ಯಾದಗಿರಿ: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ -3 (Chandrayaan-3) ವಿಕ್ರಮ್ ಲ್ಯಾಂಡರ್ (Vikram lander) ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ಜಗತ್ತಿನಲ್ಲಿ ದೇಶದ ಹೆಸರು ಕೀರ್ತಿ ಪತಾಕೆ ಹಾರಿಸಿದೆ. ದೇಶದ ಜನರಲ್ಲಿ ಸಂಭ್ರಮ ಮನೆ ಮಾಡಿದ್ದು, ಇಸ್ರೋ ವಿಜ್ಞಾನಿಗಳ ಕಾರ್ಯವನ್ನು ಇಡೀ ಜಗತ್ತು ಕೊಂಡಾಡುತ್ತಿದ್ದರೆ, ಇತ್ತ ಯಾದಗಿರಿ ಜಿಲ್ಲೆಯಲ್ಲಿ ಇಬ್ಬರು ಮಕ್ಕಳಿಗೆ ವಿಕ್ರಮ್ (Vikram) ಹಾಗೂ ಪ್ರಜ್ಞಾನ್ (Pragyan) ಎಂದು ನಾಮಕರಣ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ವಿಕ್ರಮ್ ಲ್ಯಾಂಡರ್ ಹೆಸರು, ಪ್ರಜ್ಞಾನ್ ರೋವರ್ ಹೆಸರನ್ನು ಯಾದಗಿರಿ ಜಿಲ್ಲೆಯಲ್ಲಿ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಲಾಗಿದೆ, ಮಕ್ಕಳಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಎಂದು ಹೆಸರು ನಾಮಕರಣ ಮಾಡುವ ಮೂಲಕ ನಾಟೇಕರ್ ಕುಟುಂಬಸ್ಥರು ವಿಶಿಷ್ಟವಾಗಿ ನಾಮಕರಣ ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ನಾಟೇಕರ್ ಕುಟುಂಬಸ್ಥರ ಇಬ್ಬರೂ ಮಕ್ಕಳಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಎಂದು ಹೆಸರಿಟ್ಟಿದ್ದಾರೆ. ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ಜನಿಸಿದ ಮಕ್ಕಳಿಗೆ ನಾಮಕರಣ ಮಾಡಲಾಗಿದೆ.
ಇದನ್ನೂ ಓದಿ: Smart City: ಇಂದೋರ್ ಮತ್ತೆ ಸ್ಮಾರ್ಟ್ ಸಿಟಿ; ಪಟ್ಟಿಯಲ್ಲಿ ಬೆಂಗಳೂರು ಇದೆಯಾ ನೋಡಿ
ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಗಂಡು ಮಗು ಜುಲೈ 28 ರಂದು ಜನಿಸಿದ್ದು ಈ ಮಗುವಿಗೆ ವಿಕ್ರಮ್ ಎಂದು ಹೆಸರು ಇಡಲಾಗಿದೆ. ಅದೇ ರೀತಿ ನಿಂಗಪ್ಪ ಹಾಗೂ ಶಿವಮ್ಮ ದಂಪತಿಗೆ ಅಗಸ್ಟ್ 24 ರಂದು ಹೆಣ್ಣು ಮಗು ಜನಿಸಿದ್ದು, ಹೆಣ್ಣು ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡಲಾಗಿದೆ. ಅಗಸ್ಟ್ 23 ರಂದು ಚಂದ್ರಯಾನ -3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆದ ನಂತರ ಅ. 24 ರಂದು ಎರಡು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.
ಈ ಬಗ್ಗೆ ವಿಕ್ರಮ್ ಮಗುವಿನ ತಾಯಿ ನಾಗಮ್ಮ ಮಾತನಾಡಿ, ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಜತೆ ಇಸ್ರೋ ವಿಜ್ಞಾನಿಗಳಂತೆ ನಮ್ಮ ಮಕ್ಕಳು ವಿಜ್ಞಾನಿ ಆಗಲೆಂಬ ಕನಸು ಹೊತ್ತು ಮಗನಿಗೆ ವಿಕ್ರಮ್ ಎಂಬ ಹೆಸರು ಇಡಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳಿಗೆ ಲ್ಯಾಂಡರ್ ಹಾಗೂ ರೋವರ್‌ನ ಹೆಸರುಗಳ ಪ್ರತ್ಯೇಕ ಹೆಸರಿಟ್ಟು, ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯ ಮಾಡಿದ್ದಾರೆ. ಎಲ್ಲಾ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ಮಕ್ಕಳಿಗೆ ಹೆಸರು ಇಡಲಾಗಿದೆ. ಮಕ್ಕಳಿಗೆ ಹೆಸರಿಟ್ಟಿದಕ್ಕೆ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.
ಈ ಬಗ್ಗೆ ನಿಂಗಪ್ಪ ಮಾತನಾಡಿ, ಇಸ್ರೋ ವಿಜ್ಞಾನಿಗಳ ಕಾರ್ಯ ಯಶಸ್ವಿಯಾಗಿದ್ದು ತುಂಬಾ ಖುಷಿಯಾಗಿದೆ, ಹೀಗಾಗಿ ನನ್ನ ಮಗಳಿಗೆ ಪ್ರಗ್ಯಾನ್ ಎಂಬ ಹೆಸರು ಇಡಲಾಗಿದೆ. ಮಗಳು ವಿಜ್ಞಾನಿ ಆಗಲಿ ಎಂಬ ಆಸೆಯಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Oldest doctor: 101 ವರ್ಷದ ಜಗತ್ತಿನ ಅತ್ಯಂತ ಹಿರಿಯ ವೈದ್ಯ! ಇವರಿಗೆ ಈಗಲೂ ಕಾಯಕವೇ ಕೈಲಾಸ!
ಮಕ್ಕಳಿಗೆ ದೇವರು, ನಟರ ಹಾಗೂ ಇನ್ನಿತರ ಖ್ಯಾತಿವುಳ್ಳವರ ನಾಮಕರಣ ಮಾಡಲಾಗುತ್ತದೆ, ಆದರೆ ಯಾದಗಿರಿ ಜಿಲ್ಲೆಯ ನಾಟೇಕರ್ ಕುಟುಂಬಸ್ಥರು ವಿಕ್ರಮ್, ಪ್ರಜ್ಞಾನ್ ನ್ ಹೆಸರುಗಳನ್ನು ನಾಮಕರಣ ಮಾಡಿ, ಹೆಸರು ಅಜರಾಮರ ಇರುವಂತೆ ಮಾಡಿದ್ದಾರೆ.