ಗುಂಡ್ಲುಪೇಟೆ : ಸೀಬೆಹಣ್ಣನ್ನು ಕೀಳಲು ಹೋಗಿ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಸಹೋದರಿಯರಿಬ್ಬರು ಸಾವಿಗೀಡಾದ ಘಟನೆ ಕಿಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ರೇಚಪ್ಪಾ ಮತ್ತು ವೇದಾ ದಂಪತಿಯ ಪುತ್ರಿಯರಾದ ಪೂಜಿತಾ(14) ಮತ್ತು ಪುಣ್ಯ (12) ಮೃತಪಟ್ಟ ಸಹೋದರಿಯರು. ಪೂಜಿತಾ 8ನೇ ತರಗತಿಯಲ್ಲಿ ಓದುತ್ತಿದ್ದರೆ, ಪುಣ್ಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಮಕ್ಕಳು ಹೊರಹೋಗಿ ಬಾರದಿದ್ದ ಹಿನ್ನಲೆಯಲ್ಲಿ ಪೋಷಕರು ಕೃಷಿ ಹೊಂಡದ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ರೇಚಪ್ಪ ಅವರ ಕುಟುಂಬ ಜಮೀನಿನ ಮನೆಯಲ್ಲಿ ವಾಸವಿದೆ. ಸಹೋದರಿಯರಿಬ್ಬರು ಬೆಳಿಗ್ಗೆ ಮನೆಯಿಂದ ತಿಂಡಿ ತಿಂದು ಸೀಬೆ ಹಣ್ಣನ್ನು ತಿನ್ನಲು ತೆರಳಿದ್ದರು. ಸೀಬೆ ಮರದಲ್ಲಿದ್ದ ಹಣ್ಣು ಕೀಳಲು ಮರ ಹತ್ತಿದ್ದಾರೆ. ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದರು. ನೀರಿನಿಂದ ಮೇಲಕ್ಕೆ ಬರಲಾರದೇ ಮೃತಟ್ಟಿದ್ದಾರೆ. ಈಗಾಗಲೇ ಮೃತದೇಹವನ್ನು ಕೃಷಿ ಹೊಂಡದಿಂದ ಮೇಲಕ್ಕೆ ಹೊರತೆಗೆಯಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ | ನ್ಯಾಯ ಪಡೆಯಲು ಅನ್ಯಾಯದ ಮಾರ್ಗ ಹಿಡಿದರು: ವೃದ್ಧನ ಮನೆಯಲ್ಲಿ ₹2 ಕೋಟಿ ಕದ್ದರು