Site icon Vistara News

Ahimsa Chetan : ಬಿಜೆಪಿಯವರದ್ದು ಹಿಂದು ಅಜೆಂಡಾ; ಧರ್ಮದ ಪರ ಇದ್ದೇನೆನ್ನುವುದೇ ಭಯೋತ್ಪಾದನೆ: ಅಹಿಂಸಾ ಚೇತನ್‌

chethan ahimsa ಪಂಚಮಸಾಲಿ ಮೀಸಲಾತಿ ಒಕ್ಕಲಿಗ ಸಮುದಾಯದ ಮೀಸಲಾತಿ

ಕೊಪ್ಪಳ: ಬಿಜೆಪಿಯವರದ್ದು ಹಿಂದು ಅಜೆಂಡಾವಾಗಿದೆ. ಯಾವುದೇ ಹಿಂಸೆಯನ್ನು ನಾನು ವಿರೋಧಿಸುತ್ತೇನೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಆಪ್‌ ಪಕ್ಷದವರದ್ದು ಯಾವ ಅಜೆಂಡಾ ಎಂಬುದು ನನಗೆ ಗೊತ್ತಿಲ್ಲ. ಆದರೆ, ಧರ್ಮದ ಪರವಾಗಿದ್ದೇನೆ ಎನ್ನುವುದೇ ಭಯೋತ್ಪಾದನೆ ಎಂದು ನಟ ಅಹಿಂಸಾ ಚೇತನ್‌ (Ahimsa Chetan) ಹೇಳಿದ್ದಾರೆ.

ಅವರು ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಒಂದೊಂದು ರಾಜಕೀಯ ಪಕ್ಷಗಳು ಒಂದೊಂದು ರೀತಿಯಲ್ಲಿವೆ. ಇವೆಲ್ಲವುಗಳಿಗೂ ಪರ್ಯಾಯ ರಾಜಕೀಯ ಶಕ್ತಿ ಇಲ್ಲ. ಆದರೆ, ಇಂದು ಧರ್ಮದ ಪರ ಮಾತುಗಳು ಹೆಚ್ಚಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಧರ್ಮದ ಧರ್ಮದ ಪರವಾಗಿದ್ದೇನೆ ಎಂದು ಹೇಳುವುದೇ ಭಯೋತ್ಪಾದನೆ ಎಂದು ಹೇಳಿದರು.

ಅಮೆರಿಕವು ಮಾನವ ಹಕ್ಕು ನಾಶ ಮಾಡುವ ದೊಡ್ಡ ಭಯೋತ್ಪಾದಕ ದೇಶವಾಗಿದೆ. ಅದಕ್ಕೂ ನನ್ನ ವಿರೋಧ ಇದೆ. ಇನ್ನು ನನಗೆ ಭಾರತದಲ್ಲಿ ಮತ ಹಾಕುವ ಹಕ್ಕು ಇಲ್ಲ ಎನ್ನುವ ಕಾರಣಕ್ಕೆ ಪ್ರಶ್ನೆ ಮಾಡಬೇಕಿಲ್ಲ. ನನ್ನ ತಂದೆ-ತಾಯಿ ಅಮೆರಿಕದಲ್ಲಿರುವುದರಿಂದ ನಾನು ಭಾರತೀಯ ನಾಗರಿಕ ಹಕ್ಕನ್ನು ಪಡೆದಿಲ್ಲ. ಈಗಿನ ಸಂವಿಧಾನದಿಂದ ಎಲ್ಲವೂ ಸಾಧ್ಯತೆ ಇದೆ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಉತ್ತಮವಾಗಿದೆ ಎಂದು ಚೇತನ್‌ ಹೇಳಿದರು.

