳು ಕತ್ತರಿಸಿರುವ ರೀತಿಯಲ್ಲಿ ಕಂಡುಬಂದಿದ್ದು, ಇದು ಸಂಶಯಾಸ್ಪದ ಸಾವು ಎಂದು ಮೃತನ ಪುತ್ರ ಸುಧೀರಕುಮಾರ ಪಾಂಡರೆ ದೂರು ನೀಡಿದ್ದಾರೆ. ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನದ ಬಳಿಯಲ್ಲಿ ಮೃತ ಬಾಬುರಾವ ಪಾಂಡರೆ ಅವರು ಎರಡು ಬಟ್ಟೆ ಅಂಗಡಿಗಳ ಮಾಲೀಕರಾಗಿದ್ದರು.

ಘಟನಾಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ನೀಡಿ, ಪರಿಶೀಲಿಸಿದರು. ಮೃತ ದೇಹನ್ನು ಬೀದರನ ಬ್ರೀಮ್ಸ್ ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಇದನ್ನೂ ಓದಿ: Shivamogga News: ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು

ಈ ವೇಳೆ ಎಎಸ್ಪಿ ಮಹೇಶ ಮೇಘಣ್ಣನವರ್ ಮೃತದೇಹವನ್ನು ಪರಿಶೀಲಿಸಿದರು. ಸಾವಿನ ಬಗ್ಗೆ ಎಲ್ಲ ರೀತಿಯಿಂದ ತನಿಖೆ‌ ನಡೆಸಲಾಗುತ್ತದೆ ಎಂದು ಪೊಲೀಸರು ಕುಟುಂಬದ ಸದಸ್ಯರಿಗೆ ಭರವಸೆ ನೀಡಿದ್ದಾರೆ.

ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version