ಬೆಂಗಳೂರು: ಬಹುರೂಪಿ ಪ್ರಕಾಶನದಿಂದ ಮಕ್ಕಳಿಗೆ ಸಂಬಂಧಿಸಿದ 10 ಪುಸ್ತಕಗಳು (Book Release) ಏಕಕಾಲಕ್ಕೆ ಲೋಕಾರ್ಪಣೆಗೊಳ್ಳುತ್ತಿವೆ. ಸೆ.9ರ ಶನಿವಾರ ಬೆಳಗ್ಗೆ 10ಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬಹುರೂಪಿಯ ಸಂಸ್ಥಾಪಕರಾದ ಶ್ರೀಜಾ ವಿ.ಎನ್., ವಿಸ್ತರಣೆ ನಿರ್ದೇಶಕರಾದ ಅರ್ಚನಾ ರಾಯ್ಕರ್ ತಿಳಿಸಿದ್ದಾರೆ.
ಅಂದು ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ಆದಿಮ ಕೇಂದ್ರದ ಕನಸುಗಾರ ಕೋಟಗಾನಹಳ್ಳಿ ರಾಮಯ್ಯ, ವಿಜ್ಞಾನ ಬರಗಾರ, ಅಂಕಣಕಾರ ನಾಗೇಶ ಹೆಗಡೆ, ಗಾಯಕಿ ಎಂ.ಡಿ ಪಲ್ಲವಿ, ಸಹಜ ಸಾಗುವಳಿ ಸಂಪಾದಕಿ ವಿ. ಗಾಯತ್ರಿ, ಬಹುರೂಪಿ ಸಂಸ್ಥೆಯ ಸಂಸ್ಥಾಪಕ ಜಿ.ಎನ್. ಮೋಹನ್, ಪರಾಗ್ ಇನಿಶಿಯೇಟಿವ್, ಕಲಿಕೆ, ಟಾಟಾ ಟ್ರಸ್ಟ್‌ನ ಮುಖ್ಯಸ್ಥರು ಲಕ್ಷ್ಮಿ ಕರುಣಾಕರನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಪ್ರೀತಿ ಡೇವಿಡ್, ಅಪರ್ಣಾ ಕಾರ್ತಿಕೇಯನ್, ಸಬೂಹಿ ಜಿವಾನಿ, ವಿಶಾಖ ಜಾರ್ಜ್, ನಿವೇಧಾ ಗಣೇಶ್, ಪರ್ಲ್ ಡಿಸಿಲ್ವ, ನಂದಿತಾ ದಾ ಕುನ್ಹಾ, ತಾನ್ಯಾ ಮಜುಂದಾರ್, ಲಾವಣ್ಯ ಕಾರ್ತೀಕ್ ಇವರುಗಳ ಅನುವಾದಿತ ಕೃತಿಗಳು ಬಿಡುಗಡೆಗೊಳ್ಳುತ್ತಿವೆ. ರಾಜಾರಾಂ ತಲ್ಲೂರು, ವಿ.ಗಾಯತ್ರಿ, ಅಬ್ಬೂರು ಪ್ರಕಾಶ್, ಪ್ರಸಾದ್ ನಾಯ್ಕ್, ಸಂತೋಷ ತಾಮ್ರಪರ್ಣಿ, ಎಂ.ಡಿ. ಪಲ್ಲವಿ, ರಶ್ಮಿಎಸ್, ದೀಪದಮಲ್ಲಿ, ಶ್ರೀಜಾ ವಿ.ಎನ್ ಇವರುಗಳು ಅನುವಾದ ಮಾಡಿದ್ದಾರೆ.
ಇದನ್ನೂ ಓದಿ: Womens Yakshagana : ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಗೆ ಬೆಳ್ಳಿ ಸಂಭ್ರಮ
ಯಾವೆಲ್ಲ ಪುಸ್ತಕಗಳು ಲೋಕಾರ್ಪಣೆ
1)ಸ್ನೇಹಗ್ರಾಮದ ಸಂಸತ್ತು
2) ನಂದಿನಿ ಎಂಬ ಜಾಣೆ
3) ಮರಳಿ ಮನೆಗೆ
4) ಟಿಕ್‌ಟ್ ಇಲ್ಲ, ಪ್ರಯಾಣ ನಿಲ್ಲಲ್ಲ
5) ಗೆದ್ದೇ ಬಿಟ್ಟೆ
6) ಲೇಡಿ ಟಾರ್ಜಾನ್
7) ಸೀರೆ ಉಡುವ ರಾಕ್ ಸ್ಟಾರ್
8) ಈ ಪಿಕ್ ಯಾರ ಕ್ಲಿಕ್?
9) ಸುಂದರಬಾಗ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯ
10) ಮರ ಏರಲಾಗದ ಗುಮ್ಮ
ಮಕ್ಕಳ ಸಾಹಿತ್ಯದ ಕುರಿತು ಸಂವಾದ
ಶನಿವಾರ ಬೆಳಗ್ಗೆ 11:30ಕ್ಕೆ “ಮಕ್ಕಳ ಸಾಹಿತ್ಯಕ್ಕೆ ಸಮಕಾಲೀನ ಸ್ಪರ್ಶ: ಅನುವಾದದ ಮಹತ್ವ”ದ ಕುರಿತು ಸಂವಾದ ನಡೆಯಲಿದೆ. ಸಿಆರ್‌ಟಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಾಸುದೇವ ಶರ್ಮಾ, ಅಂಕಣಕಾರ ನಾಗೇಶ ಹೆಗಡೆ, ನವ ಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಉಡುಪ, ಕಲಾವಿದ ಗುಜ್ಜಾರ್, ಶಿಕ್ಷಣ ತಜ್ಞೆ ವೀಣಾ ಮೋಹನ್, ಪರಿ ಕಾರ್ಯನಿರ್ವಾಹಕ ಸಂಪಾದಕಿ ಪ್ರೀತಿ ಡೇವಿಡ್ ಭಾಗಿಯಾಗಲಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