ಯಾದಗಿರಿ: ಶಹಾಪುರದಲ್ಲಿ ನಡೆದಿರುವ ಅಕ್ಕಿ ಕಳ್ಳತನ (Rice Stealing) ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಬಂಧಿಸಲಾಗಿದೆ. ಶಹಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
ರಾಜು ರಾಠೋಡ್ ಅವನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ ಪೊಲೀಸರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಪಡಿತರ ಅಕ್ಕಿ ವಶಪಡಿಸಿಕೊಂಡ ಪೊಲೀಸರು ಕೇಸ್ ದಾಖಲಿಸಿದ್ದಾರೆ. ತಡ ರಾತ್ರಿ ಗುರುಮಠಕಲ್ ನಲ್ಲಿ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿದ್ದರು.
ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಗೆ ಸೇರಿದ ವೇರ್ ಹೌಸ್ ನಲ್ಲಿ ಅಕ್ಕಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಕೇಸ್ ದಾಖಲಾಗಿದೆ. ರಾಜು ಅವರಿಗೆ ಸೇರಿರುವ ಶ್ರೀ ಲಕ್ಷ್ಮೀ ತಿಮ್ಮಪ್ಪ ವೇರ್ಹೌಸ್ನಲ್ಲಿ ನಲ್ಲಿ 550 ಕ್ವಿಂಟಾಲ್ ಅಕ್ಕಿ ದೊರಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಖತರ್ನಾಕ್ ಕಳ್ಳಿಯರ ಬಂಧನ
ಮುಂಡಗೋಡ: ಅಂತರ ಜಿಲ್ಲಾ ಕಳ್ಳಿಯರನ್ನು (Inter District Thieves) ಮುಂಡಗೋಡ ಠಾಣೆಯ ಪೊಲೀಸರು ಬಂಧಿಸಿ, ಆರೋಪಿತರಿಂದ 6 ಲಕ್ಷ ರೂ ಬೆಲೆಬಾಳುವ 100 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುವ ಘಟನೆ (Uttara Kannada News) ಜರುಗಿದೆ.
ಇದನ್ನೂ ಓದಿ : ಕಟ್ಟಡದಿಂದ 1 ದಿನದ ಹೆಣ್ಣು ಮಗು ಎಸೆದ ಪಾಪಿಗಳು; ಕ್ರಮಕ್ಕೆ ರಾಜ್ಯಸಭಾ ಸದಸ್ಯೆ ಆಗ್ರಹ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತನಗರದ ಶಾಂತಿ ವೆಂಕಟರಮಣ ಕಲ್ಲವಡ್ಡರ (31) ಮತ್ತು ಮೀನಾಕ್ಷಿ ಪರಮೇಶ ಕಲ್ಲವಡ್ಡರ ಬಂಧಿತ ಆರೋಪಿಗಳಾಗಿದ್ದಾರೆ.
2022 ಮೇ 16 ರಂದು ತಾಲೂಕಿನ ಚಿಗಳ್ಳಿ ಗ್ರಾಮದ ಕುಮಾರಿ ಶೃತಿ ಅರಳಿಕಟ್ಟಿ ಎಂಬ ಯುವತಿ ಎಸ್‌ಬಿಐ ಬ್ಯಾಂಕಿನಿಂದ 49,000 ರೂ ಡ್ರಾ ಮಾಡಿ ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡು ಪಟ್ಟಣದ ನ್ಯಾಯಾಲಯದ ಹತ್ತಿರ ಇರುವ ಝರಾಕ್ಸ್ ಅಂಗಡಿಯಲ್ಲಿ ಹಣ ನೋಡಿದಾಗ ಹಣ ಇರಲಿಲ್ಲ. ಯಾರೋ ಕಳ್ಳರು ಹಿಂದಿನಿಂದ ಬ್ಯಾಗ್‌ನಲ್ಲಿದ್ದ ಪರ್ಸ್‌ಅನ್ನು ಕಳ್ಳತನ ಮಾಡಿಕೊಂಡ ಹೊಗಿದ್ದರ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದ ಪೊಲೀಸರು ಜನವರಿ 24 ರಂದು ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 20 ಸಾವಿರ ರೂ ಜಪ್ತಿಮಾಡಲಾಗಿದೆ. ಇದಲ್ಲದೆ ಕಳೆದ ಎರಡು ತಿಂಗಳ ಹಿಂದೆ ಶಿರಸಿಯ ಹಳೆ ಬಸ್‌ನಿಲ್ದಾಣ ಹಾಗೂ ನಿಲೇಕಣಿ ಬಸನಿಲ್ದಾಣಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಸುಮಾರು 6 ಲಕ್ಷ ರೂ ಬೆಲೆಬಾಳುವ 100 ಗ್ರಾಂ ಬಂಗಾರವನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ.