Site icon Vistara News

ಕೆಸರುಮಯವಾದ ಸರ್ಕಾರಿ ಶಾಲೆ ಆವರಣ; ಔರಾದ್‌ನಲ್ಲಿ ವಿದ್ಯಾರ್ಥಿಗಳ ಪರದಾಟ

ಕೆಸರುಮಯವಾದ

ಬೀದರ್:‌ ಜಿಲ್ಲೆಯ ಔರಾದ ಪಟ್ಟಣದಲ್ಲಿರುವ ಅಂಗನವಾಡಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ (ಕನ್ನಡ, ಮರಾಠಿ, ಉರ್ದು) ಮಾಧ್ಯಮ, ಆದರ್ಶ ವಿದ್ಯಾಲಯ ಹಾಗೂ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಆವರಣ ಸತತ ಮಳೆಯಿಂದ ಕೆಸರು ಗದ್ದೆಯಂತಾಗಿದ್ದು, ವಿದ್ಯಾರ್ಥಿಗಳು ಓಡಾಡಲು ಹಾಗೂ ಆಟವಾಡಲು ತೊಂದರೆಯಾಗಿದೆ.

ಒಂದೇ ಆವರಣದಲ್ಲಿ ಅಂಗನವಾಡಿ, ಮರಾಠಿ ಶಾಲೆ, ಕಾಲೇಜು, ಪ್ರೌಢ ಶಾಲೆಗಳಿವೆ. ಇಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ವಿವಿಧ ಗ್ರಾಮದಿಂದ ಬಂದು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆದರೆ ಶಾಲೆಯ ಆವರಣ ಕೆಸರುಮಯವಾಗಿರುವುದರಿಂದ ಮಕ್ಕಳು ಪರದಾಡುವಂತಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪಕ್ಕದಲ್ಲೇ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸರ್ಕಸ್ ಮಾಡಿ ಶಾಲೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಕಾಲೇಜಿಗೆ ಹೋಗಿ ಬರುವಾಗ ಹಲವು ಮಕ್ಕಳು ಕಾಲು ಜಾರಿ ಬಿದ್ದಿದ್ದಾರೆ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹೆದರುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸ್ಥಳೀಯ ಹೋರಾಟಗಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Rain News | ಪ್ರವಾಹ, ಚುನಾವಣೆ ಬಂದಾಗ ನೆನಪಾಗುತ್ತೇವೆ; ಯಾದಗಿರಿ ನೆರೆಪೀಡಿತ ಗ್ರಾಮದವರ ಆಕ್ರೋಶ

Exit mobile version