Site icon Vistara News

Book Release: ಮೇ 21ರಂದು ಸಾವರ್ಕರ್‌ ಸಮಗ್ರ ಸಂಪುಟ 6 ಪುಸ್ತಕ ಲೋಕಾರ್ಪಣೆ; ಸಾತ್ಯಕಿ ಸಾವರ್ಕರ್‌ ಭಾಗಿ

#image_title

ಬೆಂಗಳೂರು: ಸಾವರ್ಕರ್‌ ಸಾಹಿತ್ಯ ಸಂಘ ಮತ್ತು ದಿ ಮಿಥಿಕ್‌ ಸೊಸೈಟಿ ವತಿಯಿಂದ ಮೇ 21ರಂದು ಸಾವರ್ಕರ್‌ ಸಮಗ್ರ ಸಂಪುಟ 6 ಪುಸ್ತಕವು (Book Release) ಲೋಕಾರ್ಪಣೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ದಿ ಮಿಥಿಕ್‌ ಸೊಸೈಟಿಯ ಕಾರ್ಯದರ್ಶಿ ವಿ. ನಾಗರಾಜ್‌, ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹಾಗೂ ವೀರ ಸಾವರ್ಕರ್‌ ಮೊಮ್ಮಗ ಸಾತ್ಯಕಿ ಸಾವರ್ಕರ್‌ ಭಾಗಿಯಾಗಲಿದ್ದಾರೆ.

ಜತೆಗೆ ಸಾವರ್ಕರ್‌ ಸಮಗ್ರದ ಪ್ರಧಾನ ಸಂಪಾದಕ ಡಾ. ಜಿ.ಬಿ. ಹರೀಶ, ಸಂಪುಟದ ಅನುವಾದಕ ಡಾ. ಎಸ್‌.ಆರ್‌. ಲೀಲಾ ಹಾಗೂ ಪ್ರಕಾಶಕರಾದ ಹರ್ಷ ಸಮೃದ್ಧ, ಅಂಕಣಕಾರರ ರೋಹಿತ್‌ ಚಕ್ರತೀರ್ಥ, ಪತ್ರಕರ್ತ ರಮೇಶ್‌ ದೊಡ್ಡಪುರ ಉಪಸ್ಥಿತರಿರಲಿದ್ದಾರೆ.

ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್‌ ಅವರ ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು ಹಾಗೂ ಹಿಂದು ಪದಪಾದಶಾಹಿ ಪುಸ್ತಕಗಳ ಅನುವಾದ ಈ ಸಂಪುಟದಲ್ಲಿದೆ. ಮರಾಠಿ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಲಾಗಿದೆ.

ಇದನ್ನೂ ಓದಿ: Modi In Karnataka: ಭಾನುವಾರವೂ ಇರಲಿದೆ ಬೆಂಗಳೂರಲ್ಲಿ ಮೋದಿ ಮೋಡಿ; ರೋಡ್‌ ಶೋ ಎಲ್ಲೆಲ್ಲಿ?

ಸ್ಥಳ ಎಲ್ಲಿ?

ಮೇ 21ರಂದು ಬೆಳಗ್ಗೆ 10.15ಕ್ಕೆ ಬಿಡುಗಡೆ ಕಾರ್ಯಕ್ರಮ ಇರಲಿದ್ದು, ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನ ಬಿ.ಪಿ ವಾಡಿಯ ಸಭಾಂಗಣದಲ್ಲಿ ನಡೆಯಲಿದೆ. ಸಾವರ್ಕರ್‌ ಸಮಗ್ರ ಸಂಪುಟ 6 ಪುಸ್ತಕದ ಬೆಲೆ 750 ರೂ. ಇದ್ದು, ಪುಸ್ತಕದ ಲೋಕಾರ್ಪಣೆಯ ದಿನದಂದು 600 ರೂಪಾಯಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

Exit mobile version