Site icon Vistara News

Laptop Import: ಲ್ಯಾಪ್ ಟಾಪ್, ಟ್ಯಾಬ್ಲೆಟ್ ಆಮದು ನಿರ್ಬಂಧ; ಕೇಂದ್ರ ಸರ್ಕಾರದ ಕ್ರಮಕ್ಕೆ ಸಿಐಎಂಇಐ ಶ್ಲಾಘನೆ

CIMEI

ಬೆಂಗಳೂರು, ಕರ್ನಾಟಕ: ಕೇಂದ್ರ ಸರ್ಕಾರವು ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಹಾಗೂ ಪರ್ಸನಲ್‌ ಕಂಪ್ಯೂಟರ್‌ಗಳ (Laptop Import) ಆಮದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ. ಅಲ್ಟ್ರಾ ಸ್ಮಾಲ್‌ ಫ್ಯಾಕ್ಟರ್‌ ಕಂಪ್ಯೂಟರ್‌ಗಳ ಆಮದಿಗೂ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಭಾರತದಲ್ಲಿ ಇನ್ನು ಡೆಲ್‌, ಏಸರ್‌, ಸ್ಯಾಮ್‌ಸಂಗ್‌ನಂತಹ ಕಂಪನಿ ಉತ್ಪನ್ನಗಳು ಲಭ್ಯವಾಗುವುದಿಲ್ಲ. HSN 8741 ಕೆಟಗರಿಯ ಉತ್ಪನ್ನಗಳ ಆಮದನ್ನು ನಿರ್ಬಂಧಿಸಲಾಗಿದೆ. ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಸಿಐಎಂಇಐ – CIMEI (ಇಎಸ್‌ಡಿಎಂ ಮತ್ತು ಐಟಿಯಲ್ಲಿನ ಭಾರತೀಯ ಎಂಎಸ್ಎಂಇ ಒಕ್ಕೂಟ) ಶ್ಲಾಘಿಸಿದೆ.

ಕೇಂದ್ರ ಸರ್ಕಾರವು ಕೈಗೊಂಡಿರುವ ನಿರ್ಧಾರವುಸ, ಭಾರತ ಮತ್ತು ಬಿಜೆಪಿ ನೇತೃತ್ವದ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಅನುಗುಣವಾಗಿ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರದ ಉಪಕ್ರಮಗಳಿಗೆ ಬೆಂಬಲಿಸುತ್ತದೆ. ಆಮದು ಮೇಲಿನ ನಿರ್ಬಂಧಗಳು, ಕಂಪ್ಯೂಟರ್, ಲ್ಯಾಪ್ ಟ್ಯಾಪ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಸ್ಥಳೀಯ ತಯಾರಕರಿಗೆ ಉತ್ತೇಜನವನ್ನು ನೀಡುತ್ತದೆ ಎಂದು ಸಿಐಎಂಇಐ ಒಕ್ಕೂಟದ ಪ್ರಧಾನ ನಿರ್ದೇಶಕರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರದ ನಿರ್ಧಾರದಿಂದ ಮ್ಯಾಕ್‌ಬುಕ್ ಮತ್ತು ಇತರ ಲ್ಯಾಪ್‌ಟ್ಯಾಪ್‌ಗಳ ಬೆಲೆಗಳು ಹೆಚ್ಚಾಗಲಿವೆ. ಭಾರತೀಯ ಬ್ರ್ಯಾಂಡುಗಳನ್ನು ಹತ್ತಿಕ್ಕುವ ಎಂಎನ್‌ಸಿ ಬ್ರ್ಯಾಂಡ್‌ಗಳ ವಿರುದ್ಧ ತನ್ನ ಹೋರಾಟವನ್ನು ಏಕೀಕರಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಡೆಲ್, ಏಸರ್, ಸ್ಯಾಮ್ಸಂಗ್, ಪ್ಯಾನಾಸಾನಿಕ್, ಆ್ಯಪಲ್, ಲೆನೋವೋ, ಎಚ್ ಪಿ ಲೆನೋವೋ ಪ್ರಮುಖ ವಿದೇಶಿ ಕಂಪನಿಗಳಾಗಿವೆ. ಆಗಸ್ಟ್ 3ರಂದು ಭಾರತೀಯ ಸರ್ಕಾರವು ತಕ್ಷಣಕ್ಕೆ ಜಾರಿಗೆ ಬರುವಂತೆ ಲ್ಯಾಪ್ ಟ್ಯಾಪ್, ಟ್ಯಾಬ್ಲೆಟ್ ಮತ್ತು ಎಚ್‌ಎಸ್‌ಎನ್ 8741 ಕೆಟಗರಿಯಲ್ಲಿ ಬರುವ ಪರ್ಸನಲ್ ಕಂಪ್ಯೂಟರ್ಸ್ ಆಮದವನ್ನು ನಿರ್ಬಂಧಿಸಿದೆ. ಸರ್ಕಾರದ ಅಧಿಸೂಚನೆಯ ಪ್ರಕಾರ, ನಿರ್ಬಂಧಿಸಲಾದ ವಸ್ತುಗಳನ್ನು ಅಧಿಕೃತ ಅನುಮತಿಯೊಂದಿಗೆ ಆಮದು ಮಾಡಿಕೊಳ್ಳಬಹುದು. ಹಾಗಿದ್ದೂ, ಬ್ಯಾಗೇಜ್ ರೂಲ್ಸ್‌ಗಳ ಅಡಿಯಲ್ಲಿ ಈ ನಿರ್ಬಂಧವು ಅನ್ವಯವಾಗುವುದಿಲ್ಲ ಎಂದು ಸಿಐಎಂಇಐ ಹೇಳಿದೆ.

