Site icon Vistara News

Road Accident: ಚಿಕ್ಕಮಗಳೂರಿನಲ್ಲಿ ಬಸ್‌ ಪ್ರಪಾತಕ್ಕೆ ಬಿದ್ದು ಮಹಿಳೆ ಸಾವು; ಐವರ ಸ್ಥಿತಿ ಗಂಭೀರ

Bus Falls Into Gorge

Bus Falls Into Gorge In Chikmagalur, One Dead

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಖಾಸಗಿ ಬಸ್ಸೊಂದು ಶನಿವಾರ ಬೆಳಗ್ಗೆ (ನವೆಂಬರ್‌ 4) ಪ್ರಪಾತಕ್ಕೆ ಉರುಳಿದ್ದು (Bus Falls Into Gorge), ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಐವರಿಗೆ ಗಂಭೀರವಾಗಿ (Road Accident) ಗಾಯಗಳಾಗಿದ್ದು, ಅವರಿಗೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಿಂದ ಹೊರನಾಡಿಗೆ ಹೊರಟಿದ್ದ ಪ್ರವಾಸಿಗರ ಬಸ್‌ ಚೀಕನಹಳ್ಳಿ ಕ್ರಾಸ್‌ ಬಳಿ ಕಂದಕಕ್ಕೆ ಉರುಳಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಪ್ರಪಾತಕ್ಕೆ ಉರುಳಿದೆ. ಬೆಂಗಳೂರು, ಹಾಸನ ಹಾಗೂ ಮೂಡಿಗೆರೆ ಮಾರ್ಗವಾಗಿ ಹೊರನಾಡಿಗೆ ತೆರಳುವಾಗ ಘಟನೆ ನಡೆದಿದೆ.

ಬಸ್‌ ಕಂದಕಕ್ಕೆ ಉರುಳಿದ ಪರಿಣಾಮ ಬೆಂಗಳೂರಿನ ಯಲಹಂಕ ನಿವಾಸಿಯಾದ ಸುರೇಖಾ (45) ಎಂಬುವರು ಮೃತಪಟ್ಟಿದ್ದಾರೆ. ಬಸ್‌ನಲ್ಲಿ 48 ಪ್ರವಾಸಿಗರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಐವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಡೆಗೋಡೆ ನಿರ್ಮಾಣ ಮರೀಚಿಕೆ

ತಾಲೂಕಿನ ಇಂತಹ ಹತ್ತಾರು ಕಣಿವೆಗಳಿದ್ದು, ಬಸ್‌ ಸೇರಿ ಹಲವು ವಾಹನಗಳು ಕಂದಕಕ್ಕೆ ಉರುಳುವುದು ಸಾಮಾನ್ಯ ಎಂಬಂತಾಗಿದೆ. ವಾಹನಗಳು ಕಂದಕಕ್ಕೆ ಉರುಳುವುದನ್ನು ತಪ್ಪಿಸಲು ತಡೆಗೋಡೆ ನಿರ್ಮಿಸಿ ಎಂಬುದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಹತ್ತಾರು ಬಾರಿ ಮನವಿ ಮಾಡಿದರೂ ಇದುವರೆಗೆ ತಡೆಗೋಡೆ ನಿರ್ಮಿಸಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಡೆಗೋಡೆ ಇಲ್ಲ ರಸ್ತೆಗಳು.

ಇದನ್ನೂ ಓದಿ: Road Accident : ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ದುರ್ಮರಣ; ಪ್ರಪಾತಕ್ಕೆ ಉರುಳಿದ ಕಾರು, ಬಸ್‌

ಚೀಕನಹಳ್ಳಿ ಕ್ರಾಸ್‌ ಬಳಿಯೇ ಸುಮಾರು 70ಕ್ಕೂ ವಾಹನಗಳು ಕಂದಕಕ್ಕೆ ಉರುಳಿವೆ. ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಬದಿ ತಡೆಗೋಡೆಗಳನ್ನು ನಿರ್ಮಿಸಿ, ಅಪಘಾತಗಳನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version