ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsav) ಮತ್ತು ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ(ಬಿಎಂಟಿಸಿ) 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನದಂದು ಪ್ರಯಾಣಿಕರಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ. ದಿನ ಪೂರ್ತಿ ಬೆಂಗಳೂರಿಗರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಆ.೧೫ರಂದು ಒಂದು ದಿನ ಪೂರ್ತಿ ಪ್ರಯಾಣಿಕರು ಬಿಎಂಟಿಸಿಯಲ್ಲಿ ಎಲ್ಲಿಂದ ಎಲ್ಲಿಗೆ ಸಂಚಾರ ಮಾಡಿದರೂ ಯಾವುದೇ ಪ್ರಯಾಣ ದರ ಪಾವತಿ ಮಾಡಬೇಕಿಲ್ಲ. ಕೇವಲ ನಾನ್ ಎಸಿ ಬಸ್ ಮಾತ್ರವಲ್ಲ, ಹವಾನಿಯಂತ್ರಿತ ವಜ್ರ ಸಹಿತ ಯಾವುದೇ ಬಸ್ ಆದರೂ 24 ಗಂಟೆ ಉಚಿತವಾಗಿ ಓಡಾಡಬಹುದು.
ಇದನ್ನೂ ಓದಿ | Amrit Mahotsav | ಮಂಗಳೂರಿನಲ್ಲಿ ತಿರಂಗಾ ದಾಖಲೆ, 900 ಕೆ.ಜಿ ಧಾನ್ಯದಿಂದ ತ್ರಿವರ್ಣದ ಕಲಾಕೃತಿ ರಚನೆ
ಅದೇ ರೀತಿ ಮೆಟ್ರೋ ಕೂಡ ತನ್ನ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಭರ್ಜರಿ ಗಿಫ್ಟ್ ನೀಡಿದೆ. ಸೋಮವಾರ ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಿದರೂ ಮೆಟ್ರೋ ಟಿಕೆಟ್ ದರ ಕೇವಲ 30 ರೂಪಾಯಿ ಮಾತ್ರ ಇರಲಿದೆ. ಫ್ಲವರ್ ಶೋ ನೋಡಲು ಹೋಗುವವರಿಗೆ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಿದ್ದು, ಫ್ಲವರ್ ಶೋ ಮುಗಿಸಿಕೊಂಡು ಪೇಪರ್ ಟಿಕೆಟ್ ತೋರಿಸದರೆ ರಿಟರ್ನ್ ಜರ್ನಿ ಉಚಿತವಿರಲಿದೆ.
ಕಾಂಗ್ರೆಸ್ ಪಾದಯಾತ್ರೆಗೆ ಬರುವವರಿಗೆ ಅನುಕೂಲ
ಕಾಂಗ್ರೆಸ್‌ನಿಂದ ಆ.15ರಂದು ಹಮ್ಮಿಕೊಂಡಿರುವ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಗೆ ರಾಜ್ಯ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸುವ ಕಾಂಗ್ರೆಸ್ ಕಾರ್ಯಕರ್ತರಿಗೆ ಮೆಟ್ರೋ ಕಾರ್ಡ್ ಕೊಡಲಿದೆ. ಮೆಟ್ರೋ ಮೂಲಕ ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ಬರಲಿರುವ ಕಾರ್ಯಕರ್ತರಿಗೆ ಅನುಕೂಲ ಆಗಲಿದೆ. 50 ಸಾವಿರ ಮೆಟ್ರೋ ಟಿಕೆಟ್ ಖರೀದಿ ಮಾಡಲಾಗಿದೆ ಎಂದು ಈಗಾಗಲೇ ಡಿಕೆಶಿ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿಯೇ ಇರುವ ಕೈ ಕಾರ್ಯಕರ್ತರು ಬಿಎಂಟಿಸಿ ಬಸ್ ಅನ್ನು ಉಚಿತವಾಗಿ ಬಳಸಲಿದ್ದಾರೆ.
ಇದನ್ನೂ ಓದಿ | Amrit Mahotsav | ಮಂಗಳೂರಿನಲ್ಲಿ 100 ಮೀ ಉದ್ದದ ರಾಷ್ಟ್ರಧ್ವಜದ ಜತೆ 28 ಕಿ.ಮೀ ತಿರಂಗಾ ಯಾತ್ರೆ