ಒಂದು ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್‌ಗೆ ಆಮದು ಪರವಾನಗಿಯಿಂದ ವಿನಾಯಿತಿಯನ್ನು ನೀಡಲಾಗಿದೆ. ಪರ್ಸನಲ್ ಕಂಪ್ಯೂಟರ್ ಅಥವಾ ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್, ಖರೀದಿಸಿದವರು ಸೇರಿದಂತೆ ಇ-ಕಾಮರ್ಸ್ ಪೋರ್ಟಲ್‌ಗಳಿಂದ, ಪೋಸ್ಟ್ ಅಥವಾ ಕೊರಿಯರ್ ಮೂಲಕ, ಅನ್ವಯಿಸುವ ಸುಂಕಕ್ಕೆ ಒಳಪಟ್ಟಿರುತ್ತದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಭಾರತಕ್ಕೆ ಪ್ರವೇಶಿಸುವ ಅಥವಾ ಹೊರಡುವ ಪ್ರತಿಯೊಬ್ಬ ಪ್ರಯಾಣಿಕರು ಕೆಲವು ಕಸ್ಟಮ್ ಪರೀಕ್ಷೆಗಳನ್ನು ಪೂರೈಸಬೇಕಾಗುತ್ತದೆ. ಇವುಗಳನ್ನು ಬ್ಯಾಗೇಜ್ ನಿಯಮಗಳು ಎಂದೂ ಕರೆಯಲಾಗುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ, ಟೆಸ್ಟಿಂಗ್, ಮಾನದಂಡ ಮತ್ತು ಮೌಲ್ಯಮಾಪನ, ದುರಸ್ತಿ ಮತ್ತು ಮರು-ಆಮದು ಮತ್ತು ಉತ್ಪಾದನಾ ಅಭಿವೃದ್ಧಿ ಉದ್ದೇಶಕ್ಕಾಗಿ 20 ವಸ್ತುಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧದಿಂದ ವಿನಾಯ್ತಿ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Laptop Import: ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌ ಆಮದು ನಿರ್ಬಂಧಿಸಿದ ಕೇಂದ್ರ ಸರ್ಕಾರ; ಏನಿದಕ್ಕೆ ಕಾರಣ?

ಹೇಳಲಾದ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವುದು ಮತ್ತು ಮಾರಾಟ ಮಾಡಲಾಗುವುದಿಲ್ಲ ಎಂದರೆ ಮಾತ್ರವೇ ಆಮದು ಮಾಡಿಕೊಳ್ಳುವ ಸರಕುಗಳ ಷರತ್ತಿಗೆ ಒಳಪಟ್ಟು ಆಮದುಗಳನ್ನು ಅನುಮತಿಸಲಾಗುತ್ತದೆ. ಉದ್ದೇಶಿತ ಕಾರ್ಯ ಪೂರ್ಣಗೊಂಡ ಬಳಿಕ ಅಂಥ ವಸ್ತುಗಳನ್ನು ನಾಶಪಡಿಸಲಾಗುತ್ತದೆ ಇಲ್ಲವೇ ಅವರು ಮರು ರಫ್ತು ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಸಿಐಎಂಇಐ ತನ್ನ ಹೇಳಿಕೆಯಲ್ಲಿ ವಿವರಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version