ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನ ಟಯರ್ ಬ್ಲಾಸ್ಟ್ (Bus Tyre Blast) ಆಗಿ ಪ್ರಯಾಣಿಕರೊಬ್ಬರ ಕಾಲು ತುಂಡಾದ ಘಟನೆ ವಿದ್ಯಾರಣ್ಯಪುರದ ಆರ್ಚ್ ಬಳಿ ಸೋಮವಾರ (ಡಿ. ೫) ನಡೆದಿದೆ.
ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರ್ ಆರ್ ನಗರದಿಂದ ಯಲಹಂಕ ಕಡೆಗೆ ಬಿಎಂಟಿಸಿ ಬಸ್ ಸಂಚಾರ ಮಾಡುತ್ತಿತ್ತು. ಈ ವೇಳೆ ಬಸ್‌ನ ಹಿಂಬದಿ ಟಯರ್ ಬ್ಲಾಸ್ಟ್ ಆಗಿದೆ. ಅದರ ರಭಸಕ್ಕೆ ಬಸ್‌ನ ಒಳಭಾಗದಲ್ಲಿದ್ದ ತಗಡು ಕಿತ್ತುಕೊಂಡು ಬಂದಿದೆ.
ಬಸ್ ಒಳಗಿನ ತಗಡು ಕಿತ್ತು ಬಂದಿದ್ದೇ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರ ಕಾಲಿಗೆ ಬಡಿದಿದ್ದು, ಆ ರಭಸಕ್ಕೆ ಅವರ ಕಾಲು ಕಾಲು ತುಂಡಾಗಿದೆ. ತೀವ್ರ ರಕ್ತಸ್ರಾವವೂ ಆಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ | ಜಮೀನು ಕಬಳಿಸಲು ಪತಿಗೆ ಸಹಾಯ: IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್ ಗಾಯಕ ಗಂಭೀರ ಆರೋಪ