Site icon Vistara News

BITM Silver jubilee | ಡಿ.17ರಂದು ಬಳ್ಳಾರಿಯಲ್ಲಿ ಬಿಐಟಿಎಂ ಸಂಸ್ಥೆಯ ರಜತ ಮಹೋತ್ಸವ

BITM Silver jubilee

ಬಳ್ಳಾರಿ: ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಬಸವರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಮಾಲೀಕತ್ವದ ʼಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ʼ (ಬಿಐಟಿಎಂ) ಸಂಸ್ಥೆಯ ರಜತ ಮಹೋತ್ಸವವನ್ನು (BITM Silver jubilee) ಡಿಸೆಂಬರ್‌ 17ರಂದು ನಗರದ ಬಿಐಟಿಎಂ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಬಿಐಟಿಎಂ ರಜತ ಮಹೋತ್ಸವ ಬ್ಲಾಕ್‌ ಕಟ್ಟಡಕ್ಕೆ ಶಂಕುಸ್ಥಾಪನೆ
ಶನಿವಾರ ಬೆಳಗ್ಗೆ 10.30ಕ್ಕೆ ಬಿಐಟಿಎಂ ಕ್ಯಾಂಪಸ್‌ನಲ್ಲಿ ರಜತ ಮಹೋತ್ಸವ ಬ್ಲಾಕ್‌ (Silver Jubilee Block) ಕಟ್ಟಡ ಕಾಮಗಾರಿಗೆ ಮೈಂಡ್‌ಟ್ರೀ ಸಹ-ಸಂಸ್ಥಾಪಕ, ಮೇಳ ವೆಂಚರ್ಸ್ ವ್ಯವಸ್ಥಾಪಕ ಪಾಲುದಾರರಾದ ಎನ್‌.ಎಸ್.ಪಾರ್ಥಸಾರಥಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಡಾ. ವಿದ್ಯಾಶಂಕರ್ ಎಸ್. ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ವೇಳೆ ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಮಾಜಿ ಸಚಿವ ಅಲ್ಲುಂ ವೀರಭದ್ರಪ್ಪ, ಬಳ್ಳಾರಿಯ ತುಂಗಭದ್ರ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ಟಿಇಎಚ್‌ಆರ್‌ಡಿ) ಅಧ್ಯಕ್ಷ ಡಾ.ಎಸ್.ಜೆ.ವಿ. ಮಹಿಪಾಲ್, ಮ್ಯಾನೇಜಿಂಗ್ ಟ್ರಸ್ಟಿ ಯಶವಂತ ಭೂಪಾಲ್, ಟ್ರಸ್ಟಿ ಮತ್ತು ಗೌರವ ಕಾರ್ಯದರ್ಶಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಟ್ರಸ್ಟಿಗಳಾದ ಎಸ್.ಬಿ. ಅಶೋಕ್ ಭೂಪಾಲ್, ಟ್ರಸ್ಟಿ ಡಾ.ವಿ.ಜೆ. ಭರತ್, ಅಮರರಾಜ್ ಭೂಪಾಲ್, ಬಿಐಟಿಎಂ ಪ್ರಾಂಶುಪಾಲ ಡಾ.ಯಡವಳ್ಳಿ ಬಸವರಾಜ ಹಾಗೂ ಸಿಬ್ಬಂದಿ ಹಾಜರಿರಲಿದ್ದಾರೆ.

ರಜತ ಮಹೋತ್ಸವ ವೇದಿಕೆ ಕಾರ್ಯಕ್ರಮ
ಬೆಳಗ್ಗೆ ೧೧ ಗಂಟೆಗೆ ಬಿಐಟಿಎಂ ಸಭಾಂಗಣದಲ್ಲಿ ರಜತ ಮಹೋತ್ಸವ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದು, ಟಿಇಎಚ್‌ಆರ್‌ಡಿ ಚೇರ್ಮನ್ ಡಾ.ಎಸ್.ಜೆ.ವಿ. ಮಹಿಪಾಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಂಡ್‌ಟ್ರೀ ಸಹ-ಸಂಸ್ಥಾಪಕ, ಮೇಳ ವೆಂಚರ್ಸ್ ವ್ಯವಸ್ಥಾಪಕ ಪಾಲುದಾರರಾದ ಎನ್‌.ಎಸ್.ಪಾರ್ಥಸಾರಥಿ, ವಿಟಿಯು ಕುಲಪತಿ ಡಾ. ವಿದ್ಯಾಶಂಕರ್ ಎಸ್. ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಮಾಜಿ ಸಚಿವ ಅಲ್ಲುಂ ವೀರಭದ್ರಪ್ಪ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಗಣ್ಯರಿಗೆ ಸನ್ಮಾನ ಮಾಡಲಾಗುತ್ತದೆ.

ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ
ಸಂಜೆ 4.30ಕ್ಕೆ ಬಿಐಟಿಎಂ ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ನಂತರ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ಕಛೇರಿ ಇರಲಿದ್ದು, ಸಂಜೆ 6 ಗಂಟೆಗೆ ಟ್ರಸ್ಟಿಗಳಿಗೆ ಸನ್ಮಾನ ಮಾಡಲಾಗುತ್ತದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು,
ಸಂಸದ ವೈ.ದೇವೇಂದ್ರಪ್ಪ, ಶಾಸಕ ಜಿ.ಸೋಮಶೇಖರ್ ರೆಡ್ಡಿ, ಸಿರಗುಪ್ಪ ಶಾಸಕ ಎಂ.ಎಸ್‌.ಸೋಮಲಿಂಗಪ್ಪ, ಎಂಎಲ್‌ಸಿ ವೈ.ಎಂ. ಸತೀಶ್, ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್, ಸಂಡೂರು ಶಾಸಕ ಇ.ತುಕಾರಾಂ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌, ಬಿಐಟಿಎಂ ಆಡಳಿತಾಧಿಕಾರಿ ಪಿ.ಅಮರೇಶಯ್ಯ, ಪ್ರಾಂಶುಪಾಲ ಡಾ.ಯಡವಳ್ಳಿ ಬಸವರಾಜ, ಉಪ ಪ್ರಾಂಶುಪಾಲ ಡಾ. ಬಿ.ಎಸ್. ಖೇಣೇದ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | ವಿಸ್ತಾರ Explainer | ಏನಿದು ಜಿ 20? ಅಧ್ಯಕ್ಷತೆ ಜವಾಬ್ದಾರಿಯಿಂದ ಭಾರತಕ್ಕೆ ಏನು ಲಾಭ?

Exit mobile version