Site icon Vistara News

Cow slaughter | ಕಸಾಯಿ ಖಾನೆಗೆ ಸಾಗಿಸುತ್ತಿದ್ದ 16 ಕರುಗಳನ್ನು ರಕ್ಷಿಸಿದ ಶ್ರೀ ರಾಮ ಸೇನೆ ಕಾರ್ಯಕರ್ತರು

cow slaughter

ವಿಜಯನಗರ: ಟಾಟಾ ಏಸ್‌ ವಾಹನದ ಮೂಲಕ ಕಸಾಯಿ ಖಾನೆಗೆ ಸಾಗಿಸುತ್ತಿದ್ದ (Cow slaughter) 16 ಕರುಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ರಕ್ಷಿಸಿ ಗೋಶಾಲೆಗೆ ರವಾನಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಘಟನೆ ನಡೆದಿದೆ.

ಹೊಸಪೇಟೆಯ ಕಾಸಾಯಿ ಖಾನೆಗೆ ಟಾಟಾ ಏಸ್ ನಲ್ಲಿ ಕರುಗಳನ್ನು ಒಯ್ಯಲಾಗುತ್ತಿದೆ ಎಂಬ ಮಾಹಿತಿ ಪಡೆದ ಶ್ರೀರಾಮ ಸೇನೆ ಕಾರ್ಯಕರ್ತರು ಮರಿಯಮ್ಮನಹಳ್ಳಿಯಲ್ಲಿ ವಾಹನವನ್ನು ನಡೆದರು. ಗಂಡು ಕರುಗಳು ಎನ್ನುವ ಕಾರಣಕ್ಕಾಗಿ ಕಸಾಯಿ ಖಾನೆಗೆ ಕೊಂಡೊಯ್ಯುತ್ತಿರುವುದಾಗಿ ಈ ವೇಳೆ ಬೆಳಕಿಗೆ ಬಂತು.

ಕರುಗಳನ್ನು ಸಾಗಿಸುತ್ತಿದ್ದ ಸಂತೋಷ, ಈಶಪ್ಪ ಎಂಬುವರನ್ನು ಬಂಧಿಸಲಾಗಿದೆ. ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Cow slaughter | ಅಕ್ರಮ ಕಸಾಯಿ ಖಾನೆಗೆ ಹಿಂದು ಜಾಗರಣ ವೇದಿಕೆ ದಾಳಿ: ಇಬ್ಬರ ಬಂಧನ, ನಾಲ್ಕು ಗೋವುಗಳು ವಶಕ್ಕೆ

Exit mobile version