Site icon Vistara News

No water in Bangalore : ಮೆಟ್ರೋ ಪಿಂಕ್‌ ಲೈನ್‌ ಕಾಮಗಾರಿ ಎಫೆಕ್ಟ್‌; ಫೆ. 26ರಂದು ಕಾವೇರಿ ನೀರು ಪೂರೈಕೆ ಸ್ಥಗಿತ

drink water

ಬೆಂಗಳೂರು: ರಾಜಧಾನಿಯಲ್ಲಿ ಒಂದು ದಿನದ ಮಟ್ಟಿಗೆ ಕಾವೇರಿ ನೀರು ಪೂರೈಕೆ ಬಂದ್‌ ಆಗಲಿದ್ದು, ಮಿತ ಬಳಕೆ ಮಾಡುವುದು ಒಳಿತು. ಫೆ. 26ರ ಭಾನುವಾರ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿರುವ ಮಾಹಿತಿಯನ್ನು ಜಲಮಂಡಳಿ (No water in Bangalore) ತಿಳಿಸಿದೆ.

ಬೆಂಗಳೂರು ಜಲಮಂಡಳಿಯು ಕಾವೇರಿ 1 ಹಂತದಡಿಯಲ್ಲಿ ಬರುವ ದಕ್ಷಿಣ ಪೂರ್ವ-1 ಉಪವಿಭಾಗದ ವ್ಯಾಪ್ತಿಯಲ್ಲಿ ಮೆಟ್ರೋ ಪಿಂಕ್ ಲೈನ್ ಕಾಮಗಾರಿಯು (ಕೋನೇನ ಅಗ್ರಹಾರದಿಂದ ನಾಗವಾರದವರೆಗೆ) ಪ್ರಗತಿಯಲ್ಲಿದೆ. ಈ ಮಾರ್ಗ ಹಾದು ಹೋಗಿರುವ ನೀರಿನ ಕೊಳವೆಗಳನ್ನು ಉನ್ನತೀಕರಿಸಿ ಸ್ಥಳಾಂತರಿಸುವ ಹಾಗೂ ಹೊಸದಾಗಿ ನಿರ್ಮಿಸಿರುವ ಕೊಳವೆ ಮಾರ್ಗಗಳನ್ನು ನೀರು ಸರಬರಾಜು ಮಾರ್ಗಗಳ ಜಾಲಕ್ಕೆ ಮರುಜೋಡಣೆ ಮಾಡುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಹೀಗಾಗಿ ಫೆಬ್ರವರಿ 26ರ ಭಾನುವಾರದಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರಿನ ಸುಮಾರು ನೂರಕ್ಕೂ ಹೆಚ್ಚು ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಯಾವ್ಯಾವ ಏರಿಯಾದಲ್ಲಿ ನೀರಿಲ್ಲ?

