ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಚಂದ್ರಯಾನ 3 (Chandrayaan 3) ಯಶಸ್ವಿಯಾಗಿ ಮುನ್ನಡೆಸಿದ ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ (ISRO Chairman Dr S Somnath) ಅವರನ್ನು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅಭಿನಂದಿಸಿದರು.
ಚಂದ್ರಯಾನ 3 ಮಿಷನ್ ಸಂಬಂಧ ಚಂದ್ರಯಾನ-3 ನೌಕೆಯನ್ನು ಹೊತ್ತ ಜಿಎಸ್ಎಲ್‌ವಿ ಮಾರ್ಕ್ 3 ರಾಕೆಟ್ (GSLV Mark III rocket) ಅನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. ಭವಿಷ್ಯದ ಶೋಧನೆಗಳಿಗೆ ಚಂದ್ರಯಾನ-3 ನೌಕೆ ಲ್ಯಾಂಡಿಂಗ್ ಮಹತ್ವದ್ದಾಗಿದೆ. ಈ ಯಶಸ್ಸಿನ ಹಿಂದೆ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ ಅವರು ಶ್ರಮ ಬಹಳವೇ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ (Rashtrotthana parishat) ಸನ್ಮಾನ ಮಾಡಲಾಯಿತು. ಇಸ್ರೋ ತಂಡದ ಪರಿಶ್ರಮಕ್ಕೆ ಅಭಿನಂದನೆಯನ್ನು ಸಲ್ಲಿಸಲಾಯಿತು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಇದ್ದರು.
ಇದನ್ನೂ ಓದಿ: LIC Jeevan Azad Policy : 20 ವರ್ಷದ ಪ್ಲಾನ್‌ಗೆ ಕೇವಲ 12 ವರ್ಷ ಪ್ರೀಮಿಯಂ, ಇಲ್ಲಿದೆ ಡಿಟೇಲ್ಸ್
ಚಂದ್ರಯಾನ-3 ತುಂಬಾ ಮಹತ್ವದ ಹೆಜ್ಜೆಯಾಗಿದೆ. ಅದು ಲ್ಯಾಂಡಿಂಗ್ ಸಮಯವೂ ಅಷ್ಟೇ ಮಹತ್ವದ್ದಾಗಿದೆ. ನೀವು ಸರಿಯಾಗಿ ಲ್ಯಾಂಡ್ ಆಗದಿದ್ದರೆ, ನೀವು ಯಾವುದೇ ಸ್ಯಾಂಪಲ್ ತೆಗೆದುಕೊಳ್ಳಲಾಗುವುದಿಲ್ಲ, ಮಾನವರನ್ನು ಅಲ್ಲಿಗೆ ಕಳುಹಿಸಲಾಗುವುದಿಲ್ಲ. ಅಲ್ಲದೆ, ಚಂದ್ರನಲ್ಲಿ ನೆಲೆ ಕೂಡ ಸ್ಥಾಪಿಸಲು ಆಗುವುದಿಲ್ಲ. ಹಾಗಾಗಿ ಚಂದ್ರಯಾನ-3 ನೌಕೆ ಲ್ಯಾಂಡ್ ಆಗುವುದು ಬಹಳ ಮಹತ್ವದ್ದಾಗಿದೆ ಎಂದು ಇಸ್ರೋ ಮುಖ್ಯಸ್ಥರು ಉಡಾವಣೆ ಸಂದರ್ಭದಲ್ಲಿ ಹೇಳಿದ್ದರು.
ಈಗಾಗಲೇ ಚಂದ್ರಯಾನ-3 ನೌಕೆಯ ಮೂರನೇ ಕಕ್ಷೆ ಎತ್ತರಿಸುವ (Orbit-Raising Manoeuvre) ಕೆಲಸವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯು ಯಶಸ್ವಿಯಾಗಿ ಪೂರೈಸಿದೆ. ಮುಂದಿನ ಕಕ್ಷೆ ಏರಿಸುವ ಪ್ರಕ್ರಿಯೆಯು ಜುಲೈ 20ರಂದು ನಡೆಯುತ್ತಿದೆ. 5 ಬಾರಿ ಭೂಮಿಯನ್ನು ಸುತ್ತ ಹಾಕಲಿರುವ ಚಂದ್ರಯಾನ ನೌಕೆ ಬಳಿಕ ಭೂಮಿಯ ಗುರುತ್ವಾಕರ್ಷಣೆಯಿಂದ ಬೇರ್ಪಡಲಿದೆ ಎಂದು ಇಸ್ರೋ ಹೇಳಿದೆ.
ಮೂರನೇ ಕಕ್ಷೆ ಏರಿಸುವ ಪ್ರಕ್ರಿಯೆಯನ್ನು (ಭೂಮಿಗೆ ಸುತ್ತುವರಿದ ಪೆರಿಜಿ ಫೈರಿಂಗ್) ISTRAC (ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್) ಇಸ್ರೋದ ಬೆಂಗಳೂರು ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಇಸ್ರೋ ತಿಳಿಸಿತ್ತು.
ವಿಜ್ಞಾನಿ ಎಸ್. ಸೋಮನಾಥ್ ಯಾರು?
ಇಸ್ರೋ ಮುಖ್ಯಸ್ಥರಾಗಿರುವ ರಾಕೆಟ್ ವಿಜ್ಞಾನಿ ಎಸ್. ಸೋಮನಾಥ್ ಅವರು ಕೇರಳ ಮೂಲದವರು. ಇಸ್ರೋದ ನೇತೃತ್ವ ವಹಿಸಿರುವ 10ನೇ ವಿಜ್ಞಾನಿಯಾಗಿದ್ದಾರೆ. ಚಂದ್ರಯಾನ – 2 ಯೋಜನೆಯಲ್ಲಿ ಜಿಎಸ್‌ಎಲ್‌ವಿ ಎಂಕೆ – 3 ಲಾಂಚರ್ ನಿರ್ಮಾಣದಲ್ಲಿ ಇವರು ಮಹತ್ವದ ಕೊಡುಗೆಯನ್ನು ನೀಡಿದ್ದರು.
ಇದನ್ನೂ ಓದಿ: HD Kumaraswamy : ಬಿಜೆಪಿ ಲೆಟರ್‌ಹೆಡ್‌ನಲ್ಲಿ ರಾಜ್ಯಪಾಲರಿಗೆ ದೂರು; ಮೊದಲ ಸಹಿಯೇ ಕುಮಾರಸ್ವಾಮಿ, ಸೇರೇಬಿಟ್ರಾ ಹಾಗಿದ್ರೆ?
ಸೋಮನಾಥ್ ಅವರು ಕೊಲ್ಲಂ ಟಿಕೆಎಂ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜತೆಗೆ ಗೋಲ್ಡ್ ಮೆಡಲ್ ವಿಜೇತರಾಗಿದ್ದಾರೆ.