ಬೆಂಗಳೂರು: ʼಛಂದ ಪುಸ್ತಕʼ ಪ್ರಕಾಶನ ಸಂಸ್ಥೆಯಿಂದ (Chanda Pustaka) ಏಪ್ರಿಲ್ 2ರಂದು ಬೆಳಗ್ಗೆ 10.30 ಗಂಟೆಗೆ ʼಛಂದ ಪುಸ್ತಕ ಸಡಗರʼವನ್ನು ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಛಂದ ಪುಸ್ತಕ ಬಹುಮಾನ-2021 ಪ್ರದಾನ ಹಾಗೂ ಎರಡು ಪುಸ್ತಕ ಬಿಡುಗಡೆ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಯುವ ಬರಹಗಾರ್ತಿ ಕಾವ್ಯಾ ಕಡಮೆ ರಚನೆಯ ʼಮಾಕೋನ ಏಕಾಂತʼ ಪುಸ್ತಕಕ್ಕೆ ಛಂದ ಪುಸ್ತಕ ಬಹುಮಾನ-2021 ಪ್ರದಾನ ಮಾಡಲಾಗುತ್ತದೆ. ಇದೇ ವೇಳೆ ಯುವ ಬರಹಗಾರ ಶಶಿ ತರೀಕೆರೆ ರಚನೆಯ ʼತಿರಾಮಿಸುʼ ಕಥಾಸಂಕಲನ ಹಾಗೂ ಮರಾಠಿ ಭಾಷೆಯಲ್ಲಿ ಸಚಿನ್ ಕುಂಡಲ್‌ಕರ್ ರಚಿಸಿರುವ, ಲೇಖಕಿ ಸಪ್ನಾ ಕಟ್ಟಿ ಅವರು ಕನ್ನಡಕ್ಕೆ ಅನುವಾದಿಸಿರುವ ʼಕೋಬಾಲ್ಟ್ ಬ್ಲೂʼ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ.
ಇದನ್ನೂ ಓದಿ | Literature Award: ಕತೆಗಾರ ದಯಾನಂದ ರಚನೆಯ ‘ಬುದ್ಧನ ಕಿವಿ’ಗೆ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ
ಮುಖ್ಯ ಅತಿಥಿಗಳಾಗಿ ಡಾ.ಎಂ.ಎಸ್. ಆಶಾದೇವಿ, ಅಲಕ ತೀರ್ಥಹಳ್ಳಿ, ಇಂದ್ರಕುಮಾರ್ ಎಚ್.ಬಿ ಆಗಮಿಸಲಿದ್ದಾರೆ. ಕಾವ್ಯಾ ಕಡಮೆ, ಶಶಿ ತರೀಕೆರೆ ಹಾಗೂ ಸಪ್ನಾ ಕಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಛಂದ ಪುಸ್ತಕ ಪ್ರಕಾಶನದ ವಸುಧೇಂದ್ರ ಅವರು ತಿಳಿಸಿದ್ದಾರೆ.