Site icon Vistara News

Siddeshwar Swamiji: ಭಾಲ್ಕಿಯ ಮಹಾಮನೆಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ನುಡಿನಮನ

Sri Siddheshwara Swamiji 3

ಬೀದರ್‌: ಜ್ಞಾನದಾಸೋಹದ ಮೂಲಕ ಶತಮಾನದ ಶ್ರೇಷ್ಠ ಸಂತರೆಂದೇ ಖ್ಯಾತರಾಗಿ ಕಳೆದ ವರ್ಷವಷ್ಟೇ ಲಿಂಗೈಕ್ಯರಾದ ನಡೆದಾಡುವ ದೇವರು, ವಿಜಯಪುರದ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮವನ್ನು ಜಿಲ್ಲೆಯ ಭಾಲ್ಕಿಯ ಮಹಾಮನೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಭಾಲ್ಕಿಯ ಹಿರೇಮಠದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವಲಿಂಗ ಪಟ್ಟದ್ದೇವರು, ಮೆಹಕರ್-ತಡೋಳ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು, ಹಲಬರ್ಗಾ-ಶಿವಣಿ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಜ್ಞಾನಯೋಗಾಶ್ರಮದ ಶ್ರೀಗಳು, ಬಿಜೆಪಿ ಯುವ ಮುಖಂಡ ಚನ್ನಬಸವಣ್ಣ ಬಳತೆ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | Sadguru Column : ಬದುಕಿನಲ್ಲಿ ಆಟವಾಡುವುದರ ಮಹತ್ವ ತುಂಬ ದೊಡ್ಡದು

ನಾಡು ಕಂಡ ಶತಮಾನದ ಶ್ರೇಷ್ಠ ಸಂತ ಸಿದ್ದೇಶ್ವರ ಶ್ರೀ

ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳು (Siddeshwar Swamiji) ನಾಡು ಕಂಡ ಶತಮಾನದ ಶ್ರೇಷ್ಠ ಸಂತ. ಭಕ್ತರ ಪಾಲಿನ ನಡೆದಾಡುವ ದೇವರು. ವಿಜಯಪುರ ನಗರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ನಿಷ್ಕಲ್ಮಶ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟು ಸದಾ ನಗುಮೊಗದಿಂದಲೇ ಸಿದ್ದೇಶ್ವರ ಶ್ರೀಗಳು ನೀಡುತ್ತಿದ್ದ ಪ್ರವಚನ ಮನಸಲ್ಲಿ ಅದೆಷ್ಟೇ ಚಿಂತೆ, ದುಮ್ಮಾನಗಳಿದ್ದರೂ ಕ್ಷಣಾರ್ಧದಲ್ಲಿ ಮರೆಯಾಗುತ್ತಿತ್ತು. ಸಿದ್ದೇಶ್ವರ ಶ್ರೀಗಳು ಎಂದಿಗೂ ಇತರರಂತೆ ಕೇವಲ ನೀತಿಪಾಠದಿಂದ ಭಕ್ತರನ್ನು ತಿದ್ದುವ ಕೆಲಸ ಮಾಡಲಿಲ್ಲ.. ಬದಲಿಗೆ ತಮ್ಮ ಜೀವನದುದ್ದಕ್ಕೂ ತಮ್ಮ ಬದುಕನ್ನು ತೆರೆದ ಪುಸ್ತಕದಂತಿರಿಸಿ ಇಡೀ ವಿಶ್ವಕ್ಕೆ ದಾರಿದೀಪವಾಗಿದ್ದರು.

ಇದನ್ನೂ ಓದಿ | Tirupati Temple: ತಿರುಪತಿ ದೇವಸ್ಥಾನದಲ್ಲಿ ಫೆ. 3ರಿಂದ ಧಾರ್ಮಿಕ ಸದಸ್‌

ಸಮಾಜದಲ್ಲಿನ ಅಂಕುಡೊಂಕನ್ನು ಮೃದು ಮಾತಿನಿಂದಲೇ ಎತ್ತಿ ಹಿಡಿಯುತ್ತಿದ್ದ ಸಿದ್ದೇಶ್ವರ ಶ್ರೀಗಳ ಪ್ರವಚನ ಎಂಥವರ ಮನಸನ್ನೂ ಕೂಡ ಬದಲಿಸುವಂತೆ ಇರುತ್ತಿತ್ತು. ಅನ್ನ ದಾಸೋಹದ ಜೊತೆಜೊತೆಗೆ ಜ್ಞಾನ ದಾಸೋಹದ ಮೂಲಕ ಸರ್ವರನ್ನೂ ಸನ್ಮಾರ್ಗಕ್ಕೆ ಕೊಂಡೊಯ್ಯುತ್ತಿದ್ದ ಪರಮಪೂಜ್ಯರನ್ನು ಭಕ್ತರು ನಡೆದಾಡುವ ದೇವರು ಅಂತಲೇ ಕರೆಯುತ್ತಿದ್ದರು.

Exit mobile version