ಇದನ್ನೂ ಓದಿ | Terror attack | ದೇವರಂತಾದ ನಾಯಿ; ನಾಯಿ ಬೊಗಳಿದ್ದರಿಂದಾಗಿ ಕುಟುಂಬವೇ ಬಚಾವ್‌

ಈಗ ರಾಜಕೀಯ ಪಕ್ಷಗಳಲ್ಲಿ ಹಣ, ಜಾತಿ ಮುಖ್ಯವಾಗಿದೆ. ಕಾಂಗ್ರೆಸ್, ಬಿಜೆಪಿಯ ರಾಜಕಾರಣಿಗಳು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರೇ ಈಗ ಮುಖ್ಯವಾಗಿದ್ದಾರೆ. ಭ್ರಷ್ಟಾಚಾರವನ್ನು ಎಲ್ಲ ಕಡೆ ತೊಡೆದುಹಾಕಬೇಕು. ಭ್ರಷ್ಟಾಚಾರದ ಹಣ ನೇರವಾಗಿ ರಾಜಕಾರಣಿಗಳ ಜೇಬಿಗೇ ಹೋಗುತ್ತದೆ. ಎಲ್ಲ ಕಡೆ ವ್ಯವಸ್ಥಿತ ಭ್ರಷ್ಟಾಚಾರ ಇದ್ದು, ಇದರ ನಿರ್ಮೂಲನೆ ಆಗಬೇಕು. ಎಲ್ಲ ರಾಜಕಾರಣಿಗಳ ಪರಿವರ್ತನೆ ಆಗಬೇಕಿದೆ. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ಸಂಸ್ಥೆಯನ್ನು ತೆಗೆದುಹಾಕಿದ್ದು ಅಪಾಯಕಾರಿ ಬೆಳವಣಿಗೆಯಾಗಿತ್ತು ಎಂದು ಚೇತನ್‌ ಅಭಿಪ್ರಾಯಪಟ್ಟರು.

ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ಅಲೆಮಾರಿ ಜನಾಂಗದ ಸಮಸ್ಯೆ ಇದೆ. ಜೋಪಡಿಯಲ್ಲಿ ವಾಸವಾಗಿರುವ ಅವರಿಗೆ ನ್ಯಾಯ ಸಿಗುತ್ತಿಲ್ಲ. ಮಾಜಿ ದೇವದಾಸಿಯರಿಗೆ ಅನೇಕ ಸಮಸ್ಯೆಗಳಿವೆ. ಇವರೆಲ್ಲರ ಬದುಕು ಕಷ್ಟವಾಗಿದೆ. ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುವ ಸರ್ಕಾರಕ್ಕೆ‌ ಅಲೆಮಾರಿಗಳ ಸಮಸ್ಯೆ ಕಾಣುತ್ತಿಲ್ಲ. ಅಲೆಮಾರಿಗಳು ಸಣ್ಣ ಸಮುದಾಯ ಎಂಬ ಕಾರಣಕ್ಕೆ ತಾತ್ಸಾರಕ್ಕೊಳಗಾಗಿದ್ದಾರೆ. ಬಸವಣ್ಣ ಅವರ ಕ್ರಾಂತಿಯಲ್ಲಿ ಅಲೆಮಾರಿಗಳ ಪಾತ್ರವಿದೆ. ಮಾಜಿ ದೇವದಾಸಿಯರಿಗೆ 2018 ಪುನರ್ವಸತಿ ಕಾಯ್ದೆ ಜಾರಿಯಾಗಬೇಕು ಎಂದು ಚೇತನ್‌ ಆಗ್ರಹಿಸಿದರು.

ಇದನ್ನೂ ಓದಿ | Proud Police : ಮಟ್ಕಾ ದಂಧೆಗೆ ಕಡಿವಾಣ ಹಾಕಿದ ಐಜಿಪಿಗೆ ಅದ್ಧೂರಿ ಸನ್ಮಾನ, ಮೆರವಣಿಗೆ; ಕುಣಿದು ಕುಪ್ಪಳಿಸಿದ ಪಾವಗಡ ಮಂದಿ

Exit mobile version