Site icon Vistara News

Vistara News Launch | ಹೃದ್ರೋಗ ತಜ್ಞ ಡಾ. ಸಿ.ಎನ್‌. ಮಂಜುನಾಥ್‌ಗೆ ಕಾಯಕ ಯೋಗಿ ಪುರಸ್ಕಾರ

ಡಾ.ಸಿ.ಎನ್‌.ಮಂಜುನಾಥ್‌

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಎಂಬ ಸರ್ಕಾರಿ ಸಂಸ್ಥೆಯನ್ನು ಖಾಸಗಿ ಆಸ್ಪತ್ರೆಯನ್ನೂ ಮೀರಿಸುವಂತೆ ಮೆರೆಸುತ್ತಿರುವವರು ಡಾ. ಸಿ.ಎನ್‌. ಮಂಜುನಾಥ್‌. ಇದು ಏಷ್ಯಾದ ಅತಿ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಾ. ಸಿ.ಎನ್‌. ಮಂಜುನಾಥ್‌ ಅವರು ದ ಗ್ರೇಟ್‌ ಹಾರ್ಟ್‌ ಸರ್ಜನ್‌ ಮಾತ್ರವಲ್ಲ, ಒಬ್ಬ ಹೃದಯವಂತ ಡಾಕ್ಟರ್‌ ಆಗಿದ್ದಾರೆ.

ಬಡತನದ ಹಿನ್ನೆಲೆಯಿಂದ ಬಂದು, ಜನರ ಕಷ್ಟಕಾರ್ಪಣ್ಯಗಳನ್ನು ಕಂಡು ಅವರ ನೆರವಿಗೆ ನಿಲ್ಲಬೇಕು ಎನ್ನುವ ಮಹದಾಸೆ ಹೊತ್ತು ವೈದ್ಯರಾದವರು. ವೈದ್ಯಕೀಯ ವಿಜ್ಞಾನದ ಜತೆ ಸಾಮಾಜಿಕ ವಿಜ್ಞಾನವನ್ನೂ ಬೆರೆಸಿ ಸಮಾಜಕ್ಕೇ ಚಿಕಿತ್ಸೆ ಕೊಡಬಲ್ಲ ಡಾ. ಮಂಜುನಾಥ್‌ ಒಬ್ಬ ಗ್ರೇಟ್‌ ಸೋಷಿಯಲ್‌ ಸೈಂಟಿಸ್ಟ್‌ ಕೂಡ. ಕಳೆದ 34 ವರ್ಷಗಳಿಂದ ಜಯದೇವ ಸಂಸ್ಥೆಯನ್ನು ವೈದ್ಯರಾಗಿ, ನಿರ್ದೇಶಕರಾಗಿ ಮುನ್ನಡೆಸುತ್ತಿದ್ದಾರೆ.

ಕೇವಲ ಐದು ದಿನದ ಅವಧಿಯಲ್ಲಿ 200 ಬಡ ಹೃದ್ರೋಗಿಗಳಿಗೆ ಉಚಿತವಾಗಿ ಆಂಜಿಯೊಪ್ಲಾಸ್ಟಿ ಮಾಡಿ ದಾಖಲೆ ಬರೆದಿದ್ದಾರೆ. ಹೃದಯದ ಸಮಸ್ಯೆಯೊಂದಕ್ಕೆ ಇವರು ರೂಪಿಸಿರುವ ʻಮಂಜುನಾಥ್‌ ಟೆಕ್ನಿಕ್‌ʼ ಅತ್ಯಂತ ಅಗ್ಗದ ಮತ್ತು ಭರವಸೆಯ ಚಿಕಿತ್ಸೆಯಾಗಿದೆ. ಪದ್ಮಶ್ರೀ ಪುರಸ್ಕೃತ ಈ ಹೃದಯವಂತ ವೈದ್ಯರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | Vistara news launch | ಗಿರೀಶ್ ಕಾಸರವಳ್ಳಿಗೆ ಕಾಯಕಯೋಗಿ ಪುರಸ್ಕಾರದ ಗೌರವ

Exit mobile version