Site icon Vistara News

CET Result | ರಿಪೀಟರ್ಸ್‌ ಪ್ರತಿಭಟನೆ; ಕೆಇಎ ಬಳಿ ಬಿಗಿ ಪೊಲೀಸ್‌ ಭದ್ರತೆ

ಸಿಇಟಿ

ಬೆಂಗಳೂರು: ಸಿಇಟಿ ಫಲಿತಾಂಶದಲ್ಲಿ (CET Result) ಅನ್ಯಾಯವಾಗಿದೆ ಎಂದು ನೂರಾರು ರಿಪೀಟರ್ಸ್‌ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮುನ್ನೆಚ್ಚರಿಕೆ ಕ್ರಮವಾಗಿ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಬಳಿ ಪೊಲೀಸ್‌ ಬಿಗಿಭದ್ರತೆ ನಿಯೋಜಿಸಲಾಗಿದೆ.

ಸೋಮವಾರ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಇಎ ಮುಂದೆ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಮತ್ತೆ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ನೂರಕ್ಕೂ ಹೆಚ್ಚು ಪೋಲಿಸರು ಹಾಗೂ ಎರಡು ಬಿಎಂಟಿಸಿ ಬಸ್‌ಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | ಪೆನ್ಸಿಲ್‌ ಕೇಳಿದ್ರೆ ಅಮ್ಮ ಹೊಡೀತಾಳೆ, ಬೆಲೆ ಇಳಿಸಿ! ಪಿಎಂ ಮೋದಿಗೆ ವಿದ್ಯಾರ್ಥಿನಿ ಪತ್ರ

ಸಿಇಟಿ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಪಿಯುಸಿ ಅರ್ಹತಾ ಅಂಕವನ್ನು ಪರಿಗಣಿಸದೆ ಇರುವ ಕಾರಣ ಕೆಇಎ ವಿರುದ್ಧ ಸಿಇಟಿ ರಿಪೀಟರ್ಸ್‌ ಸೋಮವಾರ ಪ್ರತಿಭಟನೆ ನಡೆಸಿದ್ದರು. 2020-21ನೇ ಸಾಲಿನ ವಿದ್ಯಾರ್ಥಿಗಳ ಅರ್ಹತಾ ಅಂಕಗಳನ್ನು ಪರಿಗಣಿಸದಿದ್ದರಿಂದ ಸಿಇಟಿ ಫಲಿತಾಂಶದಲ್ಲಿ ಭಾರಿ ವ್ಯತ್ಯಾಸವಾಗಿದೆ. ಸಿಬಿಎಸ್‌ಸಿ ಹಾಗೂ ಪಿಯು ಪರೀಕ್ಷೆಯ ಎರಡು ಅಂಕಗಳನ್ನು ಗಣನೆಗೆ ತೆಗೆದುಕೊಂಡಿರುವಂತೆ ನಮಗೂ ಪರಿಗಣಿಸಿ ಎಂದು ರಿಪೀಟರ್ಸ್‌ ವಿದ್ಯಾರ್ಥಿಗಳು (CET) ಆಗ್ರಹಿಸಿದ್ದರು.

ಕೆಇಎ ಸ್ಪಷ್ಟನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಸರ್ಕಾರದ ಆದೇಶದ ಪ್ರಕಾರ 2021ರ ವಿದ್ಯಾರ್ಥಿಗಳ ಅರ್ಹತಾ ಅಂಕಗಳನ್ನು 2021-22ರ ಶೈಕ್ಷಣಿಕ ವರ್ಷಕ್ಕೆ ಸಿಇಟಿ ರ‍್ಯಾಂಕಿಂಗ್‌ ಪರಿಗಣಿಸಲಾಗಿಲ್ಲ ಹಾಗೂ 2022-23ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲೂ ಪರಿಗಣಿಸುವುದಿಲ್ಲ ಎಂದು ಜುಲೈ 30ರಂದು ಸ್ಪಷ್ಟಪಡಿಸಿತ್ತು. ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸುವಂತೆ ರಿಪೀಟರ್ಸ್ ಮನವಿ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ನಿಯಮಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ಕೆಇಎ ತಿಳಿಸಿತ್ತು.

ಇದನ್ನೂ ಓದಿ | CET protest | ಕೆಇಎ ನಡೆ ವಿರೋಧಿಸಿ ಮತ್ತೊಮ್ಮೆ ಬೀದಿಗಿಳಿದ ರಿಪೀಟರ್ಸ್‌

Exit mobile version