Site icon Vistara News

Elephant attack | ರಾತ್ರಿ ಹೊಲ ಕಾಯುವಾಗ ಒಂಟಿ ಸಲಗ ತುಳಿದು ರೈತನ ಸಾವು

elephant

ಚಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರ ಗ್ರಾಮದ ಜಮೀನಿನಲ್ಲಿ ನೆಲಗಡಲೆ ರಕ್ಷಣೆಗೆ ತೆರಳಿದ್ದ ರೈತನೊಬ್ಬನನ್ನು ತುಳಿದು ಒಂಟಿ ಸಲಗ (Elephant attack) ಸಾಯಿಸಿದೆ. ಬೆಳ್ಳಶೆಟ್ಟಿ (52) ಮೃತ ರೈತ.

ಗುರುವಾರ ರಾತ್ರಿ ಕಾಡು ಹಂದಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಗಳಿಂದ ನೆಲಗಡಲೆ ರಕ್ಷಿಸಲು ಹೋಗಿದ್ದ ರೈತ, ಕಾವಲು ಕಾಯುವ ಸಮಯದಲ್ಲಿ ಬೆಳಗಿನ ಜಾವ 3 ಗಂಟೆಗೆ ಆನೆ ದಾಳಿಗೆ ಒಳಗಾಗಿದ್ದಾನೆ. ತಂದೆಯನ್ನು ಕಾಪಾಡಲು ಹೋಗಿ ಮಗ ಮಹೇಶ್ ಕೂಡ ಗಾಯಗೊಡಿದ್ದಾನೆ. ಇದರಿಂದ ಕುಟುಂಬಸ್ಥರ ಸಂಕಟ, ನೋವು ಮುಗಿಲು ಮುಟ್ಟಿದೆ.

ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಪದೇ ಪದೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ರೈತರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಾಡು ಪ್ರಾಣಿಗಳಿಂದ ಶಾಶ್ವತವಾಗಿ ರಕ್ಷಣೆ ನೀಡುವಂತೆ ಈ ವೇಳೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ| ಮಂಡ್ಯದಲ್ಲಿ ಸಾಲಬಾಧೆ ತಾಳಲಾರದೆ ರೈತನ ಆತ್ಮಹತ್ಯೆ

Exit mobile version