Site icon Vistara News

Road Accident: ಬುಲೆರೋ ಡಿಕ್ಕಿಯಾಗಿ ಕಾಲುವೆಗೆ ಎಗರಿದ ಎತ್ತುಗಳು; ಸತ್ತ ಕೋಳಿಗೆ ಮುಗಿಬಿದ್ದ ಜನ್ರು!

Bolero vehicle collides with bullock cart

ವಿಜಯನಗರ/ಗದಗ: ಕೋಳಿ ತುಂಬಿದ ಬುಲೆರೋ ವಾಹನವು ಎತ್ತಿನ ಬಂಡಿಗೆ ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎತ್ತಿನ ಬಂಡಿ ಕಾಲುವೆಗೆ ಬಿದ್ದಿದೆ. ಅದರಲ್ಲಿ ಒಂದು ಎತ್ತು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮಲಪನ ಗುಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ರೈತ ಹನುಮಂತಪ್ಪ ಎಂಬುವವರಿಗೆ ಸೇರಿದ ಎತ್ತುಗಳು ಕಾಲುವೆಗೆ ಬಿದ್ದಿವೆ. ಅದರಲ್ಲಿ ಒಂದು ಎತ್ತು ಮೃತಪಟ್ಟಿದೆ. ಹೊಸಪೇಟೆಯಿಂದ ಗಂಗಾವತಿಗೆ ಕೋಳಿ ತುಂಬಿದ ಬುಲೆರೋ ವಾಹನ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎತ್ತಿನ ಬಂಡಿಗೆ ಡಿಕ್ಕಿಯಾಗಿದೆ. ಇತ್ತ ಅಪಘಾತ ನಡೆಯುತ್ತಿದ್ದಂತೆ ಸತ್ತ ಕೋಳಿಗಳನ್ನು ಒಯ್ಯಲು ಜನರು ಮುಗಿಬಿದ್ದರು. ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಂಡ ಕಂಡವರ ಮೇಲೆ ಗೂಳಿ ದಾಳಿ

ಗದಗ: ಇಷ್ಟು ದಿನ ಬೀದಿನಾಯಿ ದಾಳಿಯಿಂದ ಜನರು ಕಂಗೆಟ್ಟು ಹೋಗಿದ್ದರು. ಇದೀಗ ಕಂಡ ಕಂಡವರ ಮೇಲೆ ಗೂಳಿಯೊಂದು ದಾಳಿ (Bull attack) ಮಾಡುತ್ತಿದೆ. ಹೀಗಾಗಿ ಜನರು ಓಡಾಡಲು, ವಾಹನದಲ್ಲಿ ತೆರಳುವಾಗ ಭಯದಲ್ಲೇ ಓಡಾಡುವಂತಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಏಕಾಏಕಿ ಗೂಳಿ ನುಗ್ಗಿ ದಾಳಿ ಮಾಡುತ್ತಿದೆ.

ಗೂಳಿಯ ಡೆಡ್ಲಿ ಅಟ್ಯಾಕ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗದಗದ ಬೆಟಗೇರಿ ಅವಳಿ ನಗರದಲ್ಲಿ ಗೂಳಿಯ ಹಾವಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಅತ್ತಿಂದಿತ್ತ ಓಡೋಡಿ ಬಂದ ಬೀದಿ ದನಗಳು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ದಾಳಿ ಮಾಡಿದೆ.

ಗೂಳಿ ದಾಳಿಗೆ ವ್ಯಕ್ತಿಯ ತಲೆ ಗಂಭೀರ ಪೆಟ್ಟಾಗಿದೆ. ಕಳೆದ 15 ದಿನಗಳಲ್ಲಿ 8 ಜನರ ಮೇಲೆ ದಾಳಿ ಮಾಡಿದೆ. ಗೂಳಿ ದಾಳಿ ನಿಯಂತ್ರಣ ಮಾಡದ ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Exit mobile version