Site icon Vistara News

Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ

Aryaman Ashok Shankar

ಬೆಂಗಳೂರು : ಯುವ ಉದ್ಯಮಿ ಆರ್ಯಮನ್​ ಅಶೋಕ್ ಶಂಕರ್ ಅವರು ಕೊಳ್ಳೆಗಾಲದಲ್ಲಿರುವ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ (Seventh-Day Adventist School for Speech and Hearing) ಶಾಲೆಗೆ ಕ್ರೀಡಾ ಪರಿಕರಗಳು ಸೇರಿದಂತೆ ಹಲವು ವಸ್ತುಗಳನ್ನು ( Social Sevice) ವಿತರಿಸಿದರು. ದಿ. ಸಾವಿತ್ರಮ್ಮ ಟ್ರಸ್ಟ್​​ನ ಸಮಾಜ ಸೇವಾ ಕಾರ್ಯದ ಮುಂದುವರಿದ ಭಾಗವಾಗಿ ಅವರು ಶ್ರವಣ ಮತ್ತು ವಾಕ್​ದೋಷ ಇರುವ ಮಕ್ಕಳ ಆಶ್ರಮಕ್ಕೆ ಪರಿಕರಗಳನ್ನು ನೀಡಿದರು.

ಆರ್ಯಮನ್ ಅಶೋಕ್ ಶಂಕರ್​ ಅವರು ಉದ್ಯಮಿ ಸುನಿತಾ ತಿಮ್ಮೇಗೌಡ ಮತ್ತು ಅಶೋಕ್ ಶಂಕರ್ ಅವರ ಪುತ್ರ. ಸಿಂಗಾಪುರದಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಕಲಿಕೆಯ ಅವಧಿಯಲ್ಲಿಯೇ ಬಿಲೇನಿಯರ್ ಎನಿಸಿಕೊಂಡಿದ್ದಾರೆ. ಅವರು ಸಮಾಜ ಸೇವೆಗಾಗಿ ಕೊಳ್ಳೇಗಾಲದ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೇಂದ್ರಕ್ಕೆ ತೆರಳಿದ ಅವರು ಅಲ್ಲಿನ ಮಕ್ಕಳೊಂದಿಗೆ ಕಾಲ ಕಳೆದು ಪರಿಕರಗಳನ್ನು ವಿತರಿಸಿದರು.

ಯುವ ಉದ್ಯಮಿ ಆರ್ಯಮನ್‌ ಅವರು 11ನೇ ವರ್ಷದಲ್ಲಿ ಸಿಂಗಾಪುರಕ್ಕೆ ಶಿಕ್ಷಣಕ್ಕಾಗಿ ತೆರಳಿದ್ದರು. ವಿದ್ಯಾಭ್ಯಾಸದ ಅವಧಿಯಲ್ಲೇ ಅವರು ಉದ್ಯಮ ಕ್ಷೇತ್ರಕ್ಕೆ ಧುಮುಕಿದ್ದರು .13ನೇ ವರ್ಷದಲ್ಲಿ ಅವರು ಲಿಮಿಟೆಡ್​ ಎಡಿಷನ್​ ಶೂಗಳ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಆದಾಯ ಗಳಿಸಲು ಆರಂಭಿಸಿದ್ದರು. ಇದೀಗ 1000 ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮಿಯಾಗಿದ್ದಾರೆ. ತಮ್ಮ ಗಳಿಕೆಯಲ್ಲಿ ಸಮಾಜ ಸೇವೆಗೆ ಮೀಸಲಿಡುವ ಕುಟುಂಬದ ಪರಂಪರೆಯಂತೆ ಅವರು ಆಶ್ರಮಕ್ಕೆ ಕೊಡುಗೆಗಳನ್ನು ಕೊಟ್ಟಿದ್ದಾರೆ.

ಆರ್ಯಮನ್​ ಅವರು ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಜಪಾನ್ ದೇಶದ ಸಹಪಾಠಿಗಳಿದ್ದರು. ಅವರೆಲ್ಲರೂ ಉತ್ತಮ ಗೆಳೆಯರಾಗಿದ್ದಾರೆ. ಆ ಅವರು ಕೂಡ ಕೊಳ್ಳೆಗಾಲಕ್ಕೆ ಆರ್ಯಮನ್ ಅವರ ಜತೆ ಪ್ರಯಾಣಿಸಿದ್ದಾರೆ. ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕೇಂದ್ರದಲ್ಲಿ ಆರ್ಯಮನ್ ಅವರೊಂದಿಗೆ ಸಮಯ ಕಳೆದಿದ್ದಾರೆ.

ಇದನ್ನೂ ಓದಿ : Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

ಉದ್ಯಮ ಪರಿಣತ ಕುಟುಂಬದ ಕುಡಿಯಾಗಿರುವ ಆರ್ಯಮನ್ ಅಶೋಕ್​ ಅವರು ಉದ್ಯಮ ಕ್ಷೇತ್ರವನ್ನು ಬಾಲ್ಯದಲ್ಲಿಯೇ ಕರಗತ ಮಾಡಿಕೊಂಡಿದ್ದಾರೆ. ಎಳೆವೆಯಲ್ಲಿಯೇ ಉದ್ಯಮದ ಮೂಲಕ ಯಶಸ್ಸು ಸಾಧಿಸಿರುವ ಅವರು ತಮ್ಮ ಕುಟುಂಬದ ಪರಂಪರೆಯಂತೆ ಸಮಾಜಸೇವೆ ಕಾರ್ಯವನ್ನೂ ಮುಂದುವರಿಸಿಕೊಂಡು ಹೋಗುವ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ.

ಆರ್ಯಮನ್ ಅಶೋಕ್ ಅವರ ತಾಯಿ ಹಾಗೂ ಖ್ಯಾತ ಉದ್ಯಮಿ ಸನಿತಾ ತಿಮ್ಮೇಗೌಡ ಅವರು ಕೂಡ ಸೆವೆನ್ತ್-ಡೇ ಅಡ್ವೆಂಟಿಸ್ಟ್ ಸ್ಕೂಲ್ ಫಾರ್ ಸ್ಪೀಚ್ ಆ್ಯಂಡ್ ಹಿಯರಿಂಗ್ (Seventh-Day Adventist School for Speech and Hearing) ಕೇಂದ್ರಕ್ಕೆಸಾಕಷ್ಟು ನೆರವು ಕೊಟ್ಟಿದ್ದಾರೆ. ಅವರ ಸಾಮಾಜಿಕ ಸೇವೆಗಳಿಗಾಗಿ ಕೇಂದ್ರದ ಪ್ರಿನ್ಸಿಪಾಲ್​ ಅಭಿನಂದನೆಗಳನ್ನು ಕೂಡ ಸಲ್ಲಿಸಿದ್ದಾರೆ.

Exit mobile version