Site icon Vistara News

Chamarajnagar Farmers: ರಸ್ತೆಯಲ್ಲಿ ಹೋಗುವವರಿಗೆ ಕಾಸಿಲ್ಲದೆ ಕೊಟ್ಟರು ಎಲೆಕೋಸು; ಪಿಎಂ, ಸಿಎಂಗೂ ಕೊರಿಯರ್‌ ಮಾಡಿದ ರೈತರು

Cabbage prices fall, farmers distribute it free of cost

Cabbage prices fall, farmers distribute it free of cost

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ರೈತರ ಗೋಳು ಕೇಳುವವರೇ ಇಲ್ಲ ಎನ್ನುವಂತಾಗಿದೆ. ಲಕ್ಷ ಲಕ್ಷ ಬಂಡವಾಳ ಹಾಕಿ ಬೆಳೆದ ಎಲೆಕೋಸಿಗೆ ಮಾರುಕಟ್ಟೆಯಲ್ಲಿ (Chamarajnagar Farmers) ಸರಿಯಾದ ಬೆಲೆ ಸಿಗದೆ ರೈತರು ಕಂಗಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹೋಗಿಬರುವ ಜನರಿಗೆಲ್ಲ ರೈತರು ಉಚಿತವಾಗಿ ಎಲೆಕೋಸನ್ನು ಕೊಟ್ಟು ಕಳುಹಿಸುತ್ತಿದ್ದಾರೆ.

Cabbage prices fall, farmers distribute it free of cost

ಗುಂಡ್ಲುಪೇಟೆ ತರಕಾರಿ ಮಾರುಕಟ್ಟೆಯಲ್ಲಿ ಎಲೆಕೋಸು ಬೆಳೆದ ರೈತರ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್‌ಗೆ ಎಲೆಕೋಸು ಕೊರಿಯರ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಇಷ್ಟು ಮಾತ್ರವಲ್ಲದೇ ತಾವು ಬೆಳದ ಎಲೆಕೋಸನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗದೆ, ನಡುರಸ್ತೆಯಲ್ಲಿ ನಿಂತು ಹೋಗಿ ಬರುವ ವಾಹನಗಳನ್ನು ತಡೆದು ಉಚಿತವಾಗಿ ಎಲೆಕೋಸು ವಿತರಣೆ ಮಾಡಿದ್ದಾರೆ. ಒಂದು ಕೆಜಿ ಎಲೆಕೋಸಿನ ಬೆಲೆ ಕೇವಲ 75 ಪೈಸೆ ಇದೆ. ಜಮೀನಿಂದ ತರಕಾರಿ ಮಾರುಕಟ್ಟೆಗೆ ಎಲೆಕೋಸು ಸಾಗಣೆಯ ಬಾಡಿಗೆಯೂ ಸಿಗದೆ ರೈತರು ಹತಾಶರಾಗಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಹಾಕದೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಉಚಿತವಾಗಿ ಹಂಚಿದ್ದಾರೆ.

ಇದನ್ನೂ ಓದಿ: Medical Negligence: ಜ್ವರ ಎಂದು ಆಸ್ಪತ್ರೆ ಸೇರಿದವನಿಗೆ ಸರ್ಜರಿ; ರಕ್ತಸ್ರಾವವಾಗಿ ಮೃತಪಟ್ಟ ಯುವಕ

Exit mobile version