ಕೋಲಾರ: ಇತ್ತೀಚೆಗೆ ಕಾಡಿನಿಂದ ಚಿರತೆ, ಹುಲಿ, ಕರಡಿ, ಆನೆ ಸೇರಿ ಹಲವು ಪ್ರಾಣಿಗಳು ನಾಡಿಗೆ ಬರುತ್ತಿವೆ. ಹೀಗೆ ಕಾಡಿನಿಂದ ನಾಡಿಗೆ ಬಂದಿದ್ದ ಕೃಷ್ಣ ಮೃಗವನ್ನು (BlackBuck) ಬೀದಿ ನಾಯಿಗಳು ದಾಳಿ ನಡೆಸಿ ಬೇಟೆಯಾಡಿದೆ. ಪರಿಣಾಮ ಬೀದಿನಾಯಿ ದಾಳಿಗೆ ಕೃಷ್ಣ ಮೃಗ ಬಲಿ ಆಗಿದೆ.
ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ರೈತರ ಹೊಲಗಳ ಬಳಿ ಕೃಷ್ಣಮೃಗ ಓಡಾಡುವಾಗ ಬೀದಿ ನಾಯಿಗಳು ದಾಳಿ ಮಾಡಿವೆ. ಬೀದಿ ನಾಯಿಗಳಿಂದ ತಪ್ಪಿಸಿಕೊಂಡು ಹೋಗಲು ಆಗದೆ ಸುಮಾರು ನಾಲ್ಕು ವರ್ಷದ ಕೃಷ್ಣಮೃಗ ಮೃತಪಟ್ಟಿದೆ.
ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕೃಷ್ಣ ಮೃಗದ ದೇಹವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೃಷ್ಣಮೃಗವನ್ನು ಅಟ್ಟಾಡಿಸಿದ ಬೀದಿ ನಾಯಿಗಳು
ಬೀದರ್‌ನ ಕಲ್ಯಾಣ ಪಟ್ಟಣದಲ್ಲಿಯೂ ಕೃಷ್ಣ ಮೃಗದ ಮೇಲೆ ಬೀದಿ ನಾಯಿಗಳು ದಾಳಿ ನಡೆಸಲು ಮುಂದಾದ ಘಟನೆ ಇತ್ತೀಚೆಗೆ ನಡೆದಿತ್ತು. ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಕೃಷ್ಣ ಮೃಗ ಖಾಸಗಿ ಆಸ್ಪತ್ರೆಗೆ ನುಗ್ಗಿತ್ತು. ಕಲ್ಯಾಣ ಪಟ್ಟಣದ ಶಿವಪೂರ್ ಕಾಲೊನಿಯಲ್ಲಿ ಜಿಂಕೆ ತಿರುಗಾಡಿದ್ದು, ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಸಣ್ಣ ಪುಟ್ಟ ಗಾಯಗೊಂಡಿದ್ದ ಕೃಷ್ಣಾ ಮೃಗಕ್ಕೆ ಚಿಕಿತ್ಸೆ ನೀಡಿ, ಬಳಿಕ ಕಾಡಿಗೆ ಬಿಟ್ಟಿದ್ದರು.
ಇದನ್ನೂ ಓದಿ | ಸಿದ್ದರಾಮಯ್ಯ ಕಾರ್ಯಕ್ರಮದ ವೇಳೆ ರೊಮ್ಯಾನ್ಸ್: ಮುಸ್ಲಿಂ ವಿದ್ಯಾರ್ಥಿ, ಹಿಂದು ವಿದ್ಯಾರ್ಥಿನಿ ಕಾಲೇಜಿನಿಂದ ಸಸ್ಪೆಂಡ್!