Site icon Vistara News

Border dispute | ಗಡಿನಾಡಿನಲ್ಲಿ ಬೀದಿಗಿಳಿದ ಕನ್ನಡಪರ ಸಂಘಟನೆಗಳು; ಪ್ರತಿಕೃತಿ ದಹಿಸಿ ಆಕ್ರೋಶ

border dispute ಮಹಾರಾಷ್ಟ್ರ ಬೆಳಗಾವಿ

ಬೆಳಗಾವಿ: ಕರ್ನಾಟಕದ ವಿರುದ್ಧ ಕತ್ತಿ ಮಸಿಯುತ್ತಿರುವ ಮಹಾರಾಷ್ಟ್ರ ನಾಯಕರ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ. ಗಡಿಭಾಗದಲ್ಲಿ (Border dispute) ಕೆಲ ಮರಾಠಿಗರ ಪುಂಡಾಟ ಮುಂದುವರಿದಿದ್ದು, ಬಸ್‌ಗೆ ಮಸಿ ಬಳಿದು, ಕಲ್ಲು ತೂರಾಟ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕದ ಬಸ್‌ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆಯುತ್ತಿರುವುದು ಈಗ ರಾಜ್ಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Border dispute

ಕರವೇ ಶಿವರಾಮೇಗೌಡ ಬಣದ ಬೆಳಗಾವಿ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಪ್ರತಿಕೃತಿಯನ್ನು ಮೆರವಣಿಗೆ ಮಾಡಿ, ಅಣಕು ಶವಯಾತ್ರೆ ಮೂಲಕ ಆಕ್ರೋಶವನ್ನು ಹೊರಹಾಕಲಾಗಿದೆ.

Border dispute

ಅಣಕು ಶವಯಾತ್ರೆ ಬಳಿಕ ಪ್ರತಿಕೃತಿ ದಹಿಸಲು ಕನ್ನಡಪರ ಸಂಘಟನೆ ಸದಸ್ಯರು ಮುಂದಾದರೂ, ಈ ವೇಳೆ ಪೊಲೀಸರು- ಕನ್ನಡ ಪರ ಸಂಘಟನೆ ಮುಖಂಡರ ಮಧ್ಯೆ ವಾಗ್ವಾದ- ನೂಕುನುಗ್ಗಲು ನಡೆಯಿತು. ಪ್ರತಿಕೃತಿ ದಹಿಸಲು ಅವಕಾಶ ನೀಡದ ಪೊಲೀಸರ ಕ್ರಮಕ್ಕೆ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಏಕನಾಥ ಶಿಂಧೆ ಭಾವಚಿತ್ರ ಕಾಲಿನಿಂದ ತುಳಿದು ಅಸಮಾಧಾನ ಹಾಕಿ ಫೋಟೊಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ರಾಜಕೀಯ ನಾಯಕರ ಮೌನ
ಗಡಿ ವಿಚಾರದಲ್ಲಿ ತುಟಿ ಬಿಚ್ಚದ ಬೆಳಗಾವಿ ರಾಜಕೀಯ ನಾಯಕರ ವಿರುದ್ಧ ಕಿಡಿಕಾರಿದರು. ಬೆಳಗಾವಿಯಲ್ಲಿ ಕರವೇ (ಶಿವರಾಮೇಗೌಡ ಬಣದ) ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಮಾತನಾಡಿ, ಬೆಳಗಾವಿಯ ಕೆಲ ರಾಜಕೀಯ ನಾಯಕರು ಎಂಇಎಸ್ ಏಜೆಂಟರ್ ಆಗಿದ್ದಾರೆ. ಇನ್ನೂ ಹಲವು ರಾಜಕೀಯ ನಾಯಕರು ಎಂಇಎಸ್ ಗುಲಾಮರಾಗಿದ್ದಾರೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ನಾಯಕರಿಗೆ ಇರುವ ಬದ್ಧತೆ ಇವರಿಗಿಲ್ಲ. ರಾಜ್ಯದ ಯಾವೊಬ್ಬ ರಾಜಕೀಯ ನಾಯಕರು ಗಡಿ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮಹಾರಾಷ್ಟ್ರ ನಾಯಕರ ಪುಂಡಾಟಿಕೆಯನ್ನು ಇಲ್ಲಿನ ಜನಪ್ರತಿನಿಧಿಗಳು ಟೀಕಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

Border dispute

ಮಹಾರಾಷ್ಟ್ರದಿಂದ ಗಡಿ ತಗಾದೆ ಹಿನ್ನೆಲೆ ಇತ್ತ ಕೊಪ್ಪಳ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಬಸ್‌ಗೆ ಮಸಿ ಬಳಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಕನ್ನಡಿಗರ ತಾಳ್ಮೆ ಪರೀಕ್ಷಿಸದಂತೆ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ | Border dispute | ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗೆ ಕಲ್ಲು ತೂರಾಟ; 150 ಬಸ್‌ಗಳ ಕಾರ್ಯಾಚರಣೆ ಸ್ಥಗಿತ

Exit mobile version