ನೇತಾಜಿ ನಗರ, ನಾಗಮ್ಮ ನಗರ, ಕೇಶವ ನಗರ, ಕೆ.ಪಿ.ಅಗ್ರಹಾರ, ರಾಘವೇಂದ್ರ ಕಾಲೋನಿ, ಟಿಪ್ಪುನಗರ, ಆನಂದಪುರ, ಚಾಮರಾಜಪೇಟೆ, ರಾಮಚಂದ್ರ ಅಗ್ರಹಾರ, ಆದರ್ಶನಗರ, ಕನ್ನೀರ್‌ ಕಾಲೋನಿ, ನಂಜಾಂಬ ಅಗ್ರಹಾರ, ವಾಲ್ಮೀಕಿ ನಗರ, ವಿ.ಎಸ್ ಗಾರ್ಡನ್, ಹರಿಕುಂಟೆ, ಪಾದರಾಯನಪುರ ಪ್ಲವರ್ ಗಾರ್ಡನ್, ಬನ್‌ಗೈ ಕಾಲೋನಿ, ಆಂಜನಪ್ಪ ಗಾರ್ಡನ್, ಬಿನ್ನಿ ಲೇಔಟ್, ನ್ಯೂ ಬಿನ್ನಿ ಲೇಔಟ್, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್‌ ಕಾಲೋನಿ, ಐಟಿಐ ಲೇಔಟ್, ಗುರುರಾಜ್ ಲೇಔಟ್, ವಿವೇಕಾನಂದ ನಗರ, ಕಾದಿಮಿಷನ್ ಲೇಔಟ್, ಕತ್ರಿಗುಪ್ಪೆ, ತ್ಯಾಗರಾಜನಗರ, ಬಸವನಗುಡಿ, ಶಾಸ್ತ್ರೀನಗರ, ಎನ್.ಆರ್.ಕಾಲೋನಿ, ಬೈರಪ್ಪ ಬ್ಲಾಕ್, ಮೌಂಟ್ ಜಾಯ್ ಎಕ್ಸ್ ಟೆನ್‌ಷನ್, ಅಶೋಕ್ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಜತೆಗೆ ಬನಶಂಕರಿ ಒಂದನೇ ಹಂತ, ಶ್ರೀನಗರ, ಬೃಂದಾವನನಗರ, ಸುಂಕೇನಹಳ್ಳಿ, ಕುಮಾರಸ್ವಾಮಿ ಲೇಔಟ್‌ 1ಮತ್ತು 2ನೇಹಂತ, ಇಸ್ರೋ ಲೇಔಟ್, ಸಮೃದ್ಧಿ ಲೇಔಟ್, ಲಿಯಾಸ್ ನಗರ, ರಾಜ್ಯೋತ್ಸವ ನಗರ, ವಿಠ್ಠಲ್‌ ನಗರ, ಶಾಂತಲಾ ನಗರ, ಶಾಂತಿನಗರ, ವಿನಾಯಕ ನಗರ, ಆನೆಪಾಳ್ಯ, ಎಲ್.ಆರ್.ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಕಿನ್ ಟೌನ್, ಈಜೀಪುರ, ವಿವೇಕ್ ನಗರ, ಅಶೋಕ್‌ ನಗರ, ರಿಚ್‌ಮಂಡ್ ಟೌನ್‌, ಎಂಜಿ ರೋಡ್, ಬ್ರಿಗೇಡ್ ರಸ್ತೆ, ಜೆ.ಕೆ ಪುರಂ, ಎಂ.ವಿ ಗಾರ್ಡನ್, ವಿಕ್ಟೋರಿಯಾ ಲೇಔಟ್, ಮಾಯಾ ಬಜಾರ್, ದೊಮ್ಮಲೂರು, ದೊಮ್ಮಲೂರು ವಿಲೇಜ್, ದೊಮ್ಮಲೂರು ಲೇಔಟ್, ಕಮಾಂಡ್ ಆಸ್ಪತ್ರೆ, ದೊಮ್ಮಲೂರು ೨ನೇ ಹಂತ, ಎಚ್‌ಎಎಲ್‌ ೨ನೇ ಹಂತ ಅಮರಜ್ಯೋತಿ ಲೇಔಟ್, ಕಾರ್ಪೋರೇಷನ್ ಕ್ವಾರ್ಟಸ್‌, ಕೂಡಿಹಳ್ಳಿ, ಎಂ.ಜಿ.ರಸ್ತೆ, ಹನುಮಂತಪ್ಪ ಲೇಔಟ್, ಗಂಗಾಧರ್ ಚೆಟ್ಟಿ ರಸ್ತೆ, ಬಜಾರ್ ಸ್ಟ್ರೀಟ್, ಹಲಸೂರು, ಮರ್ಫಿ ಟೌನ್, ಜೋಗು ಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಗೌತಮಪುರ, ಧೀನಬಂಧುನಗರ, ರಾಜೇಂದ್ರ ನಗರ, ರಾಜೇಂದ್ರ ನಗರ ಸ್ಲಂ, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಮಲಪ್ಪ ರೆಡ್ಡಿ ಲೇಔಟ್, ನಂಜಪ್ಪ ರೆಡ್ಡಿ ಲೇಔಟ್, ಕೆ.ಆರ್. ನಂಜಪ್ಪ ಲೇಔಟ್, ಎನ್.ಆರ್.ಡಿ.ಐ, ಕ್ಯಾಂಪಸ್, ಆಡುಗೋಡಿ, ಕಾವೇರಿ ಸಂಕಿರ್ಣ, ಪೋಲಿಸ್ ಕ್ವಾಟರ್ಸ್, ನೇತ್ರಾವತಿ ೧ ರಿಂದ ೧೦ ಬ್ಲಾಕ್‌ಗಳು, ನಂದಿ ಸಂಕೀರ್ಣ೧ ರಿಂದ ೧೨ ಬ್ಲಾಕ್‌ಗಳು ಮತ್ತು ಟಿಪ್ಪು ಬ್ಲಾಕ್‌ನಲ್ಲೂ ನೀರು ಬರುವುದಿಲ್ಲ.

ಕೋರಮಂಗಲ ೬ನೇ, ೭ನೇ ಬ್ಲಾಕ್, ಕೆ.ಆರ್.ಗಾರ್ಡನ್, ಕೆ.ಎಚ್‌.ಬಿ ಕಾಲೋನಿ, ಜಾನ್ ನಗರ, ಕೋರಮಂಗಲ ವಿಲೇಜ್, ಕೋರಮಂಗಲ ೮ನೇ ಬ್ಲಾಕ್‌, ನಾ‌ಸಿಯಲ್ ಎನ್.ಜಿ.ವಿ, ಜಯನಗರ ೩ನೇ ಬ್ಲಾಕ್, ೪ನೇ ಬ್ಲಾಕ್‌ ಮತ್ತು ೪ನೇ ‘ಟಿ’ ಬ್ಲಾಕ್‌, ತಿಲಕ್ ಎಸ್.ಆರ್ ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್ ಮತ್ತು ಆಡುಗೋಡಿ, ವೆಂಕಟೇಶ್ವರ ಲೇಔಟ್, ಎಸ್.ಜಿ.ಪಾಳ್ಯ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಜೋಗಿ ಕಾಲೋನಿ, ಸೆಂಟ್ ವುಡ್ ಅಪಾರ್ಟ್ ಮೆಂಟ್, ಚಿಕ್ಕ ಆಡುಗೋಡಿ, ಬೃಂದಾವನ ನಗರ,ಸೆಂಟ್ ಜಾನ್ಸ್ ಕ್ಯಾಟರ್ಸ್, ಮಾರುತಿ ನಗರ, ವಿ.ಪಿ ರೋಡ್, ಎ.ಕೆ ಕಾಲೋನಿ, ಭೋವಿ ಕಾಲೋನಿ, ಕಲ್ಲಹಳ್ಳಿ, ಕದಿರಯ್ಯನ ಪಾಳ್ಯ, ಲಕ್ಷ್ಮೀಪುರ, ಜಯರಾಜ ನಗರ, ಜೀವನ್ ಭೀಮಾನಗರ, ಜೋಗುಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ನೀರು ಪೂರೈಕೆ ಆಗುವುದಿಲ್ಲ.

ಇದನ್ನೂ ಓದಿ: ಮೊಗಸಾಲೆ ಅಂಕಣ: ರೋಹಿಣಿ, ರೂಪಾ ರಂಪಾಟ: ಸರ್ಕಾರಕ್ಕೆ ಪೇಚಾಟ

Exit mobile version