ಚಾಮರಾಜನಗರ: ಮಳೆ ಪ್ರವಾಹ ಅನುಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೂದಿತಿಟ್ಟು, ಕೆಸ್ತೂರು ಗ್ರಾಮದಲ್ಲಿ ಮಳೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಶಾಸಕ ಮಹೇಶ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆಯಿಂದ ಪ್ರವಾಹ ಬಂದು ಗ್ರಾಮದ ಮನೆಗಳು ಮುಳುಗಡೆಯಾಗಿವೆ. ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಗೆದ್ದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಬರ್ತಿದ್ದೀರಿ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಇದಕ್ಕೇನಾ ನಾವು ಮತ ಹಾಕಿ ನಿಮ್ಮನ್ನು ಗೆಲ್ಲಿಸಿದ್ದು ಎಂದು ಗ್ರಾಮಸ್ಥರು ಟೀಕಿಸಿದ್ದಾರೆ.
ಪ್ರವಾಹ ಬಂದಿದ್ದು ಅಚಾನಕ್ ಆಗಿ. ಮೊದಲು ಈ ಸಮಸ್ಯೆ ಬಗೆಹರಿಸೋಣ. ನಂತರ ಇತರ ಸಮಸ್ಯೆ ಪರಿಹಾರ ನೋಡೋಣ ಎಂದು ಶಾಸಕರು ಆಶ್ವಾಸನೆ ನೀಡಿದ್ದಾರೆ. ಆಗ ಗ್ರಾಮಸ್ಥರು, 5 ವರ್ಷದಿಂದ ನೀವೇನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಗ್ರಾಮದಿಂದ ಮದ್ದೂರಿಗೆ ತೆರಳುವ ರಸ್ತೆಯನ್ನೂ ರಿಪೇರಿ ಮಾಡಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು ನಂತರ ಶಾಸಕರು ಗ್ರಾಮದಿಂದ ತೆರಳಿದ್ದಾರೆ.
ಇದನ್ನೂ ಓದಿ | Heavy Rain | ಚಾಮರಾಜನಗರದ ಮಳೆ ನೀರಿಗೆ ಕೊಚ್ಚಿ ಹೋದ ತೆಂಗಿನಕಾಯಿ; ಆರಕ್ಷಕರಿಗೆ ಜಲ ದಿಗ್ಭಂಧನ