Site icon Vistara News

Border Dispute | ನಮ್ಮ ತಂಟೆಗೆ ಬಂದರೆ ಕರ್ನಾಟಕದ ಗಡಿ ದಾಟಿ ಮಹಾರಾಷ್ಟ್ರದ ಒಂದೂ ವಾಹನ ಬರಲು ಬಿಡಲ್ಲ: ಕರವೇ ನಾರಾಯಣಗೌಡ

karave narayakagowda protest in bengaluru ಕರವೇ ಪ್ರತಿಭಟನೆ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ

ಬೆಂಗಳೂರು/ಕೋಲಾರ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವು (Border Dispute) ದಿನೇ ದಿನೇ ಹಲವು ಸ್ವರೂಪಗಳನ್ನು ಪಡೆದುಕೊಳ್ಳುತ್ತಿವೆ. ಅಲ್ಲದೆ, ಕರ್ನಾಟಕದ ವಾಹನಗಳಿಗೆ, ಬ್ಯಾಂಕ್‌ಗಳಿಗೆ ಮರಾಠಿ ಪುಂಡರು ಮಸಿ ಬಳಿಯುತ್ತಿರುವ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ ಸರ್ಕಾರ ಹಾಗೂ ಎಂಇಎಸ್ ಮುಖಂಡರ ವಿರುದ್ಧ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಕರವೇ ರಸ್ತೆಗಿಳಿದಿದೆ. ಇದೇ ವೇಳೆ, ನಮ್ಮ ತಂಟೆಗೆ ಬಂದರೆ ಕರ್ನಾಟಕದ ಗಡಿ ದಾಟಿ ಒಂದೂ ಮಹಾರಾಷ್ಟ್ರ ವಾಹನ ಬರಲು ಬಿಡುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.

karave narayakagowda protest in bengaluru ಕರವೇ ಪ್ರತಿಭಟನೆ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ

ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಮಾತನಾಡಿದ ಟಿ.ಎ. ನಾರಾಯಣ ಗೌಡ, ಮಹಾರಾಷ್ಟ್ರ ಸರ್ಕಾರ ಹಾಗೂ ಎಂಇಎಸ್‌ ಪುಂಡರ ವಿರುದ್ಧ ಆಕ್ರೋಶ ಹೊರಹಾಕಿದರು. ಬೆಳಗಾವಿ ರಾಜಕಾರಣಿಗಳು ರಣಹೇಡಿಗಳಾಗಿದ್ದಾರೆ. ಅವರೆಲ್ಲರೂ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಮರಾಠಿ ಮತದಾರರ ಮತ ಪಡೆಯಲು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಇನ್ನಾದರೂ ನಮ್ಮ ರಾಜಕಾರಣಿಗಳು ಮಾತನಾಡಬೇಕು ಎಂದು ಹರಿಹಾಯ್ದರು.

karave narayakagowda protest in bengaluru ಕರವೇ ಪ್ರತಿಭಟನೆ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ

೨ ದಿನ ಗಡುವು
ಎಲ್ಲರೂ ಓಲೈಕೆ ರಾಜಕಾರಣವನ್ನು ಪಕ್ಕಕ್ಕೆ ಇಟ್ಟು ಮುಂದೆ ಬರಬೇಕು. 25 ಜನ ಬಿಜೆಪಿ ಸಂಸದರು ಇದ್ದಾರೆ. ಇವರಲ್ಲಿ ಉದಾಸಿಯೊಬ್ಬರು ಬಿಟ್ಟರೆ ಬೇರೆ ಯಾರೂ ಸಹ ಮಾತನಾಡುತ್ತಿಲ್ಲ. ಮತ ಕೇಳುವ ನೈತಿಕತೆ ಇದ್ದರೆ ಕನ್ನಡಿಗರ ಪರ ದನಿ ಎತ್ತಬೇಕು. ಇಲ್ಲದಿದ್ದಲ್ಲಿ ನಾವು ಸಂಸದರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ. ಪೊಲೀಸರು ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಹೋರಾಟ, ಚಳವಳಿ ನಮ್ಮ ಹಕ್ಕು. ಇನ್ನು ೨ ದಿನ ಗಡುವು ನೀಡುತ್ತೇವೆ. ಅಷ್ಟರಲ್ಲಿ ಸರಿಹೋಗದೆ ಪುಂಡಾಟ ಮುಂದುವರಿದರೆ ಮಹಾರಾಷ್ಟ ವಾಹನಗಳನ್ನು ತಡೆಯುತ್ತೇವೆ. ರಾಜ್ಯದ ಗಡಿಯೊಳಗೆ ಬರಲು ಬಿಡಲಾರೆವು ಎಂದು ನಾರಾಯಣ ಗೌಡ ಎಚ್ಚರಿಕೆ ನೀಡಿದರು.

