ಸೊರಬ: ಉತ್ತರ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಉತ್ತರ ಕರ್ನಾಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರವಾರ ಇವರ ಸಹಯೋಗದಲ್ಲಿ 77ನೇ ಸ್ವಾತಂತ್ರೋತ್ಸವದ (77th Independence Day) ಅಂಗವಾಗಿ ಕಾರವಾರ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ ಶಾಲಾ ವಿಭಾಗ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ (Chess competition) ಸೊರಬ (Soraba) ತಾಲೂಕಿನ ಚಂದ್ರಗುತ್ತಿ ಗ್ರಾಮದ (Chandragutti) ವಿದ್ಯಾರ್ಥಿನಿ ನಿರೀಕ್ಷಾ ಪ್ರಥಮ ಸ್ಥಾನ ಪಡೆದು 10 ಸಾವಿರ ರೂ. ಬಹುಮಾನ ಗಳಿಸಿದ್ದಾರೆ. ಕಾರವಾರದ ಶಾಸಕ ಸತೀಶ್ ಸೈಲ್ ವಿದ್ಯಾರ್ಥಿನಿ ನಿರೀಕ್ಷಾ ಗೆ ಬಹುಮಾನ ವಿತರಿಸಿ, ಅಭಿನಂದಿಸಿದರು.
ಚಂದ್ರಗುತ್ತಿ ಗ್ರಾಮದ ಗ್ರಾಪಂ ಸದಸ್ಯೆ ಶ್ರೀಮತಿ ಮತ್ತು ಚಂದ್ರಕಾಂತ ದಂಪತಿ ಅವರ ಪುತ್ರಿ ನಿರೀಕ್ಷಾ ಸಿದ್ದಾಪುರ ತಾಲೂಕಿನ ಲಿಟಲ್ ಫ್ಲವರ್ ಶಾಲೆಯಲ್ಲಿ 6ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು. ಸಿದ್ದಾಪುರ ತಾಲೂಕು ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲಾ ಮಟ್ಟದಲ್ಲೂ ಕೂಡ ಪ್ರಥಮ ಸ್ಥಾನಗಳಿಸಿದ್ದು ಚಂದ್ರಗುತ್ತಿ ಗ್ರಾಮಸ್ಥರಿಂದ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
ಇದನ್ನೂ ಓದಿ; Minimum Wages: ಗ್ರಾಪಂ ಗ್ರಂಥಪಾಲಕರಿಗೆ ಕನಿಷ್ಠ ವೇತನ ನಿಗದಿ ಪಡಿಸಿ ರಾಜ್ಯ ಸರ್ಕಾರ ಆದೇಶ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾವುದೇ ರೀತಿಯ ತರಬೇತಿ ಇಲ್ಲದೆ ತನ್ನ ಬುದ್ಧಿ ಶಕ್ತಿಯಿಂದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ, ಚಂದ್ರಗುತ್ತಿ ಗ್ರಾಮದ ನಿರೀಕ್ಷಾ ಕಾರವಾರ ಜಿಲ್ಲಾ ಮಟ್ಟದಲ್ಲಿ ನಡೆದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಶ್ಲಾಘನೀಯ ಎಂದು ಚಂದ್ರಗುತ್ತಿ ಗ್ರಾ.ಪಂ. ಉಪಾಧ್ಯಕ್ಷ ಎಂ.ಬಿ ರೇಣುಕಾ ಪ್ರಸಾದ್ ತಿಳಿಸಿದ್ದಾರೆ.