ಬೆಳಗಾವಿ: ನಗರದ ಟಿಳಕವಾಡಿಯಲ್ಲಿರುವ ಗೋಗಟೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಬಾವುಟವನ್ನು (Kannada Flag) ಪ್ರದರ್ಶನ ಮಾಡಿದ್ದಕ್ಕೆ ಇತರೆ ಕೆಲ ವಿದ್ಯಾರ್ಥಿಗಳಿಂದ ನಡೆದಿದ್ದ ಹಲ್ಲೆ ಪ್ರಕರಣವು ಈಗ ಜಾತಿ ಬಣ್ಣಕ್ಕೆ ತಿರುಗಿದೆ.
ಹಲ್ಲೆ ಮಾಡಿದ ಆರೋಪಿ ವಿದ್ಯಾರ್ಥಿ ಬೆಂಬಲಕ್ಕೆ ದಲಿತ ಪರ ಸಂಘಟನೆಗಳು ನಿಂತಿದ್ದು, ಪ್ರತಿಭಟನೆಯನ್ನು ಪ್ರಾರಂಭಿಸಿವೆ. ಶನಿವಾರ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ದಲಿತಪರ ಹೋರಾಟಗಾರರು, ಕನ್ನಡಪರ ಹೋರಾಟಗಾರ ಸಂಪತ್ ಕುಮಾರ್ ಕಾಲೇಜಿಗೆ ಬಂದು ಕನ್ನಡ ಮತ್ತು ಮರಾಠಿ ಗದ್ದಲವನ್ನು ಎಬ್ಬಿಸಿದ್ದಾನೆ ಎಂದು ಆರೋಪಿಸಿದರು.
ಕನ್ನಡಿಗರು ಮತ್ತು ಮರಾಠಿಗರ ನಡುವೆ ವೈಮನಸ್ಯ ಮೂಡುವಂತೆ ಮಾಡಿದ ಸಂಪತ್ ಕುಮಾರ್ ಕುಮಾರ್ ಮೇಲೆ ಕ್ರಮ ಕೈಗೊಳ್ಳುವಂತೆ ಹೋರಾಟಗಾರರ ಒತ್ತಾಯ ಮಾಡಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಮೊದಲು ಅವಾಚ್ಯವಾಗಿ ನಿಂದಿಸಿ ಕಾಲು ತುಳಿದಿದ್ದಕ್ಕೆ ಹಲ್ಲೆ ಮಾಡಲಾಗಿದೆ. ವೈಯಕ್ತಿಕ ಕಾರಣಕ್ಕೆ ಈ ಹಲ್ಲೆಯಾಗಿದ್ದೇ ವಿನಃ ಕನ್ನಡ ಬಾವುಟವನ್ನು ಎತ್ತಿ ಹಿಡಿದಿದ್ದಕ್ಕೆ ಅಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಲವು ಬಾರಿ ದಲಿತ ಎಂದು ಸಹಪಾಠಿ ವಿದ್ಯಾರ್ಥಿ ನಿಂದಿಸಿದ್ದ. ಕಾಲೇಜು ಕಾರ್ಯಕ್ರಮದಲ್ಲೂ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಹಲ್ಲೆ ಮಾಡಿದ್ದೇನೆ. ಈಗ ಹಾಕಿರುವ ಕೇಸ್ ವಾಪಸ್ ಪಡೆದುಕೊಳ್ಳಲಿ ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ | Kannada New Movie | ʻಬಾಂಡ್ ರವಿʼ ಟ್ರೈಲರ್ ಔಟ್: ಸಿನಿಮಾ ರಿಲೀಸ್ ಯಾವಾಗ?