ಇದನ್ನೂ ಓದಿ | Border Dispute | ನಮ್ಮ ತಂಟೆಗೆ ಬಂದರೆ ಕರ್ನಾಟಕದ ಗಡಿ ದಾಟಿ ಮಹಾರಾಷ್ಟ್ರದ ಒಂದೂ ವಾಹನ ಬರಲು ಬಿಡಲ್ಲ: ಕರವೇ ನಾರಾಯಣಗೌಡ

ಇದೇ ವೇಳೆ ಕರವೇ ನಾರಾಯಣ ಗೌಡ ಬಣದ ಮತ್ತೊಂದು ಗುಂಪನ್ನು ವಶಕ್ಕೆ ಪಡೆದ ಪೊಲೀಸರು ಜೀಪ್‌ನಲ್ಲಿ ಕರೆದೊಯ್ದರು. ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ಪೊಲೀಸರ ಮೇಲೆ ಆಕ್ರೋಶ ವ್ಯಕ್ತವಾಯಿತು.

ಸಾ.ರಾ. ಗೋವಿಂದು ಆಕ್ರೋಶ
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಆಕ್ರೋಶ ಹೊರಹಾಕಿದ್ದು, ಕೂಡಲೇ ಎಂಇಎಸ್‌ ಪುಂಡರಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಮಾಡಿ ಅವರಿಗೆ ಬಿಸಿ ಮುಟ್ಟಿಸುತ್ತೇವೆ. ಯಾವುದೇ ಕಾರಣಕ್ಕೂ ಬೆಳಗಾವಿಗೆ ಎಂಇಎಸ್‌ ಪುಂಡರನ್ನು ಬಿಟ್ಟುಕೊಳ್ಳಬಾರದು. ಬೆಳಗಾವಿ ಜಿಲ್ಲಾಧಿಕಾರಿ ಅವರ ನಡೆಯನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಕರವೇ ಶಿವರಾಮೇಗೌಡ ಬಣ ಪ್ರತಿಭಟನೆ
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಶಿವರಾಮೇಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬಣದಿಂದ ಪ್ರತಿಭಟನೆ ನಡೆದಿದ್ದು, ನೂರಾರು ಮಂದಿ ಕಾರ್ಯಕರ್ತರ ಜಮಾಯಿಸಿ, ಮಹಾರಾಷ್ಟ್ರ ಸರ್ಕಾರ ಹಾಗೂ ಎಂಇಎಸ್‌ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

karave narayakagowda protest in bengaluru ಕರವೇ ಪ್ರತಿಭಟನೆ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ

ಕೋಲಾರದಲ್ಲಿ ರಸ್ತೆ ತಡೆ
ಬೆಳಗಾವಿ ಗಡಿ ವಿಚಾರ ಸಂಬಂಧ ಮಹಾರಾಷ್ಟ್ರದ ಕೆಲ‌ವು ಕಿಡಿಗೇಡಿಗಳು ಬಸ್‌ಗೆ ಮಸಿ ಬಳಿಯುತ್ತಿರುವುದನ್ನು ಖಂಡಿಸಿ ಕೋಲಾರದಲ್ಲಿ ಕರವೇ ನಾರಾಯಣಗೌಡ ಬಣ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಮಹಾರಾಷ್ಟ್ರ ಎಂಇಎಸ್ ಪುಂಡರು ಕರ್ನಾಟಕದ ಗಡಿ ತಂಟೆಗೆ ಬಂದರೆ ಕರವೇ ಸುಮ್ಮನೆ ಕೂರುವುದಿಲ್ಲ. ಬೆಳಗಾವಿ ಎಂದೆಂದೂ ನಮ್ಮದೇ ಆಗಿದೆ. ರಾಜ್ಯದ ಗಡಿ ಭಾಗವನ್ನು ಒಂದು ಇಂಚೂ ಸಹ ಬಿಟ್ಟುಕೊಡುವುದಿಲ್ಲ ಎಂದು ಘೋಷಣೆ ಕೂಗಿದರು.

ರಸ್ತೆಯಲ್ಲಿಯೇ ಎಂಇಎಸ್ ಮುಖಂಡ ಬಾಳಾ ಠಾಕ್ರೆ ಹಾಗೂ ಉದ್ಧವ್‌ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಭಾವಚಿತ್ರವನ್ನು ನೆಲಕ್ಕೆ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದರು.

ಇದನ್ನೂ ಓದಿ | Border Dispute | ಸವದತ್ತಿಗೆ ಬಂದಿದ್ದ ಮಹಾರಾಷ್ಟ್ರದ 145 ಬಸ್‌ ಸುರಕ್ಷಿತವಾಗಿ ವಾಪಸ್‌: ಬೆಳಗಾವಿ ಪೊಲೀಸರಿಗೆ ಮಹಾ ಧನ್ಯವಾದ

Exit mobile version