ಮುಂಡಗೋಡ: “ನಾನು ರಾಜ್ಯಾಧ್ಯಕ್ಷನಾಗಿದ್ದ ವೇಳೆ ದೇವೇಗೌಡರ ಮುಖ್ಯಮಂತ್ರಿ ಅವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 4 ಮೀಸಲಾತಿ ನೀಡಲಾಗಿತ್ತು. ಆದರೆ ಬಿಜೆಪಿ ಸರಕಾರ ಈ ಮೀಸಲಾತಿಯನ್ನು ರದ್ದು ಮಾಡಿದೆ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು.
ಅವರು ಶನಿವಾರ (ಮಾ.25) ಮುಂಡಗೋಡ ಮಾರ್ಗವಾಗಿ ಹಳಿಯಾಳ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಪತ್ರಕರ್ತರೊಂದಿಗೆ ಮಾತನಾಡಿ, “ಎರಡು ತಿಂಗಳಿನಲ್ಲಿ ನಮ್ಮ ಸರಕಾರ ಬರುತ್ತದೆ. ಆಗ ಮತ್ತೆ ಈ ಮೀಸಲಾತಿ ಜಾರಿಗೆ ತರುತೇವೆʼʼ ಎಂದರು. ರಾಜ್ಯದ 100 ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರಕಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಒಳ್ಳೆಯ ಅಭಿಪ್ರಾಯವಿದ್ದು ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
ಇದಕ್ಕೂ ಮುನ್ನ ಅವರು ಇಲ್ಲಿನ ಶಿವಾಜಿ ಸರ್ಕಲ್ ನಲ್ಲಿ ಪುನೀತ್ ರಾಜಕುಮಾರ್ ಜನ್ಮ ದಿನದ ಆಚರಣೆಯಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿದರು. ಪಟ್ಟಣದ ಬಂಕಾಪುರ ರಸ್ತೆಯ ಅಯ್ಯಪ್ಪ ದೇವಸ್ಥಾನದ ಹತ್ತಿರ ತಾಲೂಕು ಘಟಕದಿಂದ ರಾಜ್ಯಾಧ್ಯಕ್ಷರಿಗೆ ಹೂ ಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು. ಈ ವೇಳೆ ತಾಲೂಕು ಅಧ್ಯಕ್ಷ ತುಕಾರಾಮ ಗುಡ್ಕರ್ ಮುತ್ತು ಸಂಗೂರಮಠ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.
ಇದನ್ನೂ ಓದಿ:Prashant Sambargi : ರಾಹುಲ್ ಗಾಂಧಿ ಟೀಕಿಸುವ ಭರದಲ್ಲಿ ದೇವೇಗೌಡರಿಗೆ ಅಪಮಾನ ಮಾಡಿದ ಪ್ರಶಾಂತ್ ಸಂಬರ್ಗಿ!