Site icon Vistara News

CBSE Affiliation: ಕ್ಷಣ ಕ್ಷಣಕ್ಕೂ ಕಾವೇರುತ್ತಿದೆ ಪೋಷಕರ ಪ್ರತಿಭಟನೆ; ಮಕ್ಕಳೊಂದಿಗೆ ಪೋಷಕರ ಧರಣಿ

#image_title

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಆರ್ಕಿಡ್‌ ಶಾಲೆಗಳ (CBSE Affiliation) ಒಂದೊಂದೆ ಕಳ್ಳಾಟಗಳು ಬಯಲಾಗುತ್ತಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ. ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಆರ್ಕಿಡ್‌ ಶಾಲೆ ಆಡಳಿತ ಮಂಡಳಿ ವಿರುದ್ಧ ಪೋಷಕರು ಸೋಮವಾರ ಬೆಳಗ್ಗೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಆಡಳಿತ ಮಂಡಳಿ ಸಂಜೆ ಪೋಷಕರ ಸಭೆ ಮಾಡುವುದಾಗಿ ಹೇಳಿತ್ತು. ಇತ್ತ ಸಭೆಗೆ ಬಂದ ಪೋಷಕರನ್ನು ಗಂಟೆಗಟ್ಟಲೆ ಶಾಲೆಯ ಗೇಟ್‌ ಬಳಿಯೇ ಕಾಯಿಸಿದ್ದಕ್ಕೆ ಆಕ್ರೋಶಕೊಂಡಿದ್ದಾರೆ.

CBSE Affiliation

ಸಿಬಿಎಸ್‌ಇ (CBSE) ಮಾನ್ಯತೆ ಪಡೆದ ಶಾಲೆ ಎಂದು ಹೇಳಿ ಸ್ಟೇಟ್ ಸಿಲೆಬಸ್‌ನಲ್ಲಿಯೇ ಪರೀಕ್ಷೆ ಬರೆಸಲು ಮುಂದಾಗಿರುವ ಆರ್ಕಿಡ್‌ ಶಾಲಾಡಳಿತದ ವಿರುದ್ಧ ಪೋಷಕರು ರೊಚ್ಚಿಗೆದ್ದಿದ್ದಾರೆ. ಶಾಲಾ ಆಡಳಿತ ಮಂಡಳಿಯ ವರ್ತನೆಗೆ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ. ಸಂಜೆ ಸಭೆಗೆ ಬಂದ ಪೋಷಕರು ಮಕ್ಕಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದು, ಶಾಲೆಯವರು ನಮಗೆ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ ಎಂದು ಕಿಡಿಕಾರಿದರು.

CBSE Affiliation

ಶಾಲೆಯ ಗೇಟ್‌ ಬಳಿಯೇ ನಿಲ್ಲಿಸಿದ್ದಕ್ಕೆ ಸಿಟ್ಟಿಗೆದ್ದ ಪೋಷಕರು ಶಾಲಾ ಆವರಣದೊಳಗೆ ನುಗ್ಗಲು ಮುಂದಾದರು. ಈ ವೇಳೆ ಪೋಷಕರು ಹಾಗೂ ಆಡಳಿತ ಮಂಡಳಿ ನಡುವೆ ನೂಕಾಟ ತಳ್ಳಾಟ ಉಂಟಾಯಿತು. ಶಾಲಾ ಸಿಬ್ಬಂದಿ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿ ಗಲಾಟೆ ಮಾಡಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆಗಮಿಸಿ ಸಂಧಾನ ಸಭೆಗೆ ಮುಂದಾದರು ಯಾವುದೇ ಪ್ರಯೋಜನವಾಗಲಿಲ್ಲ.

ಆರ್ಕಿಡ್ ಶಾಲಾ ಆಡಳಿತ ಮಂಡಳಿಯ ಉದ್ಧಟತನ

ಇತ್ತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಆಡಳಿತ ಮಂಡಳಿಯವರು ನಿಮ್ಮ ಮಕ್ಕಳನ್ನು ಬೇರೆ ಬ್ರ್ಯಾಂಚ್‌ಗೆ ವರ್ಗಾಯಿಸಿಕೊಡುತ್ತೇವೆ. ಟಿಸಿ ತೆಗೆದುಕೊಂಡು ಹೋಗಲು ಕೂಡ ಮುಕ್ತ ಅವಕಾಶವಿದೆ ಎಂದಿದ್ದಾರೆ. ಆದರೆ ಇದು ಯಾವುದಕ್ಕೂ ಒಪ್ಪದ ಪೋಷಕರು ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡಿರುವ ಹಣವನ್ನು ವಾಪಸ್‌ ಕೊಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Youths Drowned: ಸ್ವಿಮ್ಮಿಂಗ್‌ ಪೂಲ್‌ಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವು

Exit mobile version