ಬೆಂಗಳೂರು: ಮನೆಯಿಂದ ಹೊರಟು ದಾರಿ ತಪ್ಪಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ 13 ವರ್ಷದ ಬಾಲಕನೊಬ್ಬನನ್ನು (Boy Missing) ಸಂಚಾರಿ ಪೊಲೀಸರು ರಕ್ಷಿಸಿ ಪಾಲಕರ ಕೈಗೆ ಒಪ್ಪಿಸಿದ್ದಾರೆ.
ಸೋಮವಾರ ರಾತ್ರಿ ಚಿಕ್ಕಪೇಟೆ ಸಂಚಾರಿ ಕಾನ್ಸ್‌ಟೇಬಲ್ ಶ್ರೀಕಾಂತ್ ಸೂಳೆಬಾವಿ ಕರ್ತವ್ಯದಲ್ಲಿದ್ದರು. ಈ ವೇಳೆ ಮೆಜೆಸ್ಟಿಕ್‌ನಲ್ಲಿ ಬಾಲಕನೊಬ್ಬ ದಿಕ್ಕು ತೋಚದಂತೆ ಒಬ್ಬಂಟಿಯಾಗಿ ಓಡಾಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಸಮೀಪ ಹೋಗಿ ಬಾಲಕನ ಪೂರ್ವಪರ ವಿಚಾರಿಸಿದ್ದಾರೆ. ಹೊಂಗಸಂದ್ರದ ನಿವಾಸಿ ಗೌರಿಶಂಕರ್ ಎಂಬುವವರ ಮಗ ಜ್ಞಾಯನೇಶ್ (13) ಎಂದು ತಿಳಿದು ಬಂದಿದೆ.
ಆಗ ಬಾಲಕ ತಾನು ಬೊಮ್ಮಸಂದ್ರದಿಂದ ತಪ್ಪಿಸಿಕೊಂಡಿರುವುದಾಗಿ ಕಾನ್ಸ್‌ಟೇಬಲ್ ಶ್ರೀಕಾಂತ್ ಸೂಳೆಬಾವಿ ಅವರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಶ್ರೀಕಾಂತ್ ಅವರು ಬಾಲಕನ ಪೋಷಕರನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದ್ದು, ಮರಳಿ ಪೋಷಕರ ಮಡಿಲು ಸೇರಿಸಿದ್ದಾರೆ.
ಇದನ್ನೂ ಓದಿ: Accident News: ಅಜಾಗರೂಕ ಚಾಲನೆ, ಸ್ಕೂಟರ್ ಸವಾರನ ಪ್ರಾಣ ತೆಗೆದ ಕಾರು ಚಾಲಕಿ
ಕಾನ್ಸ್‌ಟೇಬಲ್ ಶ್ರೀಕಾಂತ್‌ರ ಸಮಯಪ್ರಜ್ಞೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ ಶ್ರೀಕಾಂತರಿಗೆ ಕೆಲಸಕ್ಕೆ ಶಬಾಷ್ ಎಂದಿದ್ದಾರೆ.