ಶಿರಸಿ (ಯಲ್ಲಾಪುರ): ಗ್ರಾಮಕ್ಕೆ ಸೂಕ್ತ ರಸ್ತೆ ಇಲ್ಲದ ಕಾರಣ ಚುನಾವಣೆ ಬಹಿಷ್ಕರಿಸಲು (Boycott of Election) ನಿರ್ಧರಿಸಲಾಗಿದೆ ಎಂಬ ಬ್ಯಾನರ್ ಹಾಕಿ ನೂತನವಾಗಿ ಪ್ರತಿಭಟಿಸಿದ ಘಟನೆ ಉ.ಕ. ಜಿಲ್ಲೆ ಯಲ್ಲಾಪುರ ತಾಲೂಕಿನ ಜಮಗುಳಿ ಗ್ರಾಮದಲ್ಲಿ ನಡೆದಿದೆ.
ಸಿಸಿ (ಪಕ್ಕಾ) ರಸ್ತೆ ನಿರ್ಮಾಣಕ್ಕಾಗಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯುಳ್ಳ ಬ್ಯಾನರ್ ಹಾಕಿದ ಇಲ್ಲಿನ ಗ್ರಾಮಸ್ಥರು, ರಸ್ತೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ನೀಡಿದರೂ ಯಾರು ಕೂಡಾ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ. ಊರಿಗೆ ರಸ್ತೆ ಮಾಡಿಸಿಕೊಡಿ, ಇಲ್ಲವಾದರೆ ಮತ ಕೇಳಬೇಡಿ ಎಂದು ಬ್ಯಾನರ್ ಅಳವಡಿಕೆ ಮಾಡಿದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಊರಿಗೆ ತೆರಳಲು ಸೂಕ್ತ ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ನಿತ್ಯ ನರಕ ಅನುಭವಿಸುವಂತಾಗಿದೆ. ಈ ಭಾಗದಲ್ಲಿ 55 ಮನೆಗಳಿದ್ದು, 300 ಮತದಾರರಿದ್ದಾರೆ. ರಸ್ತೆ ಮಾಡದಿದ್ದರೆ 2023ರ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಬ್ಯಾನರ್ ಹಾಕಿ ಎಚ್ಚರಿಕೆ ನೀಡಿದ್ದಾರೆ. ಜಮಗುಳಿ ಗ್ರಾಮದ ಜನರೆಲ್ಲರೂ ಒಗ್ಗಟ್ಟಾಗಿ ರಸ್ತೆಗಾಗಿ ಚುನಾವಣೆ ಬಹಿಷ್ಕಾರದ ಬೋರ್ಡನ್ನು ಗ್ರಾಮದ ಮುಂಭಾಗದಲ್ಲೇ ಅಳವಡಿಸಿ ಪ್ರತಿಭಟಿಸಿದ್ದಾರೆ.
ಇದನ್ನೂ ಓದಿ: Pawan Kalyan: ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