ಶಿರಸಿ: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ಸಾಧನೆ ತಿಳಿಸುವ ಪ್ರಗತಿ ರಥಕ್ಕೆ ಶಿರಸಿಯ ರಾಘವೇಂದ್ರ ವೃತ್ತದ ಬಳಿ ಸೋಮವಾರ ಚಾಲನೆ ನೀಡಲಾಯಿತು. ‘ಬಿಜೆಪಿಯೇ ಭರವಸೆ’ (BJP Bharavase) ಎಂಬ ಘೋಷ ವಾಕ್ಯ ಬರೆದಿರುವ ಪ್ರಗತಿ ರಥ ಇದಾಗಿದೆ. ಇದು ಎಲ್.ಇ.ಡಿ ಪರದೆ ಹೊಂದಿರುವ ವಾಹನವಾಗಿದ್ದು, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಮುಂದಿನ ದಿನಗಳಲ್ಲಿ ಸಂಚರಿಸಲಿದೆ. ಇದೇ ರೀತಿ ಜಿಲ್ಲೆಯ ಎಲ್ಲ ಆರೂ ವಿಧಾನಸಭಾ ಕ್ಷೇತ್ರಗಳಿಗೂ ಪ್ರತ್ಯೇಕ ಪ್ರಗತಿ ರಥಗಳು ಬಂದಿವೆ.
ಪ್ರಗತಿ ರಥವು ಬಿಜೆಪಿ ಸರ್ಕಾರಗಳ ಜನಪರ ಆಡಳಿತ, ವಿವಿಧ ಯೋಜನೆಗಳಿಂದ ಆಗಿರುವ ಅನುಕೂಲ ಮತ್ತು ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಜನಜಾಗೃತಿ ಮೂಡಿಸಲಿದೆ.
ಭಾರತ ಮಾತೆಗೆ ಜಯವಾಗಲಿ, ಭಾರತೀಯ ಜನತಾ ಪಾರ್ಟಿಗೆ ಜಯವಾಗಲಿ ಎಂಬ ಘೋಷಣೆಯೊಂದಿಗೆ, ಪ್ರಗತಿ ರಥಕ್ಕೆ ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಶಿರಸಿ ನಗರ ಮಂಡಲದ ಅಧ್ಯಕ್ಷರಾದ ರಾಜೇಶ ಶೆಟ್ಟಿ ಹಾಗೂ ಕಾರ್ಯಕರ್ತರು ಚಾಲನೆ ನೀಡಿದರು.
ಎಲ್.ಇ.ಡಿ ವ್ಯಾನ್ ಜತೆಗೆ ಭಾರತೀಯ ಜನತಾ ಪಾರ್ಟಿಯ ಚುನಾವಣಾ ಪ್ರಣಾಳಿಕೆಗೆ ಜನಾಭಿಪ್ರಾಯ ಸಂಗ್ರಹಿಸಲು ಒಂದು ಸಲಹಾ ಪೆಟ್ಟಿಗೆ ಕೂಡ ಇದ್ದು, ಸಾರ್ವಜನಿಕರು ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಸಲಹೆಯನ್ನು ಲಿಖಿತವಾಗಿ ನೀಡಬಹುದಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ರಾಕೇಶ ವಿ. ತಿರುಮಲೆ, ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷರು ಮತ್ತು ನಗರ ಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ದೀಪಾ ಮಹಾಲಿಂಗಣ್ಣವರ್, ಯುವ ಮೋರ್ಚಾ ಮಂಡಲ ಅಧ್ಯಕ್ಷರು ಮತ್ತು ನಗರ ಸಭೆಯ ಸದಸ್ಯರಾದ ನಾಗರಾಜ ನಾಯ್ಕ, ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಕಿರಣ ಗೆಹ್ಲೋಟ್, ನಿತಿನ್, ಲತಾ ಶೇಟ್ ಮತ್ತಿತರರು ಇದ್ದರು.
ಇದನ್ನೂ ಓದಿ: ಆತಂಕ ನಿಜವಾಯ್ತು! ಉದ್ಯೋಗ ಕಸಿಯುತ್ತಿರುವ ChatGPT, ಚಾಟ್‌ಬಾಟ್ ನಿಯೋಜಿಸುತ್ತಿರುವ ಅಮೆರಿಕನ್ ಕಂಪನಿಗಳು