Site icon Vistara News

Cauvery Protest : ಕಾವೇರಿ ನೀರಿಗಾಗಿ ಬೆಂಗಳೂರು ಅಲ್ಲ ಕರ್ನಾಟಕವೇ ಬಂದ್‌! ಮತ್ತೊಂದು ಸುತ್ತಿನ ಸಭೆ

Cauvery Protest

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು (Cauvery Protest) ಬಿಡುವ ವಿಚಾರ ಸಲುವಾಗಿ ದಿನದಿಂದ ದಿನಕ್ಕೆ ರೈತರ ಕಿಡಿ ಹೆಚ್ಚುತ್ತಿದೆ. ದಿನಕ್ಕೊಂದು ಪ್ರತಿಭಟನೆ, ರೈತರ ಆಕ್ರೋಶಕ್ಕೆ ರಾಜ್ಯವು ಸಾಕ್ಷಿಯಾಗುತ್ತಿದೆ. ಈ ಮಧ್ಯೆ ಸೆ.26ಕ್ಕೆ ಬೆಂಗಳೂರು ಬಂದ್‌ಗೆ ಜಲ ಸಂರಕ್ಷಣಾ ಸಮಿತಿ ಕರೆ ಕೊಟ್ಟಿದೆ. ಈ ನಡುವೆ ಬೆಂಗಳೂರಷ್ಟೇ ಅಲ್ಲ ಕರ್ನಾಟಕವೇ ಬಂದ್‌ ಆಗಬೇಕೆಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಭಾನುವಾರ ಮಧ್ಯಾಹ್ನ ಮತ್ತೊಂದು ಸುತ್ತಿನ ಸಭೆಗೆ ಮುಂದಾಗಿದ್ದಾರೆ.

ಮತ್ತೊಂದು ಸುತ್ತಿನ ಸಭೆ

ಸೆ. 26ಕ್ಕೆ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಬಂದ್ ವಿಚಾರವಾಗಿ ಒಮ್ಮತ ಮೂಡಿಲ್ಲ. ದಿನಾಂಕದ ಕುರಿತು ಮಾತನಾಡದೆ, ಮಾಹಿತಿ ನೀಡದೆ ಬಂದ್‌ಗೆ ಕರೆ ನೀಡಲಾಗಿದೆ. ಕೇಂದ್ರವನ್ನು ಎಚ್ಚರಿಸಲು ಬಂದ್ ಮಾಡಲಾಗುತ್ತಿದೆ. ಎರಡೆರಡು ಬಂದ್ ಮಾಡಿದರೆ ಉಪಯೋಗವಿಲ್ಲ, ಬೆಂಗಳೂರು ಬಂದ್ ಅಲ್ಲ, ಕರ್ನಾಟಕ ಬಂದ್ ಆಗಬೇಕು ಎಂದು ವಿಸ್ತಾರ ನ್ಯೂಸ್‌ಗೆ ಕರವೇ ಪ್ರವೀಣ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಿ, ಆನಂತರ ದಿನಾಂಕ ಪ್ರಕಟಿಸುತ್ತೇವೆ ಎಂದಿದ್ದಾರೆ.

ಇನ್ನು ಭಾನುವಾರ ಮಧ್ಯಾಹ್ನ 3 ಗಂಟೆಗೆ ಜಲ ಸಂರಕ್ಷಣಾ ಸಮಿತಿ ಸಭೆ ಕರೆದಿದೆ. ಬಂದ್ ಯಶಸ್ವಿ ಆಗಲು, ಕಾರ್ಯಯೋಜನೆ ಕುರಿತು ಫ್ರೀಡಂ ಪಾರ್ಕ್‌ನಲ್ಲಿ ಸಂಘಟನೆಗಳ ಜತೆ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಚಂದ್ರು, ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಬಂದ್ ರೂಪುರೇಷೆಗಳ ಕುರಿತು ಚರ್ಚೆ ನಡೆಯಲಿದೆ.

ಸ್ತಬ್ಧವಾಗುತ್ತಾ ರಾಜಧಾನಿ ಬೆಂಗಳೂರು?

ಬೆಂಗಳೂರು ಬಂದ್ ಗೆ ಕರೆ ಕೊಟ್ಟಿರುವ ಜಲ ಸಂರಕ್ಷಣಾ ಸಮಿತಿಗೆ ಈಗಾಗಲೇ ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಕೊಟ್ಟಿವೆ. ಖಾಸಗಿ ಶಾಲಾ ಒಕ್ಕೂಟ, ರೂಪ್ಸಾ, ಕ್ಯಾಮ್ಸ್ ನೈತಿಕ ಬೆಂಬಲ ನೀಡಲು ಮುಂದಾಗಿವೆ. ಹಾಗಾದರೆ ಬಂದ್‌ಗೆ ಯಾರ್ಯಾರ ಸಾಥ್‌ ಇದೆ ಎಂಬುದರ ಮಾಹಿತಿ ಇಲ್ಲಿದೆ.

ಇವರೆಲ್ಲರೂ ಬಂದ್‌ಗೆ ಬೆಂಬಲ

  1. ಅಖಿಲ‌ ಕರ್ನಾಟಕ ಯುವ ಕನ್ನಡಿಗರ ವೇದಿಕೆ,
  2. ಕರ್ನಾಟಕ ಚಾಲಕರ ವೇದಿಕೆ
  3. ಕರ್ನಾಟಕ ಕನ್ನಡಿಗರ ವೇದಿಕೆ,
  4. ಕರ್ನಾಟಕ ಯುವ ರಕ್ಷಣಾ ವೇದಿಕೆ
  5. ಸುವರ್ಣ ಕರ್ನಾಟಕ ಹಿತಾರಕ್ಷಣ ವೇದಿಕೆ
  6. ಕಾವೇರಿ ಕನ್ನಡಿಗರ ವೇದಿಕೆ
  7. ಅಖಿಲ ಭಾರತ ಕಾರ್ಮಿಕರ ಹಿತರಕ್ಷಣಾ ವೇದಿಕೆ
  8. . ಜೈ ಭಾರತ ರಕ್ಷಣಾ ವೇದಿಕೆ
  9. ಕಾರ್ಮಿಕರ ಪಡೆ
  10. ಕರವೇ ಕನ್ನಡಿಗರ ಸಾರಥ್ಯ
  11. ಕರವೇ ಕನ್ನಡ ಸೇನೆ
  12. ನಮ್ಮ‌ ನಾಡ ರಕ್ಷಣಾ ವೇದಿಕೆ
  13. ಕರ್ನಾಟಕ ಸಿಂಹ ಘರ್ಜನೆ ವೇದಿಕೆ
  14. ಕರುನಾಡ ಕಾವಲು ಪಡೆ
  15. ಜೈ ಕರ್ನಾಟಕ
  16. ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ
  17. ಹೊಯ್ಸಳ ಸೇನೆ
  18. ಕರವೇ ಗಜಸೇನೆ
  19. ಜೈ ಕರುನಾಡ ಯುವಸೇನೆ
  20. ಕರುನಾಡ ಯುವಪಡೆ
  21. ಕೆಂಪೇಗೌಡ ಸೇನೆ
  22. ಒಕ್ಕಲಿಗರ ಯುವ ವೇದಿಕೆ
  23. ನೆರವು ಕಟ್ಟದ ಕಾರ್ಮಿಕರ ಸಂಘ
  24. ಅಖಿಲ‌ ಕರ್ನಾಟಕ ಯುವ ಸೇನೆ
  25. ಯುವ ಶಕ್ತಿ‌ ಕರ್ನಾಟಕ
  26. ದಲಿತ ಸಂರಕ್ಷಣ ಸಮಿತಿ
  27. ಕರ್ನಾಟಕ ಸಮರ ಸೇನೆ
  28. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ
  29. ದಲಿತ ಜನಸೇನಾ
  30. ಕರುನಾಡ ಜನ ಬೆಂಬಲ ವೇದಿಕೆ
  31. ಕರ್ನಾಟಕ ದಲಿತ ಜನಸೇನೆ
  32. ಜೈ ಭಾರತ ಚಾಲಕರ ಸಂಘ
  33. ರಾಜ್ಯ ಕರ್ನಾಟಕ ಸೇನೆ
  34. ಕರವೇ ಜನಸೇನೆ
  35. ಅಖಂಡ ಕರ್ನಾಟಕ‌ ರಕ್ಷಣಾ ವೇದಿಕೆ
  36. ಕರುನಾಡ ಸೇನೆ
  37. ಕರ್ನಾಟಕ ಚಳುವಳಿ ವೇದಿಕೆ
  38. ಕನ್ನಡ ಸಾಹಿತ್ಯ ಪರಿಷತ್
  39. ಓಲಾ ಹಾಗೂ ಉಬರ್ ಮಾಲೀಕರ ಸಂಘ
  40. ರಾಜ್ಯ ಕಬ್ಬು ಬೆಳೆಗಾರರ ಸಂಘ
  41. ಆಮ್ ಆದ್ಮಿ ಪಕ್ಷ
  42. ಕನ್ನಡ ಚಳವಳಿ ಕೇಂದ್ರ ಸಮಿತಿ
  43. ಜಯ ಕರ್ನಾಟಕ ಸಂಘಟನೆ
  44. ರಾಷ್ಟ್ರೀಯ ಚಾಲಕರ ಒಕ್ಕೂಟ
  45. ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ
  46. ತಮಿಳು ಸಂಘ
  47. ಕೆಂಪೇಗೌಡ ಸಮಿತಿ
  48. ರಾಜಸ್ತಾನಿ ಭಾಷಿಕರ ಸಂಘ
  49. ಕರ್ನಾಟಕ ರಕ್ಷಣಾ ಸೇನೆ
  50. ಆಮ್ ಆದ್ಮಿ ಪಕ್ಷ
  51. ಕನ್ನಡ ಚಳವಳಿ ಕೇಂದ್ರ
  52. ಜಯ ಕರ್ನಾಟಕ ಸಂಘಟನೆ
  53. ರಾಷ್ಟ್ರೀಯ ಚಾಲಕರ ಒಕ್ಕೂಟ
  54. ರೈತ ಮುಖಂಡ ಬಿ ಪುಟ್ಟಸ್ವಾಮಿ
  55. ತಮಿಳು ಭಾಷಿಕರ ಸಂಘ
  56. ಕೆಂಪೇಗೌಡ ಸಮಿತಿ
  57. ರಾಜಸ್ತಾನಿ ಭಾಷಿಕರ ಸಂಘ
  58. ಕರ್ನಾಟಕ ರಕ್ಷಣಾ ಸೇನೆ
  59. ಚಿಕ್ಕ ಪೇಟೆ ವ್ಯಾಪಾರಿಗಳ ಸಂಘ
  60. ಓಲಾ ಉಬರ್ ಚಾಲಕರ ಸಂಘ
  61. 61. ಬಿಜೆಪಿ ಪಕ್ಷ

ಬಂದ್‌ ದಿನ ಏನು ಲಭ್ಯವಿರುತ್ತೆ?
– ಆಂಬ್ಯುಲೆನ್ಸ್ ಸೇವೆ – ತರಕಾರಿ ಹಾಲು – ಮೆಡಿಕಲ್‌– ಆಸ್ಪತ್ರೆ – ಬ್ಯಾಂಕ್ – ಮೆಟ್ರೋ ಓಡಾಟ ಇರಲಿದೆ.

ಬಂದ್‌ ದಿನ ಏನು ಇರುಲ್ಲ?
– ಆಟೋ – ಮ್ಯಾಕ್ಸಿ ಕ್ಯಾಬ್ – ಹೋಟೆಲ್‌, ಬಿಎಂಟಿಸಿ, ಕೆಎಸ್‌ಆರ್‌ಟಿಸಿ– ಓಲಾ, ಊಬರ್– ಚಿಕ್ಕಪೇಟೆ ವ್ಯಾಪಾರ – ಬಿಬಿಎಂಪಿ ಸೇವೆ ಸಿಗುವುದಿಲ್ಲ – ಖಾಸಗಿ ಬಸ್

50- 50 ಬೆಂಬಲ

– ಏರ್ ಪೋರ್ಟ್ ಟ್ಯಾಕ್ಸಿ, – ಲಾರಿ ಮಾಲೀಕರು, – ಸರ್ಕಾರಿ ನೌಕರರು, – ಶಾಪಿಂಗ್ ಮಾಲ್ – ಸರ್ಕಾರಿ ಕಚೇರಿ – ಐಟಿ ಬಿಟಿ ಕಂಪನಿಗಳು

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ ಸಿಕ್ಕಿದೆ. 26 ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಯಾವುದೇ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಘಟಕದಿಂದ ಹೊರಗೆ ತರದಿರಲು ನಿರ್ಧಾರ ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version