ಯಾದಗಿರಿ: ಜ್ಞಾನ ದೇಗುಲಕ್ಕೂ ವಾಮಾಚಾರದ ಬಿಸಿ ತಟ್ಟಿದೆ. ಯಾದಗಿರಿ ತಾಲೂಕಿನ ಬಸವಂತಪುರ ಸರಕಾರಿ ಪ್ರೌಢ ಶಾಲೆಗೆ ಕಿಡಿಗೇಡಿಗಳು ವಾಮಾಚಾರ (Black Magic) ಮಾಡಿಸಿದ್ದಾರೆ. ಶಾಲೆಯ ಅಡುಗೆ ಕೋಣೆ ಸೇರಿ ಎಲ್ಲ ತರಗತಿ ಕೋಣೆಗಳ ಮುಂದೆ ತೆಂಗು, ನಿಂಬೆಹಣ್ಣು ಇಟ್ಟಿದ್ದಾರೆ.
ಗುರುವಾರ ಬೆಳಗ್ಗೆ ಶಾಲೆಗೆ ಬಂದಾಗ ವಿದ್ಯಾರ್ಥಿಗಳು ವಾಮಾಚಾರ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಶಾಲೆಗೆ ವಾಮಾಚಾರ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಮಕ್ಕಳು ಶಾಲೆಯತ್ತ ಸುಳಿಯಲು ಹೆದರುತ್ತಿದ್ದಾರೆ.
ಶಾಲೆಯ ಅಡುಗೆ ಕೋಣೆಯಲ್ಲಿ ಒಂದು ತೆಂಗು ಇಟ್ಟು ಸುತ್ತಲ್ಲೂ ನಿಂಬೆಹಣ್ಣಿಗೆ ಕುಂಕುಮವನ್ನು ಹಚ್ಚಿದ್ದಾರೆ. ಎಲ್ಲ ತರಗತಿ ಕೋಣೆಗಳ ಬಾಗಿಲ ಮುಂದೆಯೇ ನಿಂಬೆಹಣ್ಣು ಇಟ್ಟಿದ್ದಾರೆ. ಯಾವ ಉದ್ದೇಶಕ್ಕಾಗಿ ಶಾಲೆಗೆ ಯಾರು ವಾಮಾಚಾರ ಮಾಡಿಸಿದ್ದಾರೆ ಎಂಬುದು ತಿಳಿದಿಲ್ಲ. ಸದ್ಯ